Advertisement
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆಯ 32 ಕಂದಾಯ ಗ್ರಾಮಗಳನ್ನು ಆರು ವಲಯಗಳಾಗಿ ಮತ್ತು 30 ಸೆಕ್ಟರ್‌ಗಳಾಗಿ ವಿಂಗಡಿಸಿದ್ದು, ಅಳತೆಗೆ ಒಳಪಟ್ಟ 1,50,428 ಆಸ್ತಿಗಳಿವೆ. ಪ್ರಸ್ತುತ ಸುಮಾರು 70,000 ಪ್ರಾಪರ್ಟಿ ಕಾರ್ಡ್‌ಗಳು ಸಿದ್ಧಗೊಂಡಿದ್ದು, ಈಗಾಗಲೇ 51,000 ಕಾರ್ಡ್‌ಗಳು ವಿತರಣೆಯಾಗಿವೆ. ಇದೀಗ ಹೊಸದಾಗಿ ಆಸ್ತಿಗಳು ಸೇರ್ಪಡೆಯಾಗಿ ಒಟ್ಟು ಆಸ್ತಿಗಳ ಸಂಖ್ಯೆ ಸುಮಾರು 1,84,000ರಷ್ಟು ಇದೆ.
ಪ್ರಸ್ತುತ 8 ಮಂದಿ ಸರ್ವರ್‌ಗಳಿದ್ದಾರೆ. ಆದರೆ ಕಡತಗಳ ವಿಲೇವಾರಿ ದೃಷ್ಟಿಯಿಂದ ಇದು ಸಾಕಾಗುವುದಿಲ್ಲ. ಆಸ್ತಿಗಳ ಅಳತೆ ಕಾರ್ಯ ವಿಳಂಭ ವಾಗುತ್ತಿದೆ. ಇದು ಬಾಕಿ ಇರುವ ಕಡತಗಳ ವಿಲೇವಾರಿಯ ಮೇಲೂ ಪರಿಣಾಮ ಬೀರುತ್ತಿದೆ. ಪ್ರಾಪರ್ಟಿ ಕಾರ್ಡ್ ಸರ್ವರ್ ಬೆಂಗಳೂರಿನಲ್ಲಿರುತ್ತದೆ. ಕಾರ್ಡ್‌ನ ತಾಂತ್ರಿಕ ಸಮಸ್ಯೆ ಗಳನ್ನು ಸರಿಪಡಿಸಲು ಬೆಂಗಳೂರಿಗೆ ಕಳುಹಿಸಲಾಗುತ್ತದೆ. ಆದರೆ ಅಲ್ಲಿ ಈ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಇದ ರಿಂದ ಸಾರ್ವಜನಿಕರು ಕಚೇರಿಗೆ ಅಲೆದಾಡ ಬೇಕಾದ ಸಂದರ್ಭಗಳು ಬರುತ್ತವೆ.
Related Articles
Advertisement
ಸೌಲಭ್ಯಗಳ ಕೊರತೆ, ಸಮಸ್ಯೆಗಳುಪ್ರಸ್ತುತ-ಯುಪಿಓಆರ್‌ಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸದಾಗಿ ಕಟ್ಟಡ ಸಿದ್ಧಗೊಳ್ಳುತ್ತಿದ್ದು, ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಪ್ರಾಪರ್ಟಿ ಕಾರ್ಡ್‌ಗಾಗಿ ಬರುವ ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಾಲಯ ಮುಂತಾದ ಮೂಲ ಸೌಕರ್ಯಗಳಿಲ್ಲ. ಕಚೇರಿಗೆ ದೂರವಾಣಿ ಸಂಪರ್ಕ ಇಲ್ಲದ ಕಾರಣ ಸಾರ್ವಜನಿಕರು ಸಿಬಂದಿ ವೈಯುಕ್ತಿಕ ಮೊಬೈಲ್‌ಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕಾದ ಸ್ಥಿತಿ ಇದ್ದು, ಇದರಿಂದ ಸಾರ್ವಜನಿಕರು, ಸಿಬಂದಿ ಕಿರಿಕಿರಿ ಅನುಭವಿಸುವಂತಾಗಿದೆ. ಸಮರ್ಪಕ ಸಾರ್ವಜನಿಕ ಮಾಹಿತಿ ಕೇಂದ್ರ ವ್ಯವಸ್ಥೆ ಇಲ್ಲದಿರುವ ಕಾರಣದಿಂ¨ ಸಾರ್ವಜನಿಕರು ಕಾರ್ಡ್ ಬಗ್ಗೆ ಮಾಹಿತಿ, ವಿಚಾರಣೆ ಬಗ್ಗೆ ಸಮಸ್ಯೆ ಎದುರಿಸುವಂತಾಗಿದೆ. ರೆಕಾರ್ಡ್ ರೂಂ ಸಮಸ್ಯೆ ತಕ್ಕಮಟ್ಟಿಗೆ ಬಗೆಹರಿದಿದ್ದು, ಇದೀಗ ಹೊಸದಾಗಿ ಸಿದ್ಧಗೊಳ್ಳುವ ಕಟ್ಟಡದಲ್ಲಿ ಒಂದು ಅಂತಸ್ತು ಅನ್ನು ರೆಕಾರ್ಡ್ ರೂಂಗಾಗಿಯೇ ಮೀಸಲಿರಿಸಲಾಗುತ್ತಿದೆ. ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿ
ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯಕ್ಕೆ ವಿನಾಯತಿ ಹೊರತುಪಡಿಸಿ ಉಳಿದಂತೆ ಇತರ ಪ್ರಕ್ರಿಯೆಗಳಿಗೆ ಬಳಕೆಯಲ್ಲಿದೆ. ಕಾರ್ಡ್ ಸಿದ್ಧಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸಾರ್ವಜನಿಕರಿಂದ ಪ್ರಾಪರ್ಟಿ ಕಾರ್ಡ್‌ಗಳನ್ನು ಅರ್ಜಿಗಳು ಬರುತ್ತಿದ್ದು, ತಿಂಗಳಿಗೆ ಸರಾಸರಿ 600 ಕಾರ್ಡ್‌ಗಳನ್ನು ಮಾಡಲಾಗುತ್ತಿದೆ. ಹೊಸದಾಗಿ 25,000ಕ್ಕಿಂತಲೂ ಅಧಿಕ ಆಸ್ತಿಗಳು ಸೇರ್ಪಡೆಯಾಗಿವೆ.
-ನಿರಂಜನ್,
ಭೂಮಾಪನ ಇಲಾಖೆಯ ಉಪ ನಿರ್ದೇಶಕರು