Advertisement
ಸ್ತನ್ಯಪಾನ : “ಆರೋಗ್ಯಕರ ವಿಶ್ವಕ್ಕಾಗಿ ಸ್ತನ್ಯಪಾನವನ್ನು ಬೆಂಬಲಿಸಿ’ ಎಂಬುದು ಈ ವರ್ಷದ ವಿಶ್ವ ಸ್ತನ್ಯಪಾನ ವಾರದ ಧ್ಯೇಯೋಕ್ತಿ. ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ನಾವು ಅಭೂತಪೂರ್ವ ಪರಿಸ್ಥಿತಿಯನ್ನು ಎದುರಿಸುತ್ತಿರುವುದರಿಂದ ಈ ವಿಷಯದ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಈಗ ಮುಖ್ಯ. ಕೋವಿಡ್ ವೈರಸ್ ಸೋಂಕಿನ ಬೆದರಿಕೆ ಶೀಘ್ರದಲ್ಲೇ ಕಣ್ಮರೆಯಾಗುವುದಿಲ್ಲ ಎಂಬುದು ಬಹು ಚಿಂತಾಜನಕ ಸಂಗತಿ. ಈ ಸಾಂಕ್ರಾಮಿಕವು ಪ್ರಪಂಚದಾದ್ಯಂತ ಸಾಮಾಜಿಕ ಕಾರ್ಯಚಟುವಟಿಕೆ, ಆರ್ಥಿಕತೆ ಮತ್ತು ಆರೋಗ್ಯ ರಕ್ಷಣೆಗೆ ಅಡೆತಡೆಯನ್ನು ಉಂಟುಮಾಡಿದೆ. ಈ ಸಂಪೂರ್ಣ ಸಾಂಕ್ರಾಮಿಕ ರೋಗದ ಅತ್ಯಂತ ಆತಂಕಕಾರಿ ಸಂಗತಿಯೆಂದರೆ, ಅದು ಪ್ರಾರಂಭವಾದ ತಿಂಗಳುಗಳ ಅನಂತರವೂ ಕಡಿಮೆಯಾಗುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿಲ್ಲ. ಕೋವಿಡ್ – 19 ಸೋಂಕು ತಾಯಂದಿರು ಮತ್ತು ನವಜಾತ ಶಿಶು, ಇವರಿಬ್ಬರಿಗೂ ವಿಶೇಷವಾಗಿ, ನವಜಾತ ಶಿಶುವಿನ ಫಲಿತಾಂಶಗಳ ಮೇಲಿನ ಸಂಭವನೀಯ ಪರಿಣಾಮ ಮತ್ತು ಸ್ತನ್ಯಪಾನದೊಂದಿಗೆ ತಾಯಿಯ ಹೊಂದಾಣಿಕೆ ಇವುಗಳ ಮೇಲೆ ಒಂದು ವಿಶಿಷ್ಟ ಸವಾಲನ್ನು ಒಡ್ಡಿದೆ. ಈ ಸಂದರ್ಭದಲ್ಲಿ, ಸ್ತನ್ಯಪಾನವು ತಾಯಿ ಮತ್ತು ಮಗುವಿನ ಆರೋಗ್ಯವನ್ನು ಸುಧಾರಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕುಟುಂಬಗಳಿಗೆ ಪ್ರಯೋಜನಗಳನ್ನು ಸೂಚಿಸುತ್ತದೆ ಮತ್ತು ಸಕಾರಾತ್ಮಕ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮವನ್ನು ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯೂ ಇದನ್ನು ತೀವ್ರವಾಗಿ ಬೆಂಬಲಿಸುವುದರ ಮುಖಾಂತರ ಸ್ತನ್ಯಪಾನವನ್ನು ಪ್ರೋತ್ಸಾಹಿಸಿದೆ. ಪ್ರಸ್ತುತ ವೈಜ್ಞಾನಿಕ ಜ್ಞಾನದ ಪ್ರಕಾರ, ಕೋವಿಡ್ – 19 ಸೋಂಕುಪೀಡಿತ ತಾಯಿಯ ಎದೆ ಹಾಲನ್ನು ಪ್ರಸರಣ ವಾಹಕವೆಂದು ಪರಿಗಣಿಸಲಾಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.
Related Articles
Advertisement
ಸ್ತನ್ಯಪಾನಕ್ಕಾಗಿ ಉತ್ತಮ ಅಭ್ಯಾಸಗಳು :
- ಮಗು ಹುಟ್ಟಿದ ಒಂದು ಗಂಟೆಯೊಳಗೆ ಸ್ತನ್ಯಪಾನವನ್ನು ಪ್ರಾರಂಭಿಸಿ. ಹೆರಿಗೆಯಾದ ಮೊದಲ ಗಂಟೆಯಲ್ಲಿ ಸ್ತನ್ಯಪಾನವನ್ನು ಪ್ರಾರಂಭಿಸಲು ಸಾಧ್ಯವಾಗದ ತಾಯಂದಿರು ಸಾಧ್ಯವಾದಷ್ಟು ಬೇಗ ಸ್ತನ್ಯಪಾನ ಮಾಡುವಂತೆ ಬೆಂಬಲ ನೀಡಬೇಕು.
- ತಲೆಕೆಳಗಾದ ಅಥವಾ ಹಿಂದೆಗೆದುಕೊಂಡ ಮೊಲೆತೊಟ್ಟುಗಳಂತಹ, ಸ್ತನ್ಯಪಾನಕ್ಕೆ ಅಡ್ಡಿಯುಂಟು ಮಾಡುವ ತೊಂದರೆಗಳನ್ನು ಗರ್ಭಾವಸ್ಥೆಯಲ್ಲಿಯೇ ನೋಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಧನಾತ್ಮಕ ಸ್ತನ್ಯಪಾನ ಅನುಭವಕ್ಕೆ ಇವು ಅಡ್ಡಿಯಾಗುವುದಿಲ್ಲ. ಜೀವನದ ಮೊದಲ 6 ತಿಂಗಳು ಸಂಪೂರ್ಣ ಸ್ತನ್ಯಪಾನವನ್ನು ಮಾತ್ರ ಪ್ರೋತ್ಸಾಹಿಸಬೇಕು.
- ತಾಯಿ ಕೋವಿಡ್ 19 ಲಕ್ಷಣರಹಿತವಾಗಿದ್ದರೆ, ಕಾಂಗರೂ ಮದರ್ ಕೇರ್ (ಓMಇ) ಸೇರಿದಂತೆ ಚರ್ಮದಿಂದ ಚರ್ಮಕ್ಕೆ ಸಂಪರ್ಕವನ್ನು ಅಭ್ಯಾಸ ಮಾಡಲು ವಿಶೇಷವಾಗಿ ಜನನದ ಅನಂತರ ಮತ್ತು ಸ್ತನ್ಯಪಾನ ಸ್ಥಾಪನೆಯ ಸಮಯದಲ್ಲಿ ತಾಯಿ ಮತ್ತು ನವಜಾತ ಶಿಶು ಇವರಿಬ್ಬರನ್ನು ಪ್ರೋತ್ಸಾಹಿಸಬೇಕು. ತಾಯಿ ಕೋವಿಡ್ 19 ರೋಗಲಕ್ಷಣವನ್ನು ಹೊಂದಿದ್ದರೆ, ಆರೋಗ್ಯಕರ ಆರೈಕೆದಾರರಿಂದ ಕೆಎಂಸಿಯನ್ನು ಒದಗಿಸಬಹುದು. ಕಡಿಮೆ ಜನನ ತೂಕದ ಶಿಶುಗಳು ಮತ್ತು ಅವಧಿಪೂರ್ವ ಶಿಶುಗಳ ಸಂದರ್ಭದಲ್ಲಿ (ಗರ್ಭಧಾರಣೆಯ 37 ವಾರಗಳ ಮೊದಲು ಜನಿಸಿದವರು) ಕೆಎಂಸಿಯನ್ನು ಪ್ರೋತ್ಸಾಹಿಸಬೇಕು.
- ತಾತ್ಕಾಲಿಕ ಬೇರ್ಪಡಿಸುವಿಕೆಯ ಸಮಯದಲ್ಲಿ ಹಾಲುಣಿಸುವ ಉದ್ದೇಶವನ್ನು ಹೊಂದಿರುವ ತಾಯಂದಿರು ಹಾಲು ಪೂರೈಕೆಯನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ತಮ್ಮ ಎದೆಹಾಲನ್ನು ಹಿಂಡಿ ತೆಗೆಯಲು ಪ್ರೋತ್ಸಾಹಿಸಬೇಕು.
- ಸಾಧ್ಯವಾದರೆ, ಮೀಸಲಾದ ಸ್ತನ ಪಂಪ್ ಒದಗಿಸಬೇಕು ಮತ್ತು ಅದನ್ನು ಬಳಸುವಾಗ ಪ್ರಮಾಣಿಕ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಎದೆ ಹಾಲು ಹಿಂಡಿ ತೆಗೆಯುವ ಮೊದಲು, ತಾಯಂದಿರು ಕೈ ನೈರ್ಮಲ್ಯವನ್ನು ಅಭ್ಯಾಸ ಮಾಡಬೇಕು. ಪ್ರತಿ ಸಲ ಪಂಪಿಂಗ್ ಮಾಡಿ ಆದ ನಂತರ, ಎದೆ ಹಾಲಿನ ಸಂಪರ್ಕಕ್ಕೆ ಬರುವ ಎಲ್ಲಾ ಭಾಗಗಳನ್ನು ಚೆನ್ನಾಗಿ ತೊಳೆಯಬೇಕು ಮತ್ತು ಉತ್ಪಾದಕರ ಸೂಚನೆಯಂತೆ ಇಡೀ ಪಂಪ್ ಅನ್ನು ಸೂಕ್ತವಾಗಿ ಸೋಂಕುರಹಿತಗೊಳಿಸಬೇಕು. ಹಿಂಡಿ ತೆಗೆದ ಎದೆ ಹಾಲನ್ನು ನವಜಾತ ಶಿಶುವಿಗೆ 60 ವರ್ಷಕ್ಕಿಂತ ಕೆಳಗಿನ ಆರೋಗ್ಯವಂತ ಆರೈಕೆದಾರರು ನೀಡಬೇಕು.
- ಮುಖವಾಡ ಧರಿಸುವುದು ಮತ್ತು ಕೈ ನೈರ್ಮಲ್ಯವನ್ನು ಅಭ್ಯಾಸ ಮಾಡುವುದು ಸೇರಿದಂತೆ ಮುಖ ಮತ್ತು ಉಸಿರಾಟದ ಶಿಷ್ಟಾಚಾರವನ್ನು (ಕೆಮ್ಮು ಅಥವಾ ಸೀನುವಿಕೆಯನ್ನು ತಪ್ಪಿಸಲು) ತಾಯಿ ಹಾಗೂ ಪಾಲನೆ ಮಾಡುವವರನ್ನು ಪ್ರೋತ್ಸಾಹಿಸಬೇಕು.
- 6 ತಿಂಗಳಿಂದ 2 ವರ್ಷ ವಯಸ್ಸಿನವರೆಗೆ ವಯಸ್ಸಿಗೆ ಸೂಕ್ತವಾದ, ಸಮ ರ್ಪಕ, ಸುರಕ್ಷಿತ ಮತ್ತು ಸರಿಯಾಗಿ ಪೂರಕ ಆಹಾರವನ್ನು ಪರಿಚಯಿಸಿ.
- 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರೆಗೆ ಸ್ತನ್ಯಪಾನವನ್ನು ಮುಂದುವರಿಸಿ. ಕೋವಿಡ್-19 ಹೊಂದಿರುವ ತಾಯಿ ಅಥವಾ ಆಸ್ಪತ್ರೆಗೆ ತನಿಖೆಗೆಂದು
- ಪರೀಕ್ಷೆಯು ಸಕಾರಾತ್ಮಕವಾಗಿದ್ದರೆ (ಪೊಸಿಟಿವ್), ಪರೀಕ್ಷಾ ಫಲಿತಾಂಶಗಳು ಋಣಾತ್ಮಕ (ನೆಗೆಟಿವ್) ಆಗುವವರೆಗೆ ತಾಯಿ ಮತ್ತು ನವಜಾತ ಶಿಶುವನ್ನು ತಾತ್ಕಾಲಿಕವಾಗಿ ಬೇರ್ಪಡಿಸುವುದನ್ನು ಮುಂದುವರಿಸಬೇಕು.
- ಆದರೂ ತಾಯಿ ಸಿದ್ಧಳಿದ್ದರೆ, ಮಗುವನ್ನು ತಾಯಿಗೆ ನೀಡಬಹುದು. ಕಟ್ಟುನಿಟ್ಟಾದ ಕೈ ಮತ್ತು ಸ್ತನ ನೈರ್ಮಲ್ಯವನ್ನು ಅನುಸರಿಸಬೇಕು. ಹಾಲುಣಿಸುವಾಗ ತಾಯಿ ಪ್ರತ್ಯೇಕ ನಿಲುವಂಗಿ (ಗೌನ್) ಮತ್ತು ಮುಖವಾಡ (ಮಾಸ್ಕ್) ಧರಿಸಬೇಕು.
- ಪ್ರತೀ ಸಲ ಸ್ತನ್ಯಪಾನ ನೀಡುವ ಮೊದಲು ಮತ್ತು ನವಜಾತ ಶಿಶುವಿನೊಂದಿಗೆ ಇತರ ನಿಕಟ ಸಂಪರ್ಕದ ಸಮಯದಲ್ಲಿ ತಾಯಿಯು ಶಸ್ತ್ರಚಿಕಿತ್ಸಾ ಮುಖವಾಡವನ್ನು ಹೊಂದಿರಬೇಕು. ತಾಯಿ ಎನ್ 95 ಅಥವಾ ಎಫ್ಎಫ್ಪಿ 2/ಎಫ್ಎಫ್ಪಿ ಮಾಸ್ಕ್ ಬಳಸುವ ಅಗತ್ಯವಿಲ್ಲ. ನವಜಾತ ಶಿಶುವಿನ ಸಂಪರ್ಕದ ಸಮಯದಲ್ಲಿ ಮಾಸ್ಕ್ ಬಳಸಬೇಕು.
- ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಕಟ್ಟುನಿಟ್ಟಾದ ಕೈ ನೈರ್ಮಲ್ಯ ಅಭ್ಯಾಸಗಳನ್ನು (ಹ್ಯಾಂಡ್ ಸ್ಯಾನಿಟೈಸರ್‌ಗಿಂತ ಸಾಬೂನು ಮತ್ತು ನೀರಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ಕೈ ತೊಳೆಯುವುದು) ಅಳವಡಿಸಿಕೊಳ್ಳಬೇಕು.
- ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿರುವ ತಾಯಿಯನ್ನು (ಜ್ವರ, ಕೆಮ್ಮು ಮತ್ತು ಉಸಿರಾಟದ ಸ್ರವಿಸುವಿಕೆಯುಳ್ಳ) ಮತ್ತು ತನ್ನ ನವಜಾತ ಶಿಶುವನ್ನು ನೋಡಿಕೊಳ್ಳಲು ತುಂಬಾ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ಕೋವಿಡ್ – 19ಗಾಗಿ ಆರ್‌ಟಿ-ಪಿಸಿಆರ್-ಆರ್‌ಎನ್‌ಎ ಪರೀಕ್ಷೆಯ ಫಲಿತಾಂಶ ಬರುವವರೆಗೆ ತಾತ್ಕಾಲಿಕವಾಗಿ ಬೇರ್ಪಡಿಸಬೇಕು.
- ತಾಯಿ ಮತ್ತು ನವಜಾತ ಶಿಶುವನ್ನು ಬೇರ್ಪಡಿಸುವ ಸಂದರ್ಭದಲ್ಲಿ, ಎದೆಹಾಲು ಬದಲಾಗಿ ತಾಯಿಯು ತನ್ನ ಎದೆ ಹಾಲನ್ನು ಹಿಂಡಿ ತೆಗೆಯಲು ಪ್ರೋತ್ಸಾಹಿಸಬೇಕು ಮತ್ತು ಅದನ್ನು ಆರೋಗ್ಯಕರ ಆರೈಕೆದಾರರಿಂದ ನವಜಾತ ಶಿಶುವಿಗೆ ನೀಡಬೇಕು.
- ಹಿಂಡಿ ತೆಗೆದ ಎದೆಹಾಲನ್ನು ಪ್ಯಾಶ್ಚರೀಕರಿಸಬಾರದು (ಬಿಸಿ ಮಾಡುವುದು ಅಥವಾ ಕುದಿಸುವುದು). ಏಕೆಂದರೆ ಇದು SARS – COV-2 ಅನ್ನು ಹೊಂದಿದ್ದರೂ, ಸೋಂಕಿನ ವಾಹನವೆಂದು ನಂಬಲಾಗುವುದಿಲ್ಲ. ಇದಲ್ಲದೆ ಪ್ಯಾಶ್ಚರೀಕರಣವು ಮಾನವ ಹಾಲಿನ ಜೈವಿಕ ಮತ್ತು ರೋಗನಿರೋಧಕ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಇದರ ಬದಲಾಗಿ ಡಬಲ್ ವಾರ್ಮಿಂಗ್ ಅನ್ನು ಬಳಸಬಹುದು.
- ಹಿಂಡಿ ತೆಗೆದ ಹಾಲು ಲಭ್ಯವಿಲ್ಲದಿದ್ದರೆ, ದಾನಿ ಮಾನವ ಹಾಲಿನೊಂದಿಗೆ ಆಹಾರದ ಕಾರ್ಯಸಾಧ್ಯತೆಯನ್ನು ಅನ್ವೇಷಿಸಿ ಅದನ್ನು ನೀಡಬಹುದು. ಇದು ಸಾಧ್ಯವಾಗದಿದ್ದರೆ, ಆರ್ದ್ರ ಶುಶ್ರೂಷೆಯನ್ನು (ಇನ್ನೊಬ್ಬ ಮಹಿಳೆ ಮಗುವಿಗೆ ಹಾಲುಣಿಸಬಹುದು) ಅಥವಾ ಸೂಕ್ತವಾದ ಎದೆಹಾಲು ಬದಲಿಗಳನ್ನು ಪರಿಗಣಿಸಿ
- ಹಾಲು ಸರಬರಾಜನ್ನು ಪುನಃ ಸ್ಥಾಪಿಸಲು ಮತ್ತು ಸ್ತನ್ಯಪಾನವನ್ನು ಮುಂದುವರಿಸಲು ಚೇತರಿಕೆಯ ಅನಂತರ ತಾಯಿಗೆ ಸಹಾಯವನ್ನು ಒದಗಿಸಬೇಕು.
- ಮನೆಯಲ್ಲಿರುವ ಎಲ್ಲ ಜನರು ಪ್ರಸ್ತುತ ಕೋವಿಡ್-19 ಹೊಂದಿರುವ ಮಹಿಳೆಗೆ ಮಗುವಿನ ಜನನದ ಅನಂತರ 14 ದಿನಗಳವರೆಗೆ ಮನೆಯಲ್ಲಿ ಸ್ವಯಂ-ಪ್ರತ್ಯೇಕವಾಗಿರಬೇಕು, ಹೀಗೆ ಮಗುವಿನಲ್ಲಿ ವೈರಸ್ ಹರಡುವ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಪ್ರತ್ಯೇಕತೆಯನ್ನು ಖಚಿತಪಡಿಸಿಕೊಳ್ಳಬೇಕು.
- ಪರೀಕ್ಷೆಯು ಋಣಾತ್ಮಕವಾಗಿದ್ದರೆ, ನವಜಾತ ಶಿಶುವನ್ನು ನೋಡಿಕೊಳ್ಳಲು ತಾಯಿ ಸಿದ್ಧರಾಗಿರುವವರೆಗೂ ಇಬ್ಬರೂ ಒಂದೇ ಕೋಣೆಯಲ್ಲಿರುವುದು ಉತ್ತಮ.
- ತಾಯಿಯು ಲಕ್ಷಣರಹಿತ ಅಥವಾ ಸ್ವಲ್ಪ ರೋಗಲಕ್ಷಣದವರಾಗಿದ್ದರೆ ಅಥವಾ ಹಿಂದೆ ಕೋವಿಡ್ – 19ಗೆ ಸಕಾರಾತ್ಮಕ (ಪಾಸಿಟಿವ್) ಎಂದು ಗುರುತಿಸಲ್ಪಟ್ಟಿದ್ದರೆ ಅಥವಾ ಕೋವಿಡ್ – 19ಗಾಗಿ ತನಿಖೆಯಲ್ಲಿದ್ದರೆ:
- ತಾಯಿ – ನವಜಾತ ಸಂವಾದ ಮತ್ತು ಸ್ತನ್ಯಪಾನದ ಪ್ರಾರಂಭವನ್ನು ಸುಲಭಗೊಳಿಸಲು ಕೋ-ಬೆಡ್ಡಿಂಗ್ ಅಥವಾ ರೂಮಿಂಗ್ ಇನ್‌ಗೆ ಆದ್ಯತೆ ನೀಡಬೇಕು.
- ಮಗು ಮತ್ತು ತಾಯಿ ಒಂದೇ ಕೋಣೆಯಲ್ಲಿದ್ದರೆ, ಸ್ತನ್ಯಪಾನ ಸಮಯವನ್ನು ಹೊರತುಪಡಿಸಿ ನವಜಾತ ಶಿಶುವನ್ನು ತಾಯಿಯಿಂದ ಒಂದಕ್ಕಿಂತ ಹೆಚ್ಚು ಮೀಟರ್ ದೂರದಲ್ಲಿ ಇಡುವುದು ಉತ್ತಮ.
- ತಾಯಿ ಮತ್ತು ಪಾಲನೆ ಮಾಡುವವರು ಪ್ರತಿ ಹಾಲುಣಿಸುವಿಕೆಗೆ ಮೊದಲು ಮತ್ತು ನವಜಾತ ಶಿಶುವಿನೊಂದಿಗೆ ನಿಕಟ ಸಂಪರ್ಕದ ಸಮಯದಲ್ಲಿ ಮಾಸ್ಕ್ ಹಾಕಿ ಕೈ ನೈರ್ಮಲ್ಯವನ್ನು ಅಭ್ಯಾಸ ಮಾಡಬೇಕು.
- ಪ್ರತ್ಯೇಕ ಕೊಠಡಿಯನ್ನು ಬಳಸಬೇಕು. ಸಂಬಂಧಿಕರು ಮತ್ತು ಸ್ನೇಹಿತರ ಭೇಟಿಗೆ ಅವಕಾಶ ನೀಡಬಾರದು. ಮಗುವಿನ ತೊಟ್ಟಿಲನ್ನು ತಾಯಿಯ ತಲೆಯಿಂದ 2 ಮೀ. ದೂರದಲ್ಲಿ ಇಡಬೇಕು ಮತ್ತು ಕೋಣೆಯಲ್ಲಿ ವಿಭಾಜಕ ಅಥವಾ ತಾಯಿ ಮತ್ತು ನವಜಾತ ಶಿಶುವಿನ ನಡುವೆ ಪರದೆಯನ್ನು ಸಹ ಬಳಸಬಹುದು.
- ತಾಯಿಯು ಆ್ಯಂಟಿ-ಪೈರಟಿಕ್ಸ್ ಅಥವಾ ಔಷಧಗಳ ಬಳಕೆಯಿಲ್ಲದೆ ಕನಿಷ್ಠ 72 ಗಂಟೆಗಳ ಕಾಲ ಅಥವಾ ರೋಗಲಕ್ಷಣಗಳನ್ನು ಹೊಂದಿದ 7 ದಿನಗಳಿಗಿಂತ ಹೆಚ್ಚು ಕಾಲ ಕಳೆದುಹೋದ ಅನಂತರ, ಸರಿಯಾದ ಕೈ ನೈರ್ಮಲ್ಯವನ್ನು ಅಭ್ಯಾಸ ಮಾಡಬೇಕು ಮತ್ತು ಶಸ್ತ್ರಚಿಕಿತ್ಸೆಯ ಫೇಸ್ ಮಾಸ್ಕ್ ಅನ್ನು ಬಳಸಬೇಕು.