Advertisement

ಬೆಟ್ಟಂಪಾಡಿ ಪ್ರ.ದ. ಕಾಲೇಜು: ಬೇಂದ್ರ್ ತೀರ್ಥ ಸ್ವಚ್ಛತಾ ಕಾರ್ಯ

02:59 PM Sep 13, 2018 | |

ಬೆಟ್ಟಂಪಾಡಿ : ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಚಿಲುಮೆ ಎಂದು ಹೆಗ್ಗಳಿಕೆಯನ್ನು ಹೊಂದಿರುವ ಬೆಂದ್ರ್ ತೀರ್ಥವನ್ನು ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಎನ್‌.ಎಸ್‌.ಎಸ್‌. ಘಟಕಗಳು, ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿ, ಸ್ಥಳೀಯರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯ ನಡೆಯಿತು. 

Advertisement

ಕಾಲೇಜಿನ ಆವರಣದಿಂದ ‘ಐತಿಹಾಸಿಕ ಪರಂಪರೆ ಉಳಿಸಿ’ ಕಾರ್ಯಕ್ರಮದಡಿ ವಿವಿಧ ಘೋಷಣೆಗಳೊಂದಿಗೆ ರೆಂಜದವರೆಗೂ ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆನಂತರ ಬೇಂದ್ರ್ ತೀರ್ಥದಲ್ಲಿ ವಿದ್ಯಾರ್ಥಿಗಳಿಂದ ಶ್ರಮದಾನ ಹಮ್ಮಿಕೊಂಡು, ಆ ಪರಿಸರವನ್ನು ಸ್ವಚ್ಛಗೊಳಿಸಿದರು. ಬೇಂದ್ರ್ ತೀರ್ಥದ ಪ್ರಮುಖ ಸ್ಥಳವಾದ ಕಲ್ಯಾಣಿಯಲ್ಲಿ ಕಟ್ಟಿದ್ದ ಪಾಸೆ, ಕಲ್ಲು, ಮಣ್ಣು, ಬದಿಯನ್ನು ವಿದ್ಯಾರ್ಥಿಗಳು ತೆಗೆದು ಶುಚಿಗೊಳಿಸಿದರು. ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಿ, ರಸ್ತೆಯಲ್ಲಿ ಉಂಟಾಗಿದ್ದ ಗುಂಡಿಗಳನ್ನು ಮುಚ್ಚಿದರು. ವಿದ್ಯಾರ್ಥಿಗಳೊಡನೆ ಸ್ಥಳೀಯರು ಸಹಕರಿಸಿದರು.

ಈ ಸ್ವಚ್ಛತಾ ಕಾರ್ಯಕ್ರಮದಿಂದ ಹಲವು ವರ್ಷಗಳಿಂದ ಕಣ್ಮರೆಯಾಗಿದ್ದ ಬಿಸಿನೀರಿನ ಸೆಲೆ ಮತ್ತೆ ತನ್ನ ಯಾಥಾಸ್ಥಿತಿಯನ್ನು ಪಡೆದುಕೊಂಡಿದ್ದು ಸ್ಥಳೀಯರಲ್ಲಿ, ಅಕ್ಕ- ಪಕ್ಕದ ಊರಿನವರಲ್ಲಿ ಹಾಗೂ ಯುವಕ ಮಂಡಲಗಳು ಸಂಭ್ರಮ ಪಟ್ಟಿವೆ.

ಏಕದಿನ ಸ್ವಚ್ಛತಾ ಶಿಬಿರದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ್‌
ವಹಿಸಿದ್ದರು. ಇರ್ದೆ ಬೆಂದ್ರ್ತೀರ್ಥ ಶಿವಾಜಿ ಫ್ರೆಂಡ್ಸ್‌ನ ರಕ್ಷಣ್‌ ರೈ, ಸುಬ್ರಹ್ಮಣ್ಯ ಭಟ್‌ ಮುಖ್ಯಅತಿಥಿಯಾಗಿದ್ದರು. ಪ್ರಾಂಶುಪಾಲ ರಾಧಾಕೃಷ್ಣ ಭಟ್‌ ಎನ್‌., ಉಪನ್ಯಾಸಕರಾದ ಡಾ| ಪೊಡಿಯ, ರಾಮ ಕೆ., ಹರಿಪ್ರಸಾದ್‌ ಎಸ್‌., ಡಾ| ಕಾಂತೇಶ ಸಣ್ಣಿಂಗಮ್ಮನವರ, ಮಂಜುಳದೇವಿ ಪಿ., ಮಮತ, ಡಾ| ನಿರೀಕ್ಷಣ್‌ ಸಿಂಗ್‌ ಗೌಗಿ ಎಸ್‌. ಕೆ., ದೇವರಾಜ ಆರ್‌., ಉದಯರಾಜ್‌ ಎಸ್‌. ಉಪಸ್ಥಿತರಿದ್ದರು. ಕೃತಿಕಾ ಸ್ವಾಗತಿಸಿ, ಸ್ವತ್ಛತಾ ಕಾರ್ಯಕ್ರಮದ ವರದಿಯನ್ನು ಅಕ್ಷಯ್‌ ಓದಿದರು. ಐಶ್ವರ್ಯ ಸಾಲ್ಯಾನ್‌ ವಂದಿಸಿದರು. ಡಾ| ಮುರಳಿ ಕೆ.ವಿ. ಮತ್ತು ರಶ್ಮಿ ಜೆ.ಆರ್‌. ಶಿಬಿರ ಸಂಯೋಜಿಸಿದ್ದರು. ಲಿಖಿತ್‌ ರಾಜ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next