ಬೇತಾಳದ ಬಗ್ಗೆ ಹತ್ತಾರು ಹಾರರ್ ಕಥೆಗಳನ್ನುಕೇಳಿರಬಹುದು. ಈಗ ಅಂಥದ್ದೇ ಒಂದುಕಥೆ ಸಿನಿಮಾ ರೂಪದಲ್ಲಿ ತೆರೆಮೇಲೂ ಬರಲು ರೆಡಿಯಾಗುತ್ತಿದೆ. ಅಂದಹಾಗೆ, ಈ ಕಥೆ ಹೊಂದಿರುವ ಸಿನಿಮಾದ ಹೆಸರೇ “ಬೇತಾಳ’. ಈ ಹಿಂದೆ “ಸಮಾಗಮ’ಹಾಗೂ “ದೇವಯಾನಿ’ ಎಂಬಚಿತ್ರಗಳನ್ನುನಿರ್ದೇಶಿಸಿದ್ದ, ಕಸ್ತೂರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ ಇದಾಗಿದೆ.
“ಬೇತಾಳ’ ಚಿತ್ರದಲ್ಲಿ ಸ್ಟೈಲ್ ಶಿವು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಅನಿಕ್, ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ್,ಕಾವ್ಯಗೌಡ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಮಾತಿನಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಇತ್ತೀಚೆಗೆ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಚಿತ್ರತಂಡ ಪತ್ರಕರ್ತರ ಮುಂದೆ ಬಂದಿತ್ತು.
ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಕಸ್ತೂರಿ ಜಗನ್ನಾಥ್, “ಹೆಸರೇ ಹೇಳುವಂತೆ ಇದೊಂದು ಹಾರರ್-ಕಾಮಿಡಿ ಕಥಾಹಂದರ ಹೊಂದಿರುವ ಸಿನಿಮಾ. ಇದರ ಹೀರೋ ಶಿವು ಒಬ್ಬ ಸಾಫ್ಟ್ವೇರ್ ಎಂಜಿನಿಯರ್. ತನ್ನ ಮನೆಯಲ್ಲಿ ಆಗಾಗಕೆಟ್ಟ ಕನಸುಗಳು ಬೀಳುತ್ತಿದ್ದವೆಂದು ಆತ ಮನೆ ಬದಲಿಸಲು ಮುಂದಾಗುತ್ತಾನೆ. ಸಾಕಷ್ಟು ಹುಡುಕಾಡಿದ ಮೇಲೆ ಕೊನೆಗೂ ಆತನಿಗೊಂದು ಮನೆ ಸಿಗುತ್ತದೆ. ಆ ಮನೆಗೆ ಬಂದ ನಂತರ ಅಲ್ಲೊಂದು ದೆವ್ವ ಇರುವುದು ಗೊತ್ತಾಗುತ್ತದೆ. ಆ ದೆವ್ವಕ್ಕೆ ಒಂದು ಆಸೆ ಇರುತ್ತದೆ, ಅದನ್ನು ಪೂರೈಸಿದರೆ ತಾನು ಮನೆ ಬಿಟ್ಟು ಹೋಗುವುದಾಗಿ ಶಿವುಗೆ ತಿಳಿಸುತ್ತದೆ. ಶಿವು ಅದರ ಆಸೆ ಪೂರೈಸಿ ದನೇ ಇಲ್ಲವೇ ಎನ್ನುವುದೇ “ಬೇತಾಳ’ ಸಿನಿಮಾದಕಥೆ’ ಎಂದು ಚಿತ್ರದಕಥೆಯ ಎಳೆ ಬಿಟ್ಟುಕೊಟ್ಟರು.
“ಬೇತಾಳ’ದ ನಾಯಕ ನಟ ಸ್ಟೈಲ್ ಶಿವು ಮಾತನಾಡಿ, “ಸಮಾನ ಮನಸ್ಕ ಸ್ನೇಹಿತರೆಲ್ಲ ಸೇರಿ ಈ ಸಿನಿಮಾ ನಿರ್ಮಿಸಿದ್ದೇವೆ. ಈ ಮೊದಲು ಒಂದಷ್ಟು ಸಿನಿಮಾಗಳಿಗೆ ಫೈನಾನ್ಸ್ ಮಾಡಿದ್ದೆ. ಹಾರರ್ ಸಬ್ಜೆಕ್ಟ್ ಆದ್ರೂ ಅದನ್ನು ಕಾಮಿಡಿಯಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ದೆವ್ವದ ಆಸೆ ಪೂರೈಸಲು ಹೀರೋ ಏನೆಲ್ಲಾ ಕಸರತ್ತು ಮಾಡುತ್ತಾನೆ ಅನ್ನೋದು ಸಿನಿಮಾ. ಇದರಲ್ಲಿ ನಾಲ್ಕು ಆ್ಯಕ್ಷನ್ ಸೀನ್‌ಗಳಿದ್ದು, ಪ್ರತಿ ಸೀನ್‌ಗಳೂ ಕುತೂಹಲ ಕೆರಳಿಸುತ್ತ ಸಾಗುತ್ತದೆ. ಈಗಾಗಲೇ ಬೆಂಗಳೂರು ಸುತ್ತಮುತ್ತ ಸಿನಿಮಾದ ಟಾಕಿ ಪೋರ್ಷನ್ ಚಿತ್ರೀಕರಣ ಮುಗಿಸಿದ್ದೇವೆ’ ಎಂದರು.
ಚಿತ್ರದ ಮತ್ತೂಬ್ಬ ನಟ ಅನಿಕ್ ಮಾತನಾಡಿ, “ಈ ಸಿನಿಮಾದಲ್ಲಿ ನನ್ನದು ಎರಡು ಶೇಡ್ ಇರುವ ಕ್ಯಾರೆಕ್ಟರ್. ಒಂದ್ರಲ್ಲಿ ಲವರ್ ಬಾಯ್ ಆಗಿ ಕಾಣಿಸಿದರೆ, ಮತ್ತೂಂದರಲ್ಲಿ ಕ್ವಾಟ್ಲೆಕೊ ಡುವ ದೆವ್ವವಾಗಿ ಕಾಣಿಸಿಕೊಂಡಿದ್ದೇನೆ’ ಎಂದು ಹೇಳಿದರು. ಚಿತ್ರದ ನಟಿಯರಾದಕಾವ್ಯಾ ಗೌಡ, ಸೋನು ಪಾಟೀಲ್ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. “ಭೂಮಿಕಾ ಸಿನಿ ಕ್ರಿಯೇಶನ್ಸ್’ ಮೂಲಕ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ರಾಶಿ ಕಿಶೋರ್ ಸಂಗೀತ ನೀಡಿದ್ದಾರೆ. ಶಿವು ಬೆರಗಿ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಸದ್ಯ ತನ್ನ ಮಾತಿನಭಾಗದ ಚಿತ್ರೀಕರಣ ಮುಗಿಸಿಕೊಂಡಿರುವ “ಬೇತಾಳ’ದ ಹಾಡುಗಳನ್ನು, ಚಿಕ್ಕಮಗಳೂರು, ಸಕಲೇಶಪುರ ಮೊದಲಾದಕಡೆಗಳಲ್ಲಿ ಚಿತ್ರೀಕರಿಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.