Advertisement

ನಕಲಿ ವೆಬ್‌ಸೈಟ್‌ ಬಗ್ಗೆ ಎಚ್ಚರ

06:00 AM Aug 21, 2018 | |

ನವದೆಹಲಿ: ಬೇಟಿ ಬಚಾವೋ ಬೇಟಿ ಪಢಾವೋ ಲೋಗೋ ಹೊಂದಿರುವ ನಕಲಿ ವೆಬ್‌ಸೈಟ್‌ ಒಂದು ಜನರನ್ನು ಮೋಸಗೊಳಿಸುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಸಲಹೆ ನೀಡಿದೆ. ಕುಟುಂಬ ಕಲ್ಯಾಣ ಸಚಿವಾಲಯದ ಪಾಲುದಾರ ಎಂದು ಈ ನಕಲಿ ವೆಬ್‌ಸೈಟ್‌ ಹೇಳಿಕೊಂಡಿದ್ದು, ಹೆಣ್ಣು ಮಕ್ಕಳ ಭವಿಷ್ಯವನ್ನು ಭದ್ರಪಡಿಸಲು 10 ಸಾವಿರ ರೂ. ಹೂಡಿಕೆ ಮಾಡುವಂತೆ ವಾಟ್ಸ್‌ಆ್ಯಪ್‌ ಹಾಗೂ ಎಸ್‌ಎಂಎಸ್‌ ಸಂದೇಶ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವಾಲಯವು ಇಂತಹ ಯಾವುದೇ ವೆಬ್‌ಸೈಟ್‌ ಅನ್ನು ಹೊಂದಿಲ್ಲ. ಎಲ್ಲ ಮಾಹಿತಿಯು www.wcd.nic.inನಲ್ಲಿ ಮಾತ್ರ ಲಭ್ಯವಿರುತ್ತದೆ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next