Advertisement

ಅನುದಾನ ಲ್ಯಾಪ್ಸ್‌ ಆಗದಂತೆ ಎಚ್ಚರ ವಹಿಸಿ: ಶಾಸಕ ಡಾ|ಅವಿನಾಶ

05:07 PM Jan 19, 2021 | Team Udayavani |

ಚಿಂಚೋಳಿ: ತಾಲೂಕಿನ ಅಭಿವೃದ್ಧಿಗೋಸ್ಕರ  ಸರಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಅನುದಾನವನ್ನು ಯಾವುದೇ ಲ್ಯಾಪ್ಸ್‌ ಆಗದಂತೆ ಅಧಿಕಾರಿಗಳು ಗಮನಹರಿಸಬೇಕು. ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಶಾಸಕ ಡಾ| ಅವಿನಾಶ ಜಾಧವ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಕೋವಿಡ್‌
ಮತ್ತು ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ತಾಲೂಕಿನಲ್ಲಿ ಅನೇಕ ಕಾಮಗಾರಿಗಳು ಪ್ರಗತಿಯಾಗಿಲ್ಲ. ಅಭಿವೃದ್ಧಿ ಕಾಮಗಾರಿಗಳು
ತ್ವರಿತಗತಿಯಲ್ಲಿ ನಡೆಯಬೇಕು. 2016-17 ಮತ್ತು 2017-18ನೇ ಸಾಲಿನಲ್ಲಿ ಸಣ್ಣ ಕಾಮಗಾರಿಗಳು ನನೆಗುದಿಗೆ ಬಿದ್ದಿರುವ ಕುರಿತು ಶಾಸಕರು ಬೇಸರ
ವ್ಯಕ್ತಪಡಿಸಿ ಚಿಂತಕುಂಟಾ ಗ್ರಾಮದಲ್ಲಿ ಒಂದು ಶೌಚಾಲಯ ಕಾಮಗಾರಿ ಪೂರ್ಣಗೊಳಿಸಲು ಮೂರು ವರ್ಷಗಳು ಬೇಕಾ? ಎಂದು ಜಿಪಂ ಎಇಇ ಅವರನ್ನು ಪ್ರಶ್ನಿಸಿದರು.

ದೇಗಲಮಡಿ ಒರ್ವ ರೈತ ಮತ್ತು ಕುಡಹಳ್ಳಿ ಗ್ರಾಮದಲ್ಲಿ ದಂಪತಿ ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟು 3 ವರ್ಷಗಳು ಗತಿಸಿವೆ. ಇನ್ನು ಯಾಕೆ ಮೃತರ ಕುಟುಂಬಕ್ಕೆ ಪರಿಹಾರ ನೀಡಿಲ್ಲ ಎಂದು ಜೆಸ್ಕಾಂ ಎಇಇ ಉಮೇಶ ಗೋಳಾ ಕೇಳಿದಾಗ ಇನ್ನು ಒಂದೆರಡು ತಿಂಗಳಲ್ಲಿ ಪರಿಹಾರ ಸಿಗಲಿದೆ ಎಂದು ಉತ್ತರಿಸಿದರು. ನಾನು ಕೆಲವು ಇಲಾಖೆಗಳಿಂದ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಪರಿಶೀಲಿಸುತ್ತೇನೆ ಅ ಧಿಕಾರಿಗಳು ಕೆಲಸಗಳನ್ನು ತೋರಿಸಬೇಕು ಎಂದು ಹೇಳಿದರು.

ಬೇಸಿಗೆ ಸಮೀಪಿಸುತ್ತಿದೆ ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಅ ಧಿಕಾರಿಗಳ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಏನಾದರೂ ಸಮಸ್ಯೆ ಇದ್ದರೆ ನನಗೆ ತಿಳಿಸಿರಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಟಿಎಚ್‌ಒ ಡಾ|ದೀಪಕ ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಕೋವಿಡ್‌ ವ್ಯಾಕ್ಸಿನ್‌ ಜ.16ರಂದು  ಮೊದಲ ದಿನ 100ರ ಪೈಕಿ 51 ಜನರಿಗೆ ಲಸಿಕೆ
ನೀಡಲಾಗಿದೆ. ಸುಲೇಪೇಟ, ಐನಾಪೂರ, ಕುಂಚಾವರಂ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುವುದು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು
ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಒಟ್ಟು 1753 ಫಲಾನುಭವಿಗಳಿಗೆ ಕೋವಿಡ್‌ ಲಸಿಕೆ ಕೊಡಲಾಗುವುದು. ತಾಲೂಕಿನಲ್ಲಿ ಕೊರೊನಾ
ವೈರಸ್‌ ಪಾಸಿಟಿವ್‌ ಒಟ್ಟು 1062 ಜನರಿದ್ದು, ಇದರಲ್ಲಿ 7 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಂಬ್ಯುಲೆನ್ಸ್‌
ವಾಹನಗಳು ಇರುವುದಿಲ್ಲ ಎಂದು ಹೇಳಿದರು.

Advertisement

ಕುಂಚಾವರಂ ವನ್ಯಜೀವಿಧಾಮ ಅರಣ್ಯಾಧಿಕಾರಿ ಸಂಜೀವ ಚವ್ಹಾಣ 150 ಹೆಕ್ಟೇರ್‌ ಪ್ರದೇಶದಲ್ಲಿ ಕುಂಚಾವರಂ ಗಡಿಯಲ್ಲಿನ ಗ್ರಾಮಗಳ ಲ್ಲಿ ನೆಡುತೋಪು ಮಾಡಲಾಗಿದೆ ಎಂದು ಪ್ರಗತಿ ವಿವರಿಸಿದಾಗ ಸೇರಿಭಿಕನಳ್ಳಿ ತಾಂಡಾವನ್ನು ವನ್ಯಜೀವಿಧಾಮ ಅರಣ್ಯಪ್ರದೇಶದಿಂದ ಸ್ಥಳಾಂತರಿಸುವುದು ಯಾಕೆ ಆಗುತ್ತಿಲ್ಲವೆಂದು ಶಾಸಕರು ಪ್ರಶ್ನಿಸಿದಾಗ ಸವೇ ಕಾರ್ಯ ಮುಗಿದಿದೆ ಯಾಕೆ ಸ್ಥಳಾಂತರ ಆಗುತ್ತಿಲ್ಲ ಎಂದಾಗ ಜಿಲ್ಲಾ ಅರಣ್ಯಾ ಧಿಕಾರಿಗಳ ಗಮನಕ್ಕೆ ತರುತ್ತೇನೆಂದು ಹೇಳಿದರು.

ತಾಪಂ ಅಧಿಕಾರಿ ಅನೀಲಕುಮಾರ ರಾಠೊಡ್‌, ಎಇಇ ಗುರುರಾಜ ಜೋಶಿ, ಎಇಇ ಮಹಮ್ಮದ ಅಹೆಮದ ಹುಸೇನ್‌, ಎಇಇ ಶಿವಶರಣಪ್ಪ ಕೇಶ್ವರ, ಡಾ| ಧನರಾಜ ಬೊಮ್ಮ, ಸಿಡಿಪಿಒ ಗುರುಪ್ರಸಾದ, ಸಮಾಜ ಕಲ್ಯಾಣಾಧಿಕಾರಿ ಪ್ರಭುಲಿಂಗ ಬುಳ್ಳ, ಬಿಸಿಎಂ ಅ ಧಿಕಾರಿ ಶಬ್ಬೀರ ಅಹೆಮದ, ಅರಣ್ಯಾ ಧಿಕಾರಿ ನಟರಾಜ ಚವ್ಹಾಣ, ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಎಇಇ ಹಣಮಂತರಾವ ಪೂಜಾರಿ, ಶಿರಸ್ತೇದಾರ ವೆಂಕಟೇಶ
ದುಗ್ಗನ್‌, ಜೆಇ ಭಾಸ್ಕರ ರಾಠೊಡ, ರಾಮಚಂದ್ರ, ಜಾವೀದ, ಸುಭಾಶ ರಾಠೊಡ್‌ ಇತರರು ಇಲಾಖೆಗಳ ಪ್ರಗತಿ ವರದಿ ವಿವರಿಸಿದರು. ತಾಪಂ ಅಧ್ಯಕ್ಷ ರೇಣುಕಾ ಚವ್ಹಾಣ, ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಯೋಜನಾ ಧಿಕಾರಿ ಶಂಕರ ರಾಠೊಡ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next