ಬೆಳಗಾವಿ: ಹಲಗಾ-ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ವಿರೋ ಧಿಸುತ್ತಿರುವ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಖುದ್ದಾಗಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.
ಬೈಪಾಸ್ ರಸ್ತೆ ನಿರ್ಮಾಣಕ್ಕೆ ರೈತರು ಜಮೀನು ನೀಡದಿರಲು ಪಟ್ಟು ಹಿಡಿದಿರುವುದರಿಂದ ಸ್ಥಳ ಪರಿಶೀಲನೆಗೆ ತೆರಳಿದ್ದ ಜಿಲ್ಲಾ ಧಿಕಾರಿಗಳಿಗೆ ರೈತರು ಮುತ್ತಿಗೆ ಹಾಕಿ ತಮ್ಮ ಅಳಲು ತೋಡಿಕೊಂಡರು. ಯಾವುದೇ ಕಾರಣಕ್ಕೂ ಜಮೀನು ಬಿಟ್ಟು ಕೊಡುವುದಿಲ್ಲ. ದಯವಿಟ್ಟು ಭೂಮಿ ಕಬಳಿಸಿಕೊಳ್ಳುತ್ತಿ ರುವುದನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಧಿಕಾರಿಗಳ ಎದುರು ನಿಂತ ರೈತ ಮಹಿಳೆಯರು, ಈ ಭೂಮಿ ಬಿಟ್ಟು ನಮಗೆ ಬೇರೆ ಪರ್ಯಾಯ ಜೀವನಾಧಾರವಿಲ್ಲ. ಪರಿಹಾರ ನೀಡುವ ವಿಷಯದಲ್ಲಿಯೂ ಕೆಲವರು ಮಧ್ಯವರ್ತಿಗಳಾಗಿ ಬಂದು ಸತಾಯಿಸುತ್ತಿದ್ದಾರೆ. ಪರಿಹಾರ ನೀಡಲು ಕಮೀಷನ್ ಕೇಳುತ್ತಿದ್ದಾರೆ. ಇಂಥ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ :ಅಂತಾರಾಜ್ಯ ಮೊಬೈಲ್ ಕಳರ ಬಂಧನ
ರೈತ ಮುಖಂಡ ಪ್ರಕಾಶ ನಾಯಕ ಮಾತನಾಡಿ,ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರ ಅ ಧಿಕಾರಿಗಳು ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸುತ್ತಿದ್ದಾರೆ. ಈ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ. ಫಲವತ್ತಾದ ಭೂಮಿ ಕಬಳಿಸಲು ಹುನ್ನಾರ ನಡೆದಿದ್ದು, ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಇದನ್ನು ತಡೆಯಬೇಕು. ರೈತರ ಜಮೀನು ಉಳಿಸಿ ಕೊಡಬೇಕು ಎಂದು ಆಗ್ರಹಿಸಿದರು.