Advertisement

ಬೀರಲಿಂಗೇಶರ ದೇವರ ಬನ್ನಿ ಉತ್ಸವ

07:37 PM Oct 23, 2021 | Team Udayavani |

ಹೊನ್ನಾಳಿ: ತಾಲೂಕಿನ ದಿಡಗೂರುಹರಳಹಳ್ಳಿ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವರ ಬನ್ನಿ ಉತ್ಸವ ಹಾಗೂ ಉಯ್ನಾಲೆ ಕಾರ್ಯಕ್ರಮಗಳು ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನೆರವೇರಿದವು. ಗ್ರಾಮದ ಬೀರಲಿಗೇಶ್ವರ ದೇವಾಲಯದ ಅವರಣದಿಂದ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಬೀರದೇವರನ್ನು ಪ್ರತಿಷ್ಠಾಪಿಸಿ ಗ್ರಾಮದ ವಿವಿಧ ದೇವಾಲಯಗಳಿಗೆ ಕೊಂಡೊಯ್ಯಲಾಯಿತು. ನಂತರ ದಿಡಗೂರು ಗ್ರಾಮದ ಶ್ರೀ ಆಂಜನೇಯ ದೇವರ ದರ್ಶನ ಪಡೆದು ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

Advertisement

ಗ್ರಾಮದ ಹೊರ ವಲಯದಲ್ಲಿರುವ ಕಲ್ಲುಗುಡಿಗೆ ಬೀರದೇವರ ಉತ್ಸವ ಮೂರ್ತಿಯನ್ನು ತಂದು ಪೂಜಾ ಕೈಂಕರ್ಯ ನಡೆಸಲಾಯಿತು. ಇದಾದ ಬಳಿಕ ಕಲ್ಲುಗುಡಿ ಅವರಣದಲ್ಲಿ ಗ್ರಾಮದ ಸ್ವಾಮೀಜಿಗಳಿಂದ ಶಮಿವೃಕ್ಷಕ್ಕೆ ಪೂಜೆ ಮಾಡಿಸಲಾಯಿತು. ಬೀರದೇವರ ಪೂಜಾರಿಯಿಂದ ಅಂಬು ಬಿಡುವ ಕಾರ್ಯ ನೆರವೇರಿತು. ನಂತರ ಶ್ರೀಗಳ ನೇತೃತ್ವದಲ್ಲಿ ಭಕ್ತರಿಗೆ ಬನ್ನಿ ವಿತರಿಸಲಾಯಿತು. ಬೀರಪ್ಪ ಹಾಗೂ ದುರ್ಗಮ್ಮ ದೇವರ ಮೂರ್ತಿಗಳನ್ನು ಉಯ್ನಾಲೆಗಳಲ್ಲಿ ಕೂರಿಸಿ ಉಯ್ನಾಲೆ ತೂಗಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next