Advertisement

ಬೆಟ್ಟಂಪಾಡಿ ಶಾಲೆ ರಸ್ತೆ ಕೆಸರುಮಯ

02:25 AM Jun 09, 2018 | Team Udayavani |

ನಿಡ್ಪಳ್ಳಿ: ಬೆಟ್ಟಂಪಾಡಿ- ಕೇಕನಾಜೆ – ಕೊಮ್ಮಂಡ ಮೂಲಕ ಬೆಟ್ಟಂಪಾಡಿ ಶಾಲೆಗೆ ಹೋಗುವ ರಸ್ತೆಗೆ ಮಳೆ ನೀರಿನೊಂದಿಗೆ ಕೊಚ್ಚಿ ಬಂದ ಮಣ್ಣಿನಿಂದ ಕೆಸರುಮಯವಾಗಿ ನಡೆದಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ ಕಳೆದ ಬೇಸಗೆ ಸಮಯದಲ್ಲಿ ಅಲ್ಪಸಂಖ್ಯಾಕ ನಿಗಮದಿಂದ 5 ಲಕ್ಷ ರೂ. ಮಂಜೂರಾಗಿತ್ತು. ರಸ್ತೆಯನ್ನು ಅಗೆದು ಹಾಕಿ ಅನಂತರ ಜಲ್ಲಿ ತಂದು ಹಾಸಲಾಗಿತ್ತು. ಅನಂತರ ಗುತ್ತಿಗೆದಾರರಾಗಲಿ, ಕೆಲಸದವರಾಗಲಿ ಅತ್ತ ಸುಳಿಯದೆ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಬೆಟ್ಟಂಪಾಡಿ ಸರಕಾರಿ ಪ್ರಾಥಮಿಕ ಶಾಲೆಗೆ ಈ ರಸ್ತೆಯ ಮೂಲಕವೇ   ಹೋಗಬೇಕಾಗಿರುವುದರಿಂದ ಶಾಲಾ ಮಕ್ಕಳಿಗೆ ನಡೆದುಕೊಂಡು ಹೋಗಲು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ತೆರಳುವ ಸಮಯದಲ್ಲಿ ಮತ್ತು ಶಾಲೆಯಿಂದ ಮನೆಗೆ ಹಿಂದಿರುಗುವ ಸಂದರ್ಭ ವಾಹನಗಳೂ ಸಂಚರಿಸುವುದರಿಂದ ಕೆಸರು ನೀರು ಎಲ್ಲೆಡೆ ಚಿಮ್ಮುತ್ತದೆ. ಇದರಿಂದ ಮಕ್ಕಳು ತುಂಬಾ ಕಷ್ಟ ಪಟ್ಟು ತೆರಳುವಂತಾಗಿದೆ.

ಶಾಲಾ ಮಕ್ಕಳಿಗೆ ತೊಂದರೆ
ರಸ್ತೆ ಕಾಂಕ್ರೀಟ್‌ ಮಾಡಲು ರಸ್ತೆ ಅಗೆದು ಹಾಕಿದ ಪರಿಣಾಮ ಈಗ ವಾಹನ ಸಂಚಾರ ಮತ್ತು ನಡೆದಾಡಲೂ ಸಾಧ್ಯವಿಲ್ಲ. ಶಾಲಾ ಮಕ್ಕಳಿಗಂತೂ ಬಹಳ ತೊಂದರೆಯಾಗಿದ್ದು, ಶಾಲೆಗೆ ಬರುವಾಗ ವಿದ್ಯಾರ್ಥಿಗಳ ಬಟ್ಟೆಗ ಳು  ಕೆಸರುಮಯವಾಗುತ್ತವೆ.
– ಸೀತಾರಾಮ ಗೌಡ ಮಿತ್ತಡ್ಕ, ದೈಹಿಕ ಶಿಕ್ಷಣ ಶಿಕ್ಷಕರು, ಬೆಟ್ಟಂಪಾಡಿ ಶಾಲೆ

ಪರ್ಯಾಯ ವ್ಯವಸ್ಥೆ ಕಲ್ಪಿಸಿ
ರಸ್ತೆಯನ್ನು ಅಗೆದು ಹಾಕಿದ ಪರಿಣಾಮ ಈಗ ತೊಂದರೆ ಅನುಭವಿಸುವಂತಾಗಿದೆ. ಮಳೆಗಾಲ ಆರಂಭಕ್ಕೆ ಮೊದಲೇ ಕಾಮಗಾರಿ ಮುಗಿಸಲು ನಾವು ಹೇಳಿದ್ದೆವು. ಈಗೀನ ಪರಿಸ್ಥಿತಿಯನ್ನು ಜಿಲ್ಲಾ ಪಂಚಾಯತ್‌, ಶಾಸಕರಿಗೂ ಮನವರಿಕೆ ಮಾಡಲಾಗಿದೆ. ಗುತ್ತಿಗೆದಾರರಿಗೂ ದೂರವಾಣಿ ಮೂಲಕ ತಿಳಿಸಲಾಗಿದೆ. ಆದಷ್ಟು ಬೇಗ ಇದ್ದಕ್ಕೆ ಪರ್ಯಾಯ  ವ್ಯವಸ್ಥೆ ಕಲ್ಪಿಸಬೇಕಾಗಿದೆ.
– ಜಗನ್ನಾಥ ಶೆಟ್ಟಿ ಕೊಮ್ಮಂಡ, ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯರು.

Advertisement

Udayavani is now on Telegram. Click here to join our channel and stay updated with the latest news.

Next