Advertisement

ವಿಶ್ವಾಸದ್ರೋಹ; ಬಿಎಸ್ ಎಫ್ ಮಾಜಿ ಯೋಧ ತೇಜ್ ಬಹದ್ದರೂ ಜೆಜೆಪಿಗೆ ಗುಡ್ ಬೈ

09:52 AM Oct 27, 2019 | Team Udayavani |

ಹರ್ಯಾಣ: ಜನನಾಯಕ್ ಜನತಾ ಪಕ್ಷದ ವರಿಷ್ಠ ದುಶ್ಯಂತ್ ಚೌಟಾಲ ವಿಶ್ವಾಸದ್ರೋಹ ಎಸಗಿರುವುದಾಗಿ ಆರೋಪಿಸಿರುವ ಹರ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಮನೋಹರ್ ಲಾಲ್ ಖಟ್ಟರ್ ವಿರುದ್ಧ ಸ್ಪರ್ಧಿಸಿದ್ದ ಬಿಎಸ್ ಎಫ್ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ಜೆಜೆಪಿ ಪಕ್ಷಕ್ಕೆ ಗುಡ್ ಬೈ ಹೇಳಿರುವುದಾಗಿ ಘೋಷಿಸಿದ್ದಾರೆ.

Advertisement

ಭಾರತೀಯ ಜನತಾ ಪಕ್ಷದ ಜತೆ ಕೈಜೋಡಿಸುವುದಾಗಿ ದುಶ್ಯಂತ್ ಪಟೇಲ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಜೆಜೆಪಿ ಪಕ್ಷವನ್ನು ತೊರೆಯುತ್ತಿರುವುದಾಗಿ ಬಿಎಸ್ಎಫ್ ನಿಂದ ವಜಾಗೊಂಡಿರುವ ತೇಜ್ ಬಹದ್ದೂರ್ ತಿಳಿಸಿದ್ದಾರೆ.

ಯೋಧರಿಗೆ ಕಳಪೆ ಗುಣಮಟ್ಟದ ಆಹಾರವನ್ನು ನೀಡುತ್ತಿರುವುದಾಗಿ ತೇಜ್ ಬಹದ್ದೂರ್ ಆರೋಪಿಸಿದ್ದ ವೀಡಿಯೋ ವೈರಲ್ ಆದ ನಂತರ ಬಿಎಸ್ ಎಫ್ ನಿಂದ ವಜಾಗೊಳಿಸಲಾಗಿತ್ತು. ಸೆಪ್ಟೆಂಬರ್ ನಲ್ಲಿ ತೇಜ್ ಬಹದ್ದೂರ್ ಜನನಾಯಕ್ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

2017ರಲ್ಲಿ ಬಿಎಸ್ ಎಫ್ ನಿಂದ ವಜಾಗೊಂಡ ನಂತರ ತೇಜ್ ಬಹದ್ದೂರ್ ಯಾದವ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ನಂತರ ಬಿಎಸ್ಪಿ, ಎಸ್ಪಿ ಮತ್ತು ಆರ್ ಎಲ್ ಡಿ ಮಹಾಮೈತ್ರಿಕೂಟದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಸಮಾಜವಾದಿ ಪಕ್ಷ ತೊರೆದ ನಂತರ ಯಾದವ್ ಜೆಜೆಪಿ ಪಕ್ಷ ಸೇರ್ಪಡೆಗೊಂಡಿದ್ದರು. ಅಲ್ಲದೇ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಮನೋಹರ್ ಲಾಲ್ ಖಟ್ಟರ್ ವಿರುದ್ಧ ಸ್ಪರ್ಧಿಸಿ ಪರಾಜಯಗೊಂಡಿದ್ದರು.

Advertisement

ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯದೆ ಅಧಿಕಾರಕ್ಕೆ ಏರಲು ಪಕ್ಷೇತರರ ಹಾಗೂ ಜೆಜೆಪಿ ಬೆಂಬಲ ಕೋರಿತ್ತು. ಈ ನಿಟ್ಟಿನಲ್ಲಿ ದುಶ್ಯಂತ್ ಚೌಟಾಲ ಬಿಜೆಪಿಗೆ ಬೆಂಬಲ ಘೋಷಿಸಿದ್ದರು. ಚೌಟಾಲಗೆ ಉಪಮುಖ್ಯಮಂತ್ರಿ ಹುದ್ದೆ ಕೊಡುವುದಾಗಿ ಬಿಜೆಪಿ ಆಫರ್ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next