Advertisement
ರೋಹಿತ್ ಅಲಭ್ಯತೆಯ ಕಾರಣದಿಂದ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಉತ್ತಮ ಲಯದಲ್ಲಿ ಕಂಡರು. ಉತ್ತಮ ರಕ್ಷಣಾತ್ಮಕ ಆಟವಾಡುತ್ತಿದ್ದ ರಾಹುಲ್ 74 ಎಸೆತಗಳಲ್ಲಿ 26 ರನ್ ಗಳಿಸಿದರು. ಈ ವೇಳೆ ಮಿಚಲ್ ಸ್ಟಾರ್ಕ್ ಎಸೆತವೊಂದು ರಾಹುಲ್ ರನ್ನು ವಂಚಿಸಿ ಕೀಪರ್ ಅಲೆಕ್ಸ್ ಕ್ಯಾರಿ ಬೊಗಸೆ ಸೇರಿತು.
Related Articles
Advertisement
ರಾಹುಲ್ ಕೂಡಾ ಮೂರನೇ ಅಂಪೈರ್ ತೀರ್ಮಾನಕ್ಕೆ ಅಸಮಾಧಾನಗೊಂಡರು. ಪೆವಿಲಿಯನ್ ಗೆ ಮರಳಿದ ಅವರ ಮುಖಭಾವದಲ್ಲಿ ಅದು ಸ್ಪಷ್ಟವಾಗಿತ್ತು.
ಇದು “ತಂತ್ರಜ್ಞಾನದ ಕಳಪೆ ಪೂರೈಕೆ” ಎಂದು ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಹೇಳಿದರು. ಟಿವಿ ಅಂಪೈರ್ ತನಗೆ ಬಲವಾದ ಸಾಕ್ಷ್ಯ ಸಿಗದಿದ್ದಾಗ ತೀರ್ಪು ಬದಲಿಸಬಾರದಿತ್ತು ಎಂದು ಹೇಳಿದರು.
ಚಾನೆಲ್ ಸೆವೆನ್ ಪ್ರಸಾರದಲ್ಲಿ ಮಾಜಿ ಅಂಪೈರ್ ಸೈಮನ್ ಟೌಫೆಲ್ ಮಾತನಾಡಿದ ಅವರು, “ಅಂಪೈರ್ಗಳು ನಿರ್ಣಾಯಕ ಪುರಾವೆಗಳನ್ನು ಹುಡುಕುತ್ತಿದ್ದಾರೆ. ಅಂಪೈರ್ ಕೇಳುತ್ತಿದ್ದ ಕೆಲವು ಕ್ಯಾಮೆರಾ ಕೋನಗಳನ್ನು ಅವರು ಪಡೆಯಲಿಲ್ಲ. ರಿಚರ್ಡ್ ಇಲ್ಲಿಂಗ್ವರ್ತ್ ಅಲ್ಲಿ ಕಠಿಣ ಕೆಲಸವನ್ನು ಹೊಂದಿದ್ದರು, ಆದರೆ ಈ ಕ್ಯಾಮೆರಾ ಕೋನವು ಬಹುಶಃ ನನಗೆ ಉತ್ತಮವಾಗಿದೆ, ಇದು ಚೆಂಡು ಹೊರಗಿನ ಅಂಚನ್ನು ತಾಗುತ್ತಿದೆ ಎಂದು ತೋರಿಸುತ್ತದೆ. ನನ್ನ ದೃಷ್ಟಿಯಲ್ಲಿ ಚೆಂಡು ಹೊರ ಅಂಚಿಗೆ ಸ್ಪರ್ಷಿಸಿದೆ. ಅದು ಸ್ಕಫ್ ಗುರುತುಗಳನ್ನು ಉಂಟುಮಾಡಿದೆ, ಆದರೆ ನಂತರ ಬ್ಯಾಟ್ ಪ್ಯಾಡ್ ಗೆ ತಾಗಿದೆ. ಹಾಗಾಗಿ ಬ್ಯಾಟರ್ನ ದೃಷ್ಟಿಕೋನದಿಂದ ನಾನು ಯೋಚಿಸುತ್ತೇನೆ, ಅವರು ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಂತೆ ದೊಡ್ಡ ಪರದೆಯ ಮೇಲೆ ಸಾಕ್ಷ್ಯವನ್ನು ನೋಡಲು ಬಯಸುತ್ತಿದ್ದಾರೆ. ರಾಹುಲ್ ಮತ್ತು ರಿಚರ್ಡ್ ಕೆಟಲ್ಬರೋ ಅವರ ಮನಸ್ಸಿನಲ್ಲಿ ಪ್ರಶ್ನಾರ್ಥಕ ಚಿಹ್ನೆ ಇದೆ. ಊಟದ ವಿರಾಮದಲ್ಲಿ ಅಂಪೈರ್ಗಳ ಕೋಣೆಯಲ್ಲಿ ಆಸಕ್ತಿದಾಯಕ ಚರ್ಚೆ ನಡೆಯಲಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.