Advertisement

ಕಸ ವಿಂಗಡಣೆಗೆ ಸಿಗದ ಸ್ಪಂದನೆ

12:09 PM Mar 13, 2017 | Team Udayavani |

ಬೆಂಗಳೂರು: ಕಸ ನಿರ್ವಹಣೆಯ ಕೆಲವು ಲೋಪಗಳು ನಗರದ ಹೆಸರು ಹಾಳು ಮಾಡಿವೆ. ಕಸ ನಿರ್ವಹಣೆ ಬಹುದೊಡ್ಡ ಸಮಸ್ಯೆಯಾಗಿದ್ದು, ಕಸ ವಿಂಗಡಣೆ ವಿಚಾರದಲ್ಲೂ ನಾಗರಿಕರಿಂದ ಹೆಚ್ಚಿನ ಪ್ರತಿಕ್ರಿಯೆ ದೊರೆಯುತ್ತಿಲ್ಲ ಎಂದು ಮೇಯರ್‌ ಜಿ.ಪದ್ಮಾವತಿ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ನಗರದ ಆದರ್ಶ ಕಾಲೇಜಿನಲ್ಲಿ ಆಯೋಜಿಸಿದದ್ದ ಎರಡು ದಿನಗಳ ಆದರ್ಶ ಆಸ್ಪಿರಾ -2017ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನಗರದ ಕಸ ವಿಲೇವಾರಿಗೆ ಸುಮಾರು 125 ಕಿಲೋಮೀಟರ್‌ ದೂರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ, ಅಲ್ಲೂ ಪ್ರತಿಭಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಪರಿಹಾರವೆಂದರೆ ಕಸ ವಿಂಗಡಣೆ. ಆದರೆ, ಇದಕ್ಕೆ ನಾಗರಿಕರ ಸಹಕಾರ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯುವ ಜನತೆ ಮನೆಗಳಲ್ಲಿ ಹಾಗೂ ಸಮುದಾಯದಲ್ಲಿ ಕಸ ವಿಂಗಡಣೆ ಕುರಿತು ಜಾಗೃತಿ ಮೂಡಿಸಬೇಕು. ಕಸ ವಿಂಗಡಣೆ ಪ್ರಕ್ರಿಯೆ ಮನೆಯಿಂದಲೇ ಆರಂಭವಾಗಬೇಕು. ಜತೆಗೆ ಯುವಕರು ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಬೆಳೆಸಿಕೊಂಡಾಗ ಮಾತ್ರ ಭವಿಷ್ಯ ಉತ್ತಮವಾಗಲಿದೆ ಎಂದು ಸಲಹೆ ನೀಡಿದರು. ವಿವಿಪುರ ವಿಭಾಗದ ಎಸಿಪಿ ಮಹಂತರೆಡ್ಡಿ ಮಾತನಾಡಿ, “ದುಶ್ಚಟ ಮತ್ತು ದುರ್ಜನರ ಸಂಘದಿಂದ ವಿದ್ಯಾರ್ಥಿಗಳು ದೂರವಿರಬೇಕು.

ಧೈರ್ಯದಿಂದ ಜೀವನದ ಸವಾಲುಗಳನ್ನು ಎದುರಿಸಬೇಕು,” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆದರ್ಶ ಗ್ರೂಫ್ ಆಫ್ ಇನ್‌ಸ್ಟಿಟ್ಯೂಟ್‌ ಅಧ್ಯಕ್ಷ ಪ್ರೇಮರಾಜ್‌ ಜೈನ್‌, ಕಾರ್ಯದರ್ಶಿ ಜಿತೇಂದ್ರ ಮಾರ್ಡಿಯ, ಪ್ರಾಂಶುಪಾಲ ಡಾ.ಆರ್‌.ಎಸ್‌.ಭಾರತೀಶರಾವ್‌ ಇದ್ದರು. ಎರಡು ದಿನಗಳ ಕಾಲ ನಡೆದ ಉತ್ಸವದಲ್ಲಿ ಸುಮಾರು 86 ಕಾಲೇಜುಗಳಿಂದ ಆಗಮಿಸಿದ್ದ ತಂಡಗಳು ಪಾಲ್ಗೊಂಡಿದ್ದವು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮೇಯರ್‌ ಬಹುಮಾನ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next