Advertisement

ಗ್ರಾಪಂ ಸದಸ್ಯ ಸ್ಥಾನ ಹರಾಜು ಬಗ್ಗೆ ಎಚ್ಚರ ವಹಿಸಿ

04:48 PM Dec 11, 2020 | Suhan S |

 

Advertisement

 

ಹಾಸನ: ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನಗಳು ಹರಾಜು ಮೂಲಕ ಆಯ್ಕೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಡಾ.ಬಿ.ಬಸವರಾಜು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ವಿಡಿಯೋ ಸಂವಾದ ನಡೆಸಿ ಅವರು, ಕೆಲವು ಗ್ರಾಪಂ ಸ್ಥಾನಗಳ ಹರಾಜು ಪ್ರಕ್ರಿಯೆ ನಡೆಯುತ್ತಿದೆ ಎಂಬವರದಿಗಳಾಗುತ್ತಿವೆ. ಇದುಕಾನೂನು ಬಾಹಿರವಾಗಿದ್ದು, ಹರಾಜು ಪ್ರಕ್ರಿಯೆ ನಡೆಸಿದ್ದರೆ ಅಂಥವರ ವಿರುದ್ಧ ಗ್ರಾಮ ಪಂಚಾಯ್ತಿ ಕಾಯ್ದೆ ಅನ್ವಯ ದೂರು ದಾಖಲಿಸಲು ಅನುಮತಿ ಇದೆ ಅಥವಾಕ್ರಿಮಿನಲ್‌ ಪ್ರಕರಣ ದಾಖಲಿಸಬಹುದು ಎಂದು ಹೇಳಿದರು.

ಚುನಾವಣೆ ಅಧಿಕೃತವಾಗಿ ನಡೆಯಬೇಕು. ಚುನಾವಣೆಯ ಪ್ರಚಾರ ಕಾರ್ಯ ನಡೆಯಬೇಕು. ಪ್ರಚಾರಕ್ಕೆ ಬೇಕಾದಅಗತ್ಯಕರಪತ್ರಗಳಿಂದಜಾಗೃತಿಮೂಡಿಸ ಬೇಕು ಎಂದು ತಿಳಿಸಿದರು.

Advertisement

3 ಗ್ರಾಪಂಗಳಲ್ಲಿ ಹರಾಜು ವದಂತಿ: ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಮಾತನಾಡಿ, ಚನ್ನರಾಯ ಪಟ್ಟಣ ತಾಲೂಕಿನ ಮೂರು ಗ್ರಾಮ ಪಂಚಾಯ್ತಿಗಳಲ್ಲಿ ಸದಸ್ಯ ಸ್ಥಾನಗಳ ಹರಾಜು ನಡೆದ ಮಾಹಿತಿ ದೊರಕಿತ್ತು. ಎಸಿಯವರು ಮೂರು ಗ್ರಾಮ ಪಂಚಾಯ್ತಿಯ 10 ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಿಂದಿನಿಂದಲೂ ಅವಿರೋಧವಾಗಿ ಆಯ್ಕೆ ಮಾಡುವ ಪದ್ಧತಿ ಇರುವುದರಿಂದ ಆಯ್ಕೆಯಾಗುತ್ತಿದ್ದಾರೆ. ಸದಸ್ಯಸ್ಥಾನಗಳ ಹರಾಜು ಪ್ರಕ್ರಿಯೆ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಕೆಲವೊಂದು ಪಂಚಾಯ್ತಿಗಳಲ್ಲಿಹಿಂದುಳಿದ ವರ್ಗಗಳ ಎ ಗುಂಪಿನ ಅಭ್ಯರ್ಥಿಗಳಿಗೆ ಸದಸ್ಯ ಸ್ಥಾನ ಮೀಸಲಿದ್ದು, ಆ ಗ್ರಾಮದಲ್ಲಿ ಎ ಗುಂಪಿನ ಅಭ್ಯರ್ಥಿಗಳು ಇಲ್ಲ. ಬೇರೆ ಗ್ರಾಮಗಳಿಂದ ಬಂದುಸ್ಪರ್ಧಿಸಬೇಕು. ಅಲ್ಲಿಯೂ ಹರಾಜು ಪ್ರಕ್ರಿಯೆ ನಡೆದಿಲ್ಲಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ಜಿಲ್ಲಾಧಿಕಾರಿಯವರು ಮಾಹಿತಿ ನೀಡಿದರು.

ಸಕಲೇಶಪುರ ತಾಲೂಕಿನ ಪಶ್ಚಿಮಘಟ್ಟದ ಕೆಲವುಭಾಗಗಳಲ್ಲಿ ಕಸ್ತೂರಿ ರಂಗನ್‌ ವರದಿ ಜಾರಿ ವಿರೋಧಿಸಿ ಚುನಾವಣೆ ಬಹಿಷ್ಕರಿಸಿದ್ದಾರೆ. ಆ ಭಾಗಗಳಿಗೆ ಉಪಭಾಗಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕಳುಹಿಸಿ ಮನ ವೊಲಿಸುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next