Advertisement

ಬೆಟ್ಟಂಪಾಡಿ ಉಪನ್ಯಾಸಕರ ಕೊರತೆ : ಶಾಸಕರಿಂದ ಪರಿಹರಿಸುವ ಭರವಸೆ

03:30 AM Aug 04, 2017 | Team Udayavani |

ನಿಡ್ಪಳ್ಳಿ: ಬೆಟ್ಟಂಪಾಡಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಿಲ್ಲದೆ ತರಗತಿ ನಡೆಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ದೂರವಾಣಿ ಮೂಲಕ ಶಾಸಕರಿಗೆ ವಿಷಯ ತಿಳಿಸಿದಾಗ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಶಾಸಕಿ ಶಕುಂತಳಾ ಟಿ. ಶೆಟ್ಟಿ ಆ. 3ರಂದು ಕಾಲೇಜಿಗೆ ಭೇಟಿ ನೀಡಿ ಸಮಸ್ಯೆ ಬಗ್ಗೆ ಆಲಿಸಿದರು. ಸಮಸ್ಯೆಗಳ ಬಗ್ಗೆ ಶಾಸಕರು ವಿದ್ಯಾರ್ಥಿಗಳಲ್ಲಿ ರಹಸ್ಯವಾಗಿ ಮಾಹಿತಿ ಪಡೆದುಕೊಂಡರು. ಅನಂತರ ಶಾಸಕರು ತತ್‌ಕ್ಷಣ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ, ಕಮಿಷನರ್‌ ಅಜಯ ನಾಗಭೂಷಣ್‌  ಮತ್ತು ಕಾಲೇಜಿನ ಜೆ.ಡಿ. ಉದಯ ಶಂಕರರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ ಸಮಸ್ಯೆಯ ಬಗ್ಗೆ ತತ್‌ಕ್ಷಣ ಸ್ಪಂದಿಸುವಂತೆ ವಿನಂತಿಸಿದರು. ಬಳಿಕ ಕೆಲವೇ ದಿನಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ಮಕ್ಕಳಿಗೆ ಭರವಸೆ ನೀಡಿದರು. ಕೆ.ಡಿ.ಪಿ. ಸದಸ್ಯ  ಕೃಷ್ಣ ಪ್ರಸಾದ್‌ ಆಳ್ವ, ಶಶಿಕುಮಾರ್‌ ಬೈಲಾಡಿ, ಮಾಧವ ಪೂಜಾರಿ ರೆಂಜ, ದಯಾನಂದ ರೈ, ನಾಗರಾಜ ಭಟ್‌ ಘಾಟೆ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next