Advertisement
ವಿಧಾನ ಪರಿಷತ್‌ಗೆ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶನಿವಾರ ರೋಟರಿ ಬಾಲಭವನದಲ್ಲಿ ಪಕ್ಷದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಾಗುತ್ತಿರುವ ಪಕ್ಷದ ಪ್ರತೀ ಬೆಳವಣಿಗೆ ಕುರಿತು ವರಿಷ್ಠರಾದ ದೇವೇಗೌಡ, ಕುಮಾರಸ್ವಾಮಿಯವರಿಗೆ ಮಾಹಿತಿ ಇದೆ.
Related Articles
Advertisement
ಇದನ್ನು ನಿಜ ಮಾಡಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಅವರು ಮನವಿ ಮಾಡಿದರು. ನನಗೆ ಜಿಲ್ಲೆಯ ಮೂರು ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿ ಬರುತ್ತದೆ. ಪಕ್ಷ ಸಂಘಟನೆ ಕೆಲಸ ಮಾಡಲು ನಾನು ಸದಾ ಸಿದ್ಧ. ಯಾವುದೇ ಹಿಂಜರಿಕೆಯಿಲ್ಲದೆ ನನ್ನನ್ನು ನೀವು ಕರೆಯಿರಿ. ಗ್ರಾಮೀಣ ಭಾಗದಲ್ಲಿ ಕೆಲಸ ಆಗಬೇಕಿದ್ದರೆ ನೇರ ನನ್ನನ್ನು ಬಂದು ಸಂಪರ್ಕಿಸಿ.
ಶಿಕ್ಷಕರ ಪ್ರತಿನಿಧಿ ಎಂಬ ಕಾರಣಕ್ಕೆ ಕೇವಲ ಶಿಕ್ಷಕರ ಕೆಲಸಕ್ಕೇನಾನು ಸೀಮಿತವಾಗಿರುವುದಿಲ್ಲ. ಎಲ್ಲರ ಕೆಲಸ ಮಾಡುವುದು ನನ್ನ ಜವಾಬ್ದಾರಿ ಆಗಿದೆ. ಪಕ್ಷ ಸಂಘಟನೆಗೆ ಎಲ್ಲರೂ ಒತ್ತುಕೊಡಿ ಎಂದರು. ದಾವಣಗೆರೆಯಲ್ಲಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ನಡೆಸುವ ಚಿಂತನೆ ಇದೆ. ಇದಕ್ಕಾಗಿ ನೀವೆಲ್ಲಾ ಒಗ್ಗಟ್ಟಿನಿಂದ ಕೆಲಸ ಮಾಡಿ. ಸಣ್ಣ ಸಣ್ಣ ಸಮಸ್ಯೆಗಳಿಗೆ ಕಿವಿ ಕೊಡಬೇಡಿ.
ಜೊತೆಗೆ ಯಾರಿಗೂ ಸಹ ಅಗೌರವ ತೋರಿಸಬೇಡಿ. ಪಕ್ಷದ ಒಳಿತಿಗಾಗಿ ದುಡಿಯಿರಿ ಎಂದು ಅವರು ಕಿವಿಮಾತು ಹೇಳಿದರು. ಜಿಪಂ ಸದಸ್ಯ ಸಣ್ಣ ಪಕೀರಪ್ಪ, ಬಸವರಾಜ ಪಾದಯಾತ್ರಿ, ಪಕ್ಷದ ಮುಖಂಡರಾದ ಟಿ. ದಾಸಕರಿಯಪ್ಪ, ಜೆ. ಅಮಾನುಲ್ಲಾ ಖಾನ್, ಟಿ. ಅಸರ್, ಹೂವಿನಮಡು ಚಂದ್ರಪ್ಪ, ಎಚ್.ಸಿ. ಗುಡ್ಡಪ್ಪ, ಕೆ. ದಾದಾಪೀರ್, ಬೆಳವನೂರು ನಾಗೇಶ್‌ರಾವ್, ಕೆ.ಬಿ. ಕಲ್ಲೇರುದ್ರೇಶಪ್ಪ ಇತರರು ವೇದಿಕೆಯಲ್ಲಿದ್ದರು.