Advertisement
ವಾರದ ಹಿಂದಷ್ಟೇ ಪೂಜಾ ಗಾಂಧಿ ತಮ್ಮ ನಿರ್ಮಾಣದ ಮೂರು ಚಿತ್ರಗಳಿಗೆ ಏಕಕಾಲದಲ್ಲಿ ಮುಹೂರ್ತ ಮಾಡುವುದಾಗಿ ಹೇಳಿದ್ದರು. ಈ ಮೂರು ಚಿತ್ರಗಳನ್ನು ಜೆ.ಡಿ.ಚಕ್ರವರ್ತಿ ನಿರ್ದೇಶನ ಮಾಡುತ್ತಿದ್ದು, ಚಿತ್ರದ ವಿವರವನ್ನು ಅವರೇ ನೀಡುತ್ತಾರೆಂದು ಹೇಳಿದ್ದರು. ಅದರಂತೆ ಪೂಜಾ ನಿರ್ಮಾಣದ ಮೂರು ಚಿತ್ರಗಳು ಮಂಗಳವಾರ ಹೋಟೆಲ್ ಅಶೋಕದಲ್ಲಿ ಅದ್ಧೂರಿಯಾಗಿ ಲಾಂಚ್ ಆಗಿವೆ. ಜೆ.ಡಿ. ಚಕ್ರವರ್ತಿ ತಮ್ಮದೇ ಶೈಲಿಯಲ್ಲಿ ಈ ಮೂರು ಸಿನಿಮಾಗಳನ್ನು ಲಾಂಚ್ ಮಾಡಿದ್ದಾರೆ.
Related Articles
Advertisement
ಮುಖ್ಯವಾಗಿ ಕಾನೂನಾತ್ಮಕ ಅಂಶಗಳೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ಜೆ.ಡಿ. ಹೇಳುವಂತೆ “ಬ್ಲ್ಯಾಕ್ ಅಂಡ್ ವೈಟ್’ ನೈಜ ಕಥೆಯಿಂದ ಸ್ಫೂರ್ತಿ ಪಡೆದ ಸಿನಿಮಾ. ಪ್ರತಿ ಸಿನಿಮಾದ ಸಂಗೀತ ಕೂಡಾ ಭಿನ್ನವಾಗಿರುತ್ತದೆ ಎಂದು ಹೇಳುವ ಜೆ.ಡಿ. ಚಕ್ರವರ್ತಿ, ರೆಗ್ಯುಲರ್ ಪ್ಯಾಟರ್ನ್ ಬಿಟ್ಟ ಹಾಡುಗಳನ್ನು ಈ ಸಿನಿಮಾದಲ್ಲಿ ಕೇಳಬಹುದು ಎಂಬುದು ಜೆ.ಡಿ.ಚಕ್ರವರ್ತಿ ಮಾತು. ಮೊದಲು “ಉತಾಹಿ’ ಚಿತ್ರೀಕರಣ ಆರಂಭವಾಗಲಿದ್ದು, ಆ ನಂತರ ಒಂದೊಂದು ಸಿನಿಮಾಗಳ ಚಿತ್ರೀಕರಣ ಶುರುವಾಗಲಿದೆಯಂತೆ.
“ನನ್ನದೇ ಆದ ಒಂದು ತಂಡವಿದೆ. ನಾನು ಕಥೆಗಿಂತ ಹೆಚ್ಚಾಗಿ ಪೂರ್ವತಯಾರಿ ಹಾಗೂ ನಿರೂಪಣೆಯಲ್ಲಿ ನಂಬಿಕೆ ಇಟ್ಟವನು. ಯಾವುದೇ ಕಥೆಯನ್ನಾದರೂ ನಾವು ಹೇಗೆ ನಿರೂಪಿಸುತ್ತೇವೆ ಎಂಬುದರ ಮೇಲೆ ಸಿನಿಮಾ ನಿಂತಿರುತ್ತದೆ’ ಎಂಬುದು ಜೆ.ಡಿ. ಮಾತು. ಜೆ.ಡಿ.ಚಕ್ರವರ್ತಿಗೆ ಈಗ ಭಯ ಶುರುವಾಗಿದೆಯಂತೆ. ಆ ಭಯಕ್ಕೆ ಕಾರಣ ಪೂಜಾ ಗಾಂಧಿ. “ಪೂಜಾ ನನ್ನ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದಾರೆ. ಅವರ ನಂಬಿಕೆಯನ್ನು ನಾನು ಉಳಿಸಿಕೊಂಡರೆ ಸಾಕು. ಅವರ ಆ ನಂಬಿಕೆಯೇ ನನ್ನ ಭಯಕ್ಕೆ ಕಾರಣ’ ಎನ್ನುತ್ತಾರೆ.
ಇನ್ನು, ಜೆ.ಡಿ. ಚಕ್ರವರ್ತಿ, ರಾಮ್‌ಗೊಪಾಲ್ ವರ್ಮಾ ಗರಡಿಯಿಂದ ಬಂದವರು. ಹಾಗಾಗಿ, ಅವರ ಸಿನಿಮಾಗಳ, ಅವರ ಶೈಲಿಯ ಪ್ರೇರಣೆ, ಅನುಕರಣೆ ಇರುತ್ತಾ ಎಂದರೆ, “ಗೊತ್ತಿಲ್ಲ, ಇದ್ದರೂ ಇರಬಹುದು. ನನಗೆ ಆ ಬಗ್ಗೆ ಖುಷಿ ಇದೆ. ಪಕ್ಕದ್ಮನೆಯ ಅಂಕಲ್‌ನ ಅನುಕರಣೆ ಮಾಡೋದಕ್ಕಿಂತ ನಮ್ಮ ತಂದೆಯನ್ನು ಅನುಕರಿಸೋದು ಒಳ್ಳೆಯದಲ್ವಾ’ ಎನ್ನುವ ಮೂಲಕ ರಾಮ್‌ಗೊàಪಾಲ್ ವರ್ಮಾ ಬಗೆಗಿನ ತಮ್ಮ ಗೌರವನ್ನು ಸೂಚಿಸುತ್ತಾರೆ ಜೆ.ಡಿ.
ಭರವಸೆಯ ಮೇಲೆ ನಿರ್ಮಾಣ: ಏಕಕಾಲಕ್ಕೆ ಹತ್ತು ಸಿನಿಮಾಗಳನ್ನು ಹೇಗೆ ನಿರ್ಮಿಸುತ್ತೀರಿ ಎಂಬ ಪ್ರಶ್ನೆ ಪೂಜಾಗೆ ಹೋದಲ್ಲೆಲ್ಲಾ ಎದುರಾಗುತ್ತಿದೆ. ಅದರಲ್ಲೂ ಆರಂಭದಲ್ಲೇ ಮೂರು ಸಿನಿಮಾಗಳನ್ನು ಜೆ.ಡಿ. ಜೊತೆ ಮಾಡುತ್ತಿದ್ದಾರೆ. ಇವೆಲ್ಲ ಹೇಗೆ ಸಾಧ್ಯ ಎಂದರೆ ನಂಬಿಕೆ ಎಂಬ ಉತ್ತರ ಪೂಜಾಗಾಂಧಿಯಿಂದ ಬರುತ್ತದೆ. “ಎರಡು ವರ್ಷಗಳ ಹಿಂದಷ್ಟೇ ನಮಗೆ ಪರಿಚಯವಾಯಿತು. ಜೆ.ಡಿಯವರ ಸಿನಿಮಾ ಪ್ರೀತಿ ನನಗೆ ಇಷ್ಟವಾಯಿತು. ಅವರಿಂದ ಸಾಕಷ್ಟು ಕಲಿತೆ. ಸಿನಿಮಾ, ಕಥೆ, ಮೇಕಿಂಗ್ ಅನ್ನು ನೋಡುವ ದೃಷ್ಟಿಕೋನವನ್ನು ಕೂಡಾ ಕಲಿತೆ. ಎಲ್ಲವೂ ಭರವಸೆಯ ಮೇಲೆ ನಡೆಯುತ್ತಿದೆ’ ಎನ್ನುವುದು ಪೂಜಾ ಗಾಂಧಿ ಮಾತು.