ಸುಬ್ರಹ್ಮಣ್ಯ: ಮನುಕುಲದ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯ. ಅದನ್ನು ರೋಟರಿ ಅಂತಾರಾಷ್ಟ್ರೀಯ ಸಂಸ್ಥೆ ಮಾಡುತ್ತಾ ಬರುತ್ತಿದೆ ಎಂದು ರೋಟರಿ ಜಿಲ್ಲೆ ರಾಜ್ಯಪಾಲ ಡಾ| ನಾಗಾರ್ಜುನ್ ಆರ್.ಎಸ್. ನುಡಿದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್‌ಗ ಅಧಿಕೃತ ಭೇಟಿ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ನೂರ ಹನ್ನೆರಡು ವರ್ಷಗಳ ಹಿಂದೆ ಹುಟ್ಟಿಕೊಂಡ ಈ ಸಂಸ್ಥೆ ಜಗತ್ತಿನಾ ದ್ಯಂತ ಜನಸಾಮಾನ್ಯರಿಗೆ ಸೇವೆ ನೀಡು ತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಸುಬ್ರಹ್ಮಣ್ಯ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಪ್ರೊ| ಬಾಲಕೃಷ್ಣ ಪೈ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಡಬ, ಬಿಳಿನೆಲೆ ಕೈಕಂಬ ಹಾಗೂ ಏನೆಕಲ್ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಇ-ಲರ್ನಿಂಗ್ ಕಿಟ್‌ಅನ್ನು ಕೊಡುಗೆಯಾಗಿ ನೀಡಿದ ಕೇಸರಿ ದಯಾನಂದ ನಾಯಕ್ ದಂಪತಿಯನ್ನು ಸಮ್ಮಾನಿಸಲಾಯಿತು. ಸಮಾರಂಭಕ್ಕೂ ಮುನ್ನ ಓಂತ್ರಡ್ಕ, ಕಡಬ, ಮರ್ಧಾಳ, ಬಿಳಿನೆಲೆ-ಕೈಕಂಬ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹಾಗೂ ಕೆಎಸ್‌ಎಸ್ ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ರಾಜ್ಯಪಾಲರು ಹಸ್ತಾಂತರಿಸಿದರು.
ಕುಲ್ಕುಂದದಲ್ಲಿ ಬಡವರ ಮನೆಗೆ ಕ್ಲಬ್‌ನಪೂರ್ವಾಧ್ಯಕ್ಷ ಮಾಯಿಲಪ್ಪ ಸಂಕೇಶರು ನೀಡಿದ ರೋಟರಿ ಜ್ಯೋತಿಯನ್ನು ಉದ್ಘಾಟಿಸಲಾಯಿತು. ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಗೆ ನ್ಯಾಪ್‌ಕಿನ್ಸ್ ಬರ್ನಿಂಗ್ ಕಿಟ್‌ಅನ್ನು ಸಂಸ್ಥೆಯು ಹಸ್ತಾಂತರಿಸಿತು. ಏನೆಕಲ್‌ನ ಪ್ರತಿಭಾನ್ವಿತ ಕಲಾವಿದರನ್ನು ಗೌರವಿಸಲಾಯಿತು.ಸವಣೂರು ವಿದ್ಯಾರಶ್ಮಿ ವಿದ್ಯಾ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಕೆ., ರೋಟರಿ ಅಸಿಸ್ಟೆಂಟ್ ಗವರ್ನರ್ ಶ್ಯಾಮಸುಂದರ ರೈ, ವಲಯ ಪ್ರತಿನಿಧಿ ಆಸ್ಕರ್ ಆನಂದ್, ನಿಕಟ ಪೂರ್ವಾಧ್ಯಕ್ಷ ಗಿರಿಧರ ಸ್ಕಂದ, ನಿಯೋಜಿತ ಅಧ್ಯಕ್ಷ ವೆಂಕಟೇಶ್ ಎಚ್.ಎಲ್., ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಸೌಮ್ಯಾ ಬಿ. ಪೈ, ಗೋಪಾಲ್ ಎಣ್ಣೆಮಜಲು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ವಿಜಯಕುಮಾರ್ ಅಮೈ ವರದಿ ವಾಚಿಸಿದರು. ಬುಲೆಟಿನ್ ಸಂಪಾದಕ ಭರತ್ ನೆಕ್ರಾಜೆ ನೇತೃತ್ವದಲ್ಲಿ ತಂದ ಬುಲೆಟಿನ್ ಅನ್ನು ಶಾಮಸುಂದರ ರೈ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ರೋಟರಿ ರಾಜ್ಯಪಾಲ ದಂಪತಿಯನ್ನು ಸುಬ್ರಹ್ಮಣ್ಯ ಕ್ಲಬ್ ವತಿಯಿಂದ ಸಮ್ಮಾನಿಸಲಾಯಿತು.ಪ್ರೊ| ಬಾಲಕೃಷ್ಣ ಪೈ ಸ್ವಾಗತಿಸಿ, ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ರಾಮಕೃಷ್ಣ ಮಲ್ಲಾರ ನಿರೂಪಿಸಿದರು. ಕಾರ್ಯದರ್ಶಿ ವಿಜಯ ಕುಮಾರ್ ಅಮೈ ವಂದಿಸಿದರು.