Advertisement
ಸಭೆಯು ಗ್ರಾ.ಪಂ.ನ ಸಮಾಜ ಮಂದಿ ರದಲ್ಲಿ ಪಂಚಾಯತ್ ಅಧ್ಯಕ್ಷೆ ಲಲಿತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಗೀತಾ ಶೇಖರ ಲೆಕ್ಕಪತ್ರ ಮಂಡಿಸಿ ವರದಿ ಗಳಿಗೆ ಮಂಜೂರಾತಿ ಪಡೆದರು.
Related Articles
Advertisement
ಜಾಗ ಹುಡುಕಲು ನಿರ್ಣಯ ಹೊಸಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನದವರು ಬೆಳಗ್ಗಿನಿಂದ ರಾತ್ರಿ ತನಕ ಅಲ್ಲೇ ನಿಲ್ಲಿಸಿ ತಮ್ಮ ತಮ್ಮ ಕಾರ್ಯಕ್ಕೆ ತೆರಳುತ್ತಾರೆ. ಇದರಿಂದ ಬಸ್ಸುಗಳ ನಿಲುಗಡೆ ತೊಂದರೆಯಾಗುತ್ತಿದೆ ಎಂದು ಬಂದಿರುವ ದೂರಿಗೆ ಪರ್ಯಾಯ ವ್ಯವಸ್ತೆಗೆ ಜಾಗ ಹುಡುಕಲು ನಿರ್ಣಯಿಸಲಾಯಿತು. ಕುಡಿಯುವ ನೀರಿನ ಪೈಪ್ಲೈನ್ನ ದುರಸ್ತಿಗೆ ಬಳಸಲಾದ ರೂ. 60 ಸಾವಿರ ಖರ್ಚಿನ ಬಗ್ಗೆ ಸದಸ್ಯ ರಹಿಮಾನ್ ಆಕ್ಷೇಪ ವ್ಯಕ್ತಪಡಿಸಿದರು. ಇನ್ನು ಮುಂದೆ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ದುರಸ್ತಿ ಕಾರ್ಯ ಮಾಡಬೇಕಾದರೆ ಆಯಾಯ ವಾರ್ಡ್ ಸದಸ್ಯರ ಗಮನಕ್ಕೆ ತರಲೇ ಬೇಕು ಎಂದು ಪಟ್ಟು ಹಿಡಿದರು. ಮುಂದಿನ ಬೇಸಗೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಅಡ್ಡಿ ಆಗಬಾರದು ಎಂದು ಸದಸ್ಯರು ಆಗ್ರಹಿಸಿದರು. ಅಂಗಡಿ ಮಾಲಕರು ಹಾಗೂ ಮನೆಯವರು ಪಂಚಾಯತ್ಗೆ ಬಾಕಿಯಿರಿಸಿರುವ ತೆರಿಗೆ ಹಣದ ವಸೂಲಿಗೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಸಲಹೆ ಮಾಡಿದರು. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಇಬ್ರಾಹಿಂ, ಅಬ್ದುಲ್ ರಶೀದ್, ಮಹಮ್ಮದ್ ತಾಸಿಫ್ ಯು.ಟಿ., ವಿನಾಯಕ ಪೈ, ಉಷಾ ಮುಳಿಯ, ಶೋಭಾ, ಜಯಂತಿ ರಂಗಾಜೆ, ರುಕ್ಮಿಣಿ, ವನಿತಾ, ನೆಬಿಸಾ, ಲೋಕೇಶ್, ಧನಂಜಯ ನಟ್ಟಿಬೈಲು ಮತ್ತಿತರರಿದ್ದರು. ಗುಮಾಸ್ತೆ ಜ್ಯೋತಿ ವಂದಿಸಿದರು. ತ್ಯಾಜ್ಯ ಸಂಗ್ರಹಣೆಗೆ ಲಘುವಾಹನ ಖರೀದಿಸಿ
ತ್ಯಾಜ್ಯ ಸಂಗ್ರಹಣೆಗೆ ಲಘುವಾಹನದ ಆವಶ್ಯಕತೆ ಇದ್ದು ಎರಡು ತಿಂಗಳ ಹಿಂದೆಯೇ ನಿರ್ಣಯಿಸಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿಗಳಿಗೆ ಅನುಮೋದನೆ ಕಳುಹಿಸಿದರೂ ಈ ತನಕ ಸಾಧ್ಯವಾಗಿಲ್ಲ. ತತ್ಕ್ಷಣ ಅಧಿಕಾರಿಗಳಲ್ಲಿ ವಿವರಣೆ ಕೇಳಿ ಮಂಜೂರಿಗೆ ಯತ್ನಿಸಿ ಎಂದು ಅಬ್ದುಲ್ ರಶೀದ್ ಸಲಹೆ ನೀಡಿದರು.