Advertisement

ಮಲೇರಿಯಾ ಹರಡದಂತೆ ಜಾಗೃತಿ ವಹಿಸಿ

11:02 AM Jul 20, 2020 | Suhan S |

ಗಲಗಲಿ: ಮಲೇರಿಯಾ ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದರೊಂದಿಗೆ ಮಲೇರಿಯಾ ಬರದಂತೆ ಜಾಗೃತಿ ವಹಿಸಬೇಕು ಎಂದು ಗಲಗಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅನೀಲ ಕುಂಚನೂರ ಹೇಳಿದರು.

Advertisement

ಬಾಡಗಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಅರೋಗ್ಯ ವಿಸ್ತರಣಾ ಕೇಂದ್ರ ಹಾಗೂ ಬಾಡಗಿ ಗ್ರಾಮ ಪಂಚಾಯತ ಆಶ್ರಯದಲ್ಲಿ ನಡೆದ ಮಲೇರಿಯಾ ವಿರೋಧಿ  ಮಾಸಾಚರಣೆಯ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ವಿವರಿಸಿದರಲ್ಲದೇ ಅಂಥ ರೋಗಗಳು ಹರಡದಂತೆ ತಡೆಯಲು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ತಿಳಿಸಿದರು.

ಬಾಡಗಿ ಗ್ರಾಮ ಆರೋಗ್ಯ ವಿಸ್ತರಣಾ ಕೇಂದ್ರದ ವೈದ್ಯಾಧಿಕಾರಿ ಡಾ| ಪ್ರಕಾಶ ಪಡುಮುಖೀ ಮಾತನಾಡಿ, ಮನೆಯ ಸುತ್ತಲಿನ ಪರಿಸರದಲ್ಲಿ ಸೊಳ್ಳೆಗಳು ಬಾರದಂತೆ ಸ್ವಚ್ಛತೆಗೆ ಮಹತ್ವ ನೀಡಬೇಕು ಎಂದರಲ್ಲದೇ ಕೋವಿಡ್ ತಡೆಗಟ್ಟುವ ಮಾರ್ಗೋಪಾಯಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯತ ಪಿಡಿಒ ಲಕ್ಷ್ಮಣ ಆಲಗುಂಡಿ, ಕಾರ್ಯದರ್ಶಿ ಬಡಿಗೇರ, ರವಿ ಸಾಳುಂಕೆ ಮುಂತಾದವರು ಪಾಲ್ಗೊಂಡಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರ ಗಲಗಲಿಯ ಆರೋಗ್ಯ ಶಿಕ್ಷಣಾಧಿಕಾರಿ ಎ.ವಿ.ಗವಳಿ, ಈ ವರ್ಷದ ಘೋಷಣೆಯಾದ ಶೂನ್ಯ ಮಲೇರಿಯಾ ನಮ್ಮಿಂದ ಪ್ರಾರಂಭ ಎಂಬುದರ ಬಗ್ಗೆ ವಿವರಿಸಿದರು. ಸುನಂದಾ ಕಂಬಳೆ, ಶ್ರೀದೇವಿ ಮಾದರ, ವಿಜಯಲಕ್ಷ್ಮೀ ಚಿತವಾಡಗಿ, ಆನಂದ ಹಿರೇಮಠ, ಪ್ರಕಾಶ ಯಲಗೋಡ ಉಪಸ್ಥಿತರಿದ್ದರು. ಶಿವು ಗೋಕಾವಿ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next