Advertisement

Election ದಿನಾಂಕದಲ್ಲೂ ಬೆಟ್ಟಿಂಗ್‌:ರಿಷಿ ಸುನಕ್‌ಗೆ ಮುಜುಗರ

01:07 AM Jun 24, 2024 | Team Udayavani |

ಲಂಡನ್‌: ಬ್ರಿಟನ್‌ ಸಂಸತ್‌ಗೆ ಅವಧಿ ಪೂರ್ವ ಚುನಾವಣೆ ಘೋಷಿಸಿರುವ ಪ್ರಧಾನಿ ರಿಷಿ ಸುನಕ್‌ ನೇತೃತ್ವದ ಸರಕಾರಕ್ಕೆ ಮತ್ತೊಂದು ಮುಜುಗರ ಉಂಟಾಗಿದೆ. ಸರಕಾರದ ಹಿರಿಯ ಅಧಿಕಾರಿಯೊಬ್ಬರು ಚುನಾವಣ ದಿನಾಂಕಕ್ಕೆ ಸಂಬಂಧಿಸಿದಂತೆಯೇ ಬೆಟ್ಟಿಂಗ್‌ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡಿದ್ದ ಆ ಅಧಿಕಾಯನ್ನು ಬ್ರಿಟನ್‌ನ ಬೆಟ್ಟಿಂಗ್‌ ನಿಯಂತ್ರಣ ಆಯೋಗ ತನಿಖೆ ನಡೆಸಿದೆ. ಈ ಬೆಳವಣಿಗೆಯಿಂದ ರಿಷಿ ಸುನಕ್‌ ಅವರು ಕ್ರುದ್ಧಗೊಂಡಿದ್ದಾರೆ.

Advertisement

ಜು.4ರಂದೇ ಸಂಸತ್‌ ಚುನಾವಣೆ ನಡೆಸಲಾಗುತ್ತದೆ ಎಂಬ ಬಗ್ಗೆ ಆ ಅಧಿಕಾರಿ ಬೆಟ್‌ ಕಟ್ಟಿದ್ದರು ಎಂದು ಆರೋಪಿಸಲಾಗಿದೆ. ನಿಕ್‌ ಮೇಸನ್‌ ಎಂಬ ಅಧಿಕಾರಿ ಚುನಾವಣ ದಿನಾಂಕ ಘೋಷಣೆಯ ಬೆಟ್ಟಿಂಗ್‌ ಹಿಂದೆ ಇದ್ದಾರೆ ಎಂಬ ಅಂಶವು ಈ ವರದಿಯಲ್ಲಿತ್ತು. ಈ ವಿವಾದವು ಈಗ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ. ವಿಪಕ್ಷ ಲೇಬರ್‌ ಪಾರ್ಟಿಯನ್ನು ಸೋಲಿಸಿ ಅಧಿಕಾರ ದಲ್ಲಿ ಮುಂದುವರಿಯಬೇಕು ಎಂಬ ರಿಷಿ ಸುನಕ್‌ ನೇತೃತ್ವದ ಕನ್ಸರ್ವೇಟಿವ್‌ ಪಕ್ಷಕ್ಕೆ ಈ ಪ್ರಕರಣದಿಂದ ಸವಾಲು ಎದುರಾಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next