Advertisement

ಸರಕಾರವೂ ಎಚ್ಚರ ತಪ್ಪದಿರಲಿ; ನಾವೂ ಮೈಮರೆಯದಿರೋಣ

03:56 AM Jul 03, 2021 | Team Udayavani |

ಕೊರೊನಾ ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಿರ್ಬಂಧಗಳನ್ನು ಸಂಪೂರ್ಣ ಸಡಿಲಿಕೆ ಮಾಡಲು ಯೋಚಿಸುತ್ತಿದೆ. ಇದು ಜನ ಜೀವನ ಸಹಜ ಸ್ಥಿತಿಗೆ ತರುವುದು ಹಾಗೂ ಆರ್ಥಿಕತೆಗೆ ಮತ್ತೆ ವೇಗ ವನ್ನು ಒದಗಿಸುವ ಉದ್ದೇಶ ಸರಕಾರದ್ದು. ಇದು ಖಂಡಿತಾ ಸ್ವಾಗತಾರ್ಹ. ಆದರೆ ಕೊರೊನಾ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ ಎಂಬುದನ್ನೂ ನಾವು ಅರ್ಥ ಮಾಡಿಕೊಳ್ಳ ಬೇಕಿದೆ.

Advertisement

ಒಂದನೇ ಅಲೆಯ ಸಂದರ್ಭದಲ್ಲಿ ನಾವು ಎಷ್ಟು ಎಚ್ಚರ ವಹಿಸಿದ್ದರೂ ಎರ ಡನೇ ಅಲೆಯ ಭೀಕರತೆಯನ್ನು ತಡೆಯಲು ಆಗಲಿಲ್ಲ. ಅದಕ್ಕೆ ಬಹಳ ಪ್ರಮುಖವಾಗಿ ನಮ್ಮ ಕಣ್ಣಿಗೆ ಕಾಣುತ್ತಿರುವ ಕಾರಣವೆಂದರೆ ಎರಡನೇ ಅಲೆಯ ಮೊದಲು ನಾವು ಷರತ್ತುಗಳನ್ನು ಉಲ್ಲಂ ಸಿದ್ದು. ಹಾಗೆಂದು ನಿಯ ಮಗಳು, ನಿರ್ಬಂಧಗಳು ಇರಲಿಲ್ಲವೆಂದಲ್ಲ. ಚಾಲ್ತಿಯಲ್ಲಿದ್ದರೂ ಜನರೂ ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಸರಕಾರ, ಸ್ಥಳೀ ಯಾಡಳಿತಗಳೂ ಸ್ವಲ್ಪ ಮೈ ಮರೆತವು. ಎಲ್ಲದರ ಪರಿಣಾಮಕ್ಕೆ ದಂಡ ತೆತ್ತಿ ದ್ದೇವೆ. ಇದನ್ನೂ ಸಾರ್ವಜನಿಕರು ಮತ್ತು ಸರಕಾರ ಎರಡೂ ಗಮನದಲ್ಲಿ ಟ್ಟುಕೊಳ್ಳಬೇಕಾದುದು ಮುಂದಿನ ಸಂದರ್ಭಕ್ಕೆ ನಾವು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮ. ಹಾಗಾಗಿ ಸ್ಥಳೀಯಾಡಳಿತಗಳು ನಿಯಮ ಉಲ್ಲಂ  ಸಿದ ಸಂದರ್ಭದಲ್ಲಿ ಜನರನ್ನು ಎಚ್ಚರಿಸುವ ಹೊಣೆಗಾರಿಕೆಯನ್ನು ಮರೆಯಬಾರದು, ನುಣುಚಿಕೊಳ್ಳಲೂಬಾರದು.

ನಮ್ಮ ದೌರ್ಬಲ್ಯವೆಂದರೆ ಸಮಸ್ಯೆ ಎಂಬುದು ನಮ್ಮ ಮನೆಯ ಅಂಗ ಳಕ್ಕೆ ಬರುವವರೆಗೂ ಜಾಗೃತರಾಗುವುದಿಲ್ಲ. ಇದು ವಾಸ್ತವ. ಸಮಸ್ಯೆ ತೀವ್ರ ವಾದ ಬಳಿಕ ಎಲ್ಲವನ್ನೂ ಸರಕಾರದ ಮೇಲೆ ಹೊರಿಸಿ ಹತಾಶರಾಗುತ್ತೇವೆ. ಇದಕ್ಕಿಂತ ನಮ್ಮನ್ನು ನಾವು ಸ್ವಯಂ ಜಾಗೃತಗೊಳಿಸಿಕೊಳ್ಳಬೇಕು.

ಸದ್ಯ ಎರಡನೆಯ ಅಲೆಯ ತೀವ್ರತೆ ಕಡಿಮೆಯಾಗಿದ್ದು, ಮೂರನೇ ಅಲೆಯ ಭೀತಿಯಲ್ಲಿರುವ ನಾವು ಅದಕ್ಕೆ ಜಾಗೃತರಾಗಬೇಕು. ಡೆಲ್ಟಾ ಪ್ಲಸ್‌ನ ಅಪಾಯದ ಬಗ್ಗೆ ಇನ್ನೂ ಗೊಂದಲಗಳು, ಅಸ್ಪಷ್ಟತೆಗಳು ಮುಂದು ವರಿ ಯುತ್ತಿರುವ ಹೊತ್ತಿನಲ್ಲೇ ಸರಕಾರ ಅನ್‌ಲಾಕ್‌ಗೆ ಒಪ್ಪುತ್ತಿರುವುದೂ ಆರ್ಥಿಕತೆ ಸರಿದಾರಿಗೆ ಬರಲೆಂಬ ಕಾರಣಕ್ಕಾಗಿ. ಆರ್ಥಿಕ ಚಟುವಟಿಕೆಯ ಪುನಃಶ್ಚೇತನ ಹಾಗೂ ಜನರ ತುರ್ತು ಆವಶ್ಯಕತೆಗಳನ್ನು ಪೂರೈಸುವುದ ಕ್ಕಾಗಿಯೇ ಹೊರತು ಸಂಭ್ರಮಿಸುವುದಕ್ಕಲ್ಲ. ಈ ಹಿಂದಿನ ಅನ್‌ಲಾಕ್‌ ಸಂದರ್ಭದಲ್ಲಿ ಹೇಗೆ ಜನಸಂದಣಿಯಿಂದ ದೂರವಿದ್ದೆವೋ, ಅದೇ ರೀತಿ ಅನಿವಾರ್ಯ ಕಾರಣ ಹೊರತುಪಡಿಸಿ ಜನರ ನೇರ ಸಂಪರ್ಕ ದಿಂದ ಹೊರಗಿರುವುದೇ ಸೂಕ್ತ. ಅನ್‌ಲಾಕ್‌ ಆದರೂ ನಮಗೆ ನಾವೇ ಒಂದು ಇತಿಮಿತಿಯ ನಿರ್ಬಂಧ ವಿಧಿಸಿಕೊಂಡು ಕೊರೊನಾ ವಿರುದ್ಧದ ಹೋರಾಟವನ್ನು ಇನ್ನಷ್ಟು ದಿನಗಳ ಕಾಲ ಸಕ್ರಿಯವಾಗಿರಿಸಿಕೊಳ್ಳುವುದು ಅಗತ್ಯ. ಆದ ಕಾರಣ ಯಾರ ಉಸ್ತುವಾರಿ ಇಲ್ಲದೇ ನಿಯಮಗಳನ್ನು ಸ್ವಯಂ ಪಾಲಿಸುವುದೇ ಸರಕಾರದ ಬೆಂಬಲಕ್ಕೆ ನಿಲ್ಲುವಂಥ ಸಮರ್ಪಕ ವಾದ ಕ್ರಮ. ನಿಯಮಗಳ ಪಾಲನೆಯೇ ಜಾಣತನ.

ಅನ್‌ಲಾಕ್‌ ಆಗುವ ಕ್ಷೇತ್ರದಲ್ಲಿ ಸರಕಾರ ವಿಧಿಸಿದ ಷರತ್ತುಗಳು ಪರಿಣಾಮಕಾರಿಯಾಗಿ ಜಾರಿಯಾಗುವುದನ್ನು ಖಚಿತಪಡಿಸಿಕೊಳ್ಳುವುದು ವ್ಯಾಪಾರಿ -ಗ್ರಾಹಕ ಸಹಿತ ಎಲ್ಲರ ಹೊಣೆಗಾರಿಕೆ ಮತ್ತು ಕರ್ತವ್ಯ. ಒಂದೊ ಮ್ಮೆ ನಾವು ಮಾಡುವ ತಪ್ಪಿನಿಂದಾಗಿಯೇ ಮತ್ತೂಮ್ಮೆ ಅನ್‌ಲಾಕ್‌ ಮಾಡ ಬೇಕಾಗಿ ಬಂದರೆ ಹೆಚ್ಚಿನ ಕಷ್ಟನಷ್ಟ ನಮಗೆ ವಿನಾ ಸರಕಾರಕ್ಕಲ್ಲ. ಈ ಸವಾಲಿ ನಂಥ ಸಂದರ್ಭದಲ್ಲಿ ಕೊರೊನಾದಂಥ ಸಾಂಕ್ರಾಮಿಕವನ್ನು ಸರಕಾರ ಜತೆಗೆ ಕೈಜೋಡಿಸಿ ಸೋಲಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next