Advertisement

ಮನೆಯಲ್ಲಿದ್ದು ಕೋವಿಡ್ ಗೆಲ್ಲೋಣ: ತಹಶೀಲ್ದಾರ್‌ ಹೊಳೆಪ್ಪಗೋಳ

05:25 PM Apr 15, 2020 | Naveen |

ಬೆಟಗೇರಿ: ಗ್ರಾಮಸ್ಥರು ಸಹ ಬೇರೆ ಊರುಗಳಿಗೆ ಹೋಗಬಾರದು. ಸ್ಥಳೀಯರು ತಮ್ಮ ಗ್ರಾಮಕ್ಕೆ ಸ್ವಯಂ ದಿಗ್ಬಂದನ್‌ ಹಾಕಿಕೊಳ್ಳಬೇಕು. ಎಲ್ಲರೂ ಮನೆಯಲ್ಲಿದ್ದು ಕೋವಿಡ್ ಗೆಲ್ಲೋಣ ಎಂದು ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಹೇಳಿದರು.

Advertisement

ಗ್ರಾಮದಲ್ಲಿ ಸ್ಥಾಪಿಸಲಾದ ಪೊಲೀಸ್‌ ಚೆಕ್‌ಪೋಸ್ಟ್‌ಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ಪೊಲೀಸ್‌ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಹಲವಾರು ಸಲಹೆ, ಸೂಚನೆ ನೀಡಿದರು. ರಾಜ್ಯದಲ್ಲಿ ಮಹಾಮಾರಿ ಕೋವಿಡ್ ವೈರಸ್‌ ಸೋಂಕಿತರ ಸಂಖ್ಯೆ ದಿನದಿಂದ-ದಿನಕ್ಕೆ ಹೆಚ್ಚುತ್ತಿದೆ. ದೇಶಾದ್ಯಂತ ಹರಡುತ್ತಿರುವ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದರು.

ಗೋಕಾಕ ಡಿವೈಎಸ್‌ಪಿ ಪ್ರಭು ಡಿ.ಟಿ ಮಾತನಾಡಿ, ಗ್ರಾಮದಲ್ಲಿ ಕಿರಾಣಿ ಅಂಗಡಿ ಹಾಗೂ ಹಾಲಿನ ಡೈರಿ ಬಾಗಿಲನ್ನು ನಿಗದಿತ ಅವಧಿಯಲ್ಲಿ ಮಾತ್ರ ತೆರೆಯಬೇಕು. ಬೈಕ್‌ ಮತ್ತು ಕಾಲ್ನಡೆಗೆಯಲ್ಲಿ ಅನವಶ್ಯಕವಾಗಿ ತಿರುಗಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯರಿಗೆ ಖಡಕ್‌ ಸೂಚನೆ ನೀಡಿದರು.

ಈ ವೇಳೆ ನೋಡಲ್‌ ಅಧಿಕಾರಿ ಜಿ.ಬಿ. ಬಳಿಗಾರ, ಗೋಕಾಕ ಟಿಎಚ್‌ಒ ಡಾ| ಆಂಟಿನ್‌, ಗೋಕಾಕ ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಗ್ರಾಪಂ ಪಿಡಿಒ ಎಚ್‌.ಎನ್‌. ಬಾವಿಕಟ್ಟಿ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಗ್ರಾಮಲೆಕ್ಕಾಧಿಕಾರಿ ಜೆ.ಎಂ. ನದಾಫ್‌, ಪಿಎಚ್‌ಸಿ ವೈದ್ಯಾ ಧಿಕಾರಿ ರಾಜೇಶ್ವರಿ ಹಿರೇಮಠ, ಎಂ.ವಿ. ಹಿರೇಮಠ, ರಮೇಶ ಅಳಗುಂಡಿ, ಕುತುಬು ಮಿರ್ಜಾ ನಾಯ್ಕ, ಶ್ರೀಧರ ದೇಯಣ್ಣವರ, ಸುರೇಶ ಬಾಣಸಿ ಇದ್ದರು .

Advertisement

Udayavani is now on Telegram. Click here to join our channel and stay updated with the latest news.

Next