Advertisement
ಪೊವ್ವಲ್ ಎಲ್‌ಬಿಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಈ ಸಾಲಿನ ಕಣ್ಣೂರು ವಿವಿ ಕಲೋತ್ಸವದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ದ್ವಿತೀಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಸಹನಾ ಶೆಟ್ಟಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡು ಅತ್ಯುತ್ತಮ ನಟಿ ಕಿರೀಟವನ್ನು ಪಡೆದುಕೊಂಡಿದ್ದಾರೆ. ಸಹನಾ ಶೆಟ್ಟಿಗೆ ವಿವಿ ಕಲೋತ್ಸವದಲ್ಲಿ ಇದು ಸತತ ನಾಲ್ಕನೇ ಬಾರಿ ಅತ್ಯುತ್ತಮ ನಟನೆಗಾಗಿ ಪ್ರಶಸ್ತಿ ಲಭಿಸಿರುವುದು. ಕನ್ನಡ, ತುಳು, ಮಲಯಾಳ ಭಾಷೆ ಬಲ್ಲ ಈ ಪ್ರತಿಭೆ ಭಾಷೆ ಯಾವುದೇ ಆಗಲಿ ನಟನೆಗೆ ಸೈ ಎಂದೆನಿಸಿಕೊಂಡಿದ್ದಾರೆ. ತುಳು ನಾಟಕಗಳಲ್ಲೂ ಅಭಿನಯಿಸುವ ಮೂಲಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
Related Articles
Advertisement
ಶಾಲಾ ದಿನಗಳಲ್ಲೇ ನಟನೆಯಲ್ಲಿ ವಿಶೇಷ ಆಸಕ್ತಿ ತೋರಿಸಿದ್ದ ಸಹನಾರಿಗೆ ರಂಗಭೂಮಿ ಎಂದರೆ ಅಚ್ಚುಮೆಚ್ಚು. ಬೋವಿಕ್ಕಾನ ಬಿಎಆರ್‌ಎಚ್‌ಎಸ್ ಶಾಲೆಯ ಹಳೆ ವಿದ್ಯಾರ್ಥಿನಿಯಾದ ಸಹನಾ ಪಾಡಿಯ ನಾರಾಯಣ ಶೆಟ್ಟಿ ಹಾಗೂ ಸುಗುಣ ದಂಪತಿಯ ಪುತ್ರಿಯಾಗಿದ್ದಾರೆ. ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಾಹಿತ್ಯಕ-ಸಾಂಸ್ಕೃತಿಕ ವೇದಿಕೆಯಾದ ಸ್ನೇಹರಂಗದ ವಿವಿಧ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸಹನಾ ಕಲಿಕೆಯಲ್ಲಿ ಇನ್ನಷ್ಟು ಸಾಧನೆಯ ಹಾದಿಯಲ್ಲಿದ್ದಾರೆ.
2016-17ನೇ ಶೈಕ್ಷಣಿಕ ವರ್ಷದ ಕಣ್ಣೂರು ವಿವಿ ಕಲೋತ್ಸವದ ಕಾಸರಗೋಡು ಸರಕಾರಿ ಕಾಲೇಜು ತಂಡ ಪ್ರದರ್ಶಿಸಿದ ಮನೋಮƒಗ ನಾಟಕವನ್ನು ಸದಾಶಿವ ಮಾಸ್ತರ್ ಪೊಯೆÂ ನಿರ್ದೇಶಿಸಿದ್ದಾರೆ. ಸಹನಾ ಸಹಿತ ಪವಿತ್ರ ಇ., ರಂಜಿನಿ ಸಿ., ಜೇಷ್ಮಾ ಲೋಬೋ, ರಾಜರಾಮ ಪಿ., ಪ್ರದೀಪ್ ಕುಮಾರ್, ಶಿಹಾಬ್, ಅಕ್ಷತಾ ಅಭಿನಯಿಸಿದ್ದಾರೆ.