Advertisement

20 ವರ್ಷದಿಂದ ಮುಚ್ಚಿದ್ದ ಬಿಜಿಎಂಎಲ್‌ಗೆ ಮರುಜೀವ

05:26 PM May 20, 2021 | Team Udayavani |

ಕೆಜಿಎಫ್: ನೂರು ವರ್ಷಗಳ ಹಿಂದೆಯೇ ದೇಶದ ಅತ್ಯಂತ ಸುಸಜ್ಜಿತ ಆಸ್ಪತ್ರೆ ಎಂದೇ ಖ್ಯಾತಿಯಾಗಿ, ನಂತರ 20 ವರ್ಷಗಳಿಂದ ಮುಚ್ಚಿದ ಬಿಜಿಎಂಎಲ್‌ ಆಸ್ಪತ್ರೆಗೆ ಮರುಜೀವ ನೀಡಲಾಗಿದೆ.ಕೇಂದ್ರ ಗಣಿ ಖಾತೆಯ ಸಚಿವ ಪ್ರಹ್ಲಾದ ಜೋಷಿವರ್ಚುವಲ್‌ ಮೀಟ್‌ ಮೂಲಕ ಆಸ್ಪತ್ರೆಗೆ ಬುಧವಾರಮಧ್ಯಾಹ್ನ ಚಾಲನೆ ನೀಡಿದರು. ಜತೆಗೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಮತ್ತು ಆರೋಗ್ಯಸಚಿವ ಸುಧಾಕರ್‌ಕೂಡ ಇದ್ದರು.

Advertisement

300 ಹಾಸಿಗೆಯಾಗಿ ಪರಿವರ್ತನೆ: 1880ರಲ್ಲಿ ಓಡೇನಿಯಲ್‌ ಪ್ರಥಮ ಸ್ಥಾನಿಕ ವೈದ್ಯಾಧಿಕಾರಿಯಾಗಿ10 ಹಾಸಿಗೆಗಳ ಆಸ್ಪತ್ರೆ ಪ್ರಾರಂಭಿಸಲಾಯಿತು. ಆಗಚಿನ್ನದ ಗಣಿಯಲ್ಲಿದ್ದ ಬ್ರಿಟಿಷರ ಆರೋಗ್ಯ ಸುಧಾರಣೆಗೆ ಬೇಕಾದ ಎಲ್ಲಾ ಏರ್ಪಾಟುಗಳನ್ನು ಆಸ್ಪತ್ರೆಯಲ್ಲಿಮಾಡಲಾಗಿತ್ತು. ಬ್ರಿಟನ್‌ನಿಂದ ಹಲವಾರು ವೈದ್ಯಕೀಯ ಉಪಕರಣ ಆಮದಾಗಿದ್ದವು. ನಂತರ ಆಸ್ಪತ್ರೆ300 ಹಾಸಿಗೆಯಾಗಿ ಪರಿವರ್ತನೆಯಾಯಿತು.

1914ರಲ್ಲಿ ಬ್ರಿಟನ್‌ನಿಂದ ದೇಶದ ಮೊದಲ ಕ್ಷಕಿರಣ ಯಂತ್ರಕೂಡ ಇಲ್ಲಿ ಸ್ಥಾಪಿತವಾಯಿತು. ಆಗ, ಶಿವನಸಮುದ್ರದಿಂದ ನೇರವಾಗಿ ವಿದ್ಯುತ್‌ ಸರಬರಾಜು ಆಗುತ್ತಿದ್ದರಿಂದ ಎಂದಿಗೂ ವಿದ್ಯುತ್‌ಕೊರತೆ ಇರಲಿಲ್ಲ.ಬೇರೆ ರಾಜ್ಯದಿಂದವರಿಗೂ ಚಿಕಿತ್ಸೆ: ಚಿನ್ನದ ಗಣಿಕಾರ್ಮಿಕರ ಜತೆಗೆ ಬೇರೆ ರಾಜ್ಯಗಳಿಂದಲೂ ಜನ ಚಿಕಿತ್ಸೆಗಾಗಿ ಬರುತ್ತಿ ದ್ದರು. 1956 ರವರೆಗೂ ಬ್ರಿಟಿಷ್‌ಅಧಿ ಕಾರಿಗಳೇ ಉಸ್ತುವಾರಿ ಹೊಣೆ ಹೊತ್ತಿದ್ದರು.ನಂತರ ಭಾರತೀಯ ವೈದ್ಯರು ವಹಿಸಿಕೊಂಡರು.

ಗಟ್ಟಿಮುಟ್ಟಾಗಿದೆ: ಆಸ್ಪತ್ರೆ ಸುಮಾರು 5 ಎಕರೆವಿಸ್ತೀರ್ಣವಿದೆ. ಸುತ್ತಮುತ್ತಲಿನ ಜಾಗದಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು. ಆಸ್ಪತ್ರೆಯೂ ವಿಶಾಲವಾಗಿದ್ದು,ವಾರ್ಡ್‌ಗಳ ಮಧ್ಯೆ ಮರಗಿಡಗಳನ್ನು ಬೆಳೆಸಿ, ಸ್ವತ್ಛವಾದ ಪರಿಸರ ನಿರ್ಮಾಣ ಮಾಡಲಾಗಿತ್ತು. ಒಂದುಶತಮಾನ ಕಳೆದರೂ, ಆಸ್ಪತ್ರೆ ಇಂದಿಗೂ ಗಟ್ಟಿಮುಟ್ಟಾಗಿದೆ. ಹಲವಾರು ಭೂ ಕಂಪನಗಳನ್ನು ಯಶಸ್ವಿಯಾಗಿತಡೆದಿದೆ.

ಬಿಜಿಎಂಎಲ್‌ ಆಸ್ಪತ್ರೆ ಕಟ್ಟಡಉತ್ತಮವಾಗಿದೆ ಎಂದು ಬಿಜೆಪಿ ಕಾರ್ಯ ಕರ್ತರುಹೇಳುತ್ತಿದ್ದರು. ಮುಖಂಡರಾದ ಕಮಲನಾ ಥನ್‌,ಸೀನಿ, ಗಾಂಧಿ, ಪಾಂಡ್ಯನ್‌, ಆರ್‌ಎಸ್‌ಎಸ್‌ ತಂಡಮತ್ತಿತರರು ಆಸ್ಪತ್ರೆ ಆರಂಭಕ್ಕೆನಿಸ್ವಾರ್ಥದಿಂದ ಕೆಲಸ ಮಾಡಿದ್ದಾರೆಂದು ಸಂಸದಎಸ್‌.ಮುನಿಸ್ವಾಮಿ ತಿಳಿಸಿದರು.

Advertisement

ಬಿ.ಆರ್‌.ಗೋಪಿನಾಥ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next