Advertisement

ಧರ್ಮ ಸಂಘರ್ಷದ ಸುತ್ತ ‘ಬೇರ’

04:47 PM Jun 05, 2023 | Team Udayavani |

ಕೆಲವು ಟ್ರೇಲರ್‌ಗಳು ಸಿನಿಮಾದೊಳಗಿನ ಕಂಟೆಂಟ್‌ ಬಗ್ಗೆ ಭರಸವೆ ಮೂಡಿಸುತ್ತವೆ. ಈ ಸಿನಿಮಾದೊಳಗೊಂದು ಗಟ್ಟಿ ವಿಷಯವಿದೆ ಎಂಬ ಭಾವನೆ ಮೂಡಿಸುತ್ತವೆ. ಈಗ ಈ ಸಾಲಿಗೆ ಸೇರುವ ಮತ್ತೂಂದು ಸಿನಿಮಾವೆಂದರೆ “ಬೇರ’. ಹೀಗೊಂದು ಸಿನಿಮಾದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ನಿಧಾನವಾಗಿ ಚಿತ್ರದ ಕಥಾವಸ್ತುವಿನ ಬಗ್ಗೆ ಚರ್ಚೆಯಾಗುತ್ತಿದೆ.

Advertisement

ಕಿರುತೆರೆಯಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ವಿನು ಬಳಂಜ “ಬೇರ’ ಸಿನಿಮಾದ ನಿರ್ದೇಶಕರು.

ಕರಾವಳಿಯಲ್ಲಿ ಆಗಾಗ ಕೇಳಿಬರುವ ಕೋಮು ಸಂಘರ್ಷದ ಕಥೆಯನ್ನೇ ತಮ್ಮ ಸಿನಿಮಾದ ಕಥಾವಸ್ತುವನ್ನಾಗಿ ಆಯ್ಕೆ ಮಾಡಿದ್ದಾರೆ. ಅತಿ ಸೂಕ್ಷ್ಮವಾದ ವಿಷಯವನ್ನು ಯಾರಿಗೂ ನೋವಾಗದಂತೆ ಈ ಸಿನಿಮಾದಲ್ಲಿ ಹೇಳಲಾಗಿದೆ. ಈಗಾಗಲೇ “ಕಾಶ್ಮೀರಿ ಫೈಲ್ಸ್‌’, “ಕೇರಳ ಸ್ಟೋರಿ’ ಚಿತ್ರಗಳು ಸದ್ದು ಮಾಡುತ್ತಿವೆ. ಅದೇ ರೀತಿಯ ಧರ್ಮ ಸಂಘರ್ಷದ ಕಥೆಯನ್ನು “ಬೇರ’ ಹೊಂದಿರುವುದರಿಂದ ಈ ಸಿನಿಮಾ ಕೂಡಾ ಕಥಾವಸ್ತುವಿನಿಂದಾಗಿ ಚರ್ಚೆಯಾಗಬಹುದು ಎಂಬ ನಿರೀಕ್ಷೆ ಚಿತ್ರ ತಂಡಕ್ಕಿದೆ. ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಎರಡು ಯುವಕರ ಸುತ್ತ ಇಡೀ ಸಿನಿಮಾ ಸುತ್ತಲಿದೆ. ಚಿತ್ರ ಟ್ರೇಲರ್‌ನಲ್ಲಿರುವ ಕೆಲವು ಸಂಭಾಷಣೆಗಳು ಕಥಾವಸ್ತುವಿನ ತೀವ್ರತೆಯನ್ನು ಎತ್ತಿ ತೋರಿಸುತ್ತಿವೆ.

ಅಂದಹಾಗೆ, ಈ ಚಿತ್ರ ಜೂ.16ರಂದು ತೆರೆಕಾಣುತ್ತಿದೆ. ಈ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ವಿನು ಬಳಂಜ, “ಕಳೆದ ನಾಲ್ಕೈದು ವರ್ಷ ನಾನು ವೈಯಕ್ತಿಕ ಕಾರಣದಿಂದ ಕಿರುತೆರೆ ಹಾಗೂ ಹಿರಿತೆರೆಯಿಂದ ದೂರವಿದ್ದೆ. ಆನಂತರ ಒಂದು ಮ್ಯೂಸಿಯಂಗೆ ಹೋದೆ. ಅಲ್ಲೇ ಈ ಕಥೆ ಹುಟ್ಟಿದ್ದು. ಆನಂತರ ಮತ್ತೆ ನನ್ನನ್ನು ಸಿನಿಮಾ ಮಾಡಲು ಪ್ರೇರೇಪಿಸಿದ್ದು ನಿರ್ಮಾಪಕ ದಿವಾಕರ್‌. ತುಳುವಿನಲ್ಲಿ ಬೇರ ಎಂದರೆ ಕನ್ನಡದಲ್ಲಿ ವ್ಯಾಪಾರ ಎಂದು ಅರ್ಥ. ಅಮಾಯಕರನ್ನು ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಹಾಗೂ ಯಾವ ತಾಯಂದ್ರ ಮಕ್ಕಳೂ ಇನ್ನೊಬ್ಬರಿಂದಾಗಿ ಸಾಯಬಾರದು ಎಂಬುದೇ ಕಥಾಹಂದರ.

ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತ ಇಲ್ಲ. ಬರುವ ಎಲ್ಲಾ ಪಾತ್ರಗಳು ಮುಖ್ಯ ಪಾತ್ರಗಳಾಗಿರುತ್ತವೆ’ ಎನ್ನುತ್ತಾರೆ. ದಿವಾಕರ ದಾಸ್‌ ಈ ಚಿತ್ರದ ನಿರ್ಮಾಪಕರು. ದತ್ತಣ್ಣ, ಯಶ್‌ ಶೆಟ್ಟಿ, ಹರ್ಷಿಕಾ ಪೂಣತ್ಛ, ಅಶ್ವಿ‌ನ್‌ ಹಾಸನ್‌, ಚಿತ್ಕಲ ಬಿರಾದಾರ್‌, ಮಂಜುನಾಥ್‌ ಹೆಗಡೆ, ಗುರು ಹೆಗಡೆ, ರಾಕೇಶ್‌ ಮಯ್ಯ ಸೇರಿ ಅನೇಕರು ನಟಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next