Advertisement
ಶಿಯೋಮಿ ರೆಡ್ಮಿ 8 ಎಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಗ್ರಾಹಕರ ನೆಚ್ಚಿನ ಸ್ಮಾರ್ಟ್‌ಫೋನ್ ಎಂದು ಗುರುತಿಸಿಕೊಂಡಿರುವ ಶಿಯೋಮಿ ರೆಡ್ಮಿ 7ಎ ಫೋನಿನ ಉತ್ತರಾಧಿಕಾರಿಯಾಗಿ ‘ರೆಡ್ಮಿ 8 ಎ’ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆಯಾಗಿದ್ದು, ವಾಟರ್‌ಡ್ರಾಪ್ ಹಾಗೂ ಡಿಸ್‌ಪ್ಲೇ ನೋಚ್ ಇತ್ಯಾದಿ ವಿಶೇಷ ಫೀಚರ್ಗಳಿಂದ ಯುವ ಗ್ರಾಹಕರನ್ನು ಆಕರ್ಷಿಸುತ್ತಿದೆ. ವೈರ್ಲೆಸ್ ಎಫ್ಎಂ ರೇಡಿಯೊ, 12/8 ಕ್ಯಾಮರಾ ಎಂಪಿ, 2ಜಿಬಿ ರ್ಯಾಮ್‌ನೊಂದಿಗೆ 5,000ಎಂಹೆಚ್ ಬ್ಯಾಟರಿಯ ಜತೆಗೆ ವೇಗವಾಗಿ ಚಾರ್ಜಿಂಗ್ ಆಗುವ ಸಾಮರ್ಥ್ಯವಿರುವ ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ 6,499 ರೂ.ಗಳಾಗಿದೆ.
4000 ಎಂಹೆಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಸ್ಮಾಟ್‌ಫೋನ್ 7999 ರೂಗಳಿಗೆ ಲಭ್ಯವಿದ್ದು, 6.1 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ 13 ಪ್ಲಸ್ 25 ಎಂಪಿ ಕ್ಯಾಮರಾವಿದ್ದು, 4000 ಎಂಹೆಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 10
ಕಂಪ್ಯೂಟರ್ ಗೇಮಿಂಗ್ ಕಾನ್ಸೋಲ್, ಮೂವಿ ಟೆಕ್ ಕ್ಯಾಮರಾ, ಇಂಟಲಿಜೆಂಟ್ ಪೇನ್ ಸೇರಿದಂತೆ ವಿಭಿನ್ನ ವೈಶಿಷ್ಟಗಳನ್ನು ಒಳಗೊಂಡಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 10 ಮಾರುಕಟ್ಟೆಯ ಬೆಲೆ 7999 ರೂಗಳಾಗಿದೆ. ಇನ್ನೂ ಇದು 3400 ಎಂಹೆಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 3ಜಿಬಿ ರ್ಯಾಮ್ ಹಾಗೂ 6.2 ಇಂಚಿನ ಸ್ಕ್ರೀನ್ ಗಾರ್ಡ್ ಇದೆ.
Related Articles
ರೆಡ್ಮಿ ನೋಟ್ 7 ವಿಭಿನ್ನ ಮೆಮೊರಿ ವೇರಿಯಂಟ್ ನಲ್ಲಿ ಲಭ್ಯವಿದ್ದು, 2ಜಿಬಿ ರ್ಯಾಮ್‌ನೊಂದಿಗೆ 632 ಸ್ನ್ಯಾಪ್‌ಡ್ರ್ಯಾಗನ್ ಹಾಗೂ 12 ಪ್ಲಸ್ 2 ಎಂಪಿ ಎರಡು ಕ್ಯಾಮರಾಗಳನ್ನು ಹೊಂದಿರುವ ಈ ಫೋನ್‌ನ ಮಾರುಕಟ್ಟೆಯ ಬೆಲೆ ಕೇವಲ 5000 ರೂಗಳಾಗಿದೆ.
Advertisement
ಇನ್‌ಫಿನಿಕ್ಸ್ ಹಾಟ್ 8ಇತ್ತೀಚಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳ ಪೈಕಿ “ಇನ್ಫಿನಿಕ್ಸ್ ಹಾಟ್ 8′ ಕೂಡಾ ಒಂದಾಗಿದ್ದು, ಮಾರುಕಟ್ಟೆಯಲ್ಲಿ ಇದರ ಬೆಲೆ 6999 ರೂಗಳಾಗಿದೆ. ಈ ಸ್ಮಾರ್ಟ್‌ಫೋನ್ ಅಲ್ಲಿ ಮೂರು ಕ್ಯಾಮರಾಗಳ ಆಯ್ಕೆಗಳಿದ್ದು, 5000 ಎಂಹೆಚ್ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ, 4ಜಿಬಿ ರ್ಯಾಮ್ ಇದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ10
ಪ್ರಸ್ತುತ ಕೇವಲ 7,990 ರೂಪಾಯಿಗಳ ಬೆಲೆಯಲ್ಲಿ ಲಭ್ಯವಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎ10 6.2 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 3ಜಿಬಿ ರ್ಯಾಮ್ ಹಾಗೂ 3400 ಎಂಹೆಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.