Advertisement

ಬೆಂಕಿಯಲ್ಲಿ ಅರಳಿದ ಅಣ್ಣ-ತಂಗಿ ಸೆಂಟಿಮೆಂಟ್‌

02:47 PM Jul 13, 2022 | Team Udayavani |

ಅನೀಶ್‌ ತೇಜೇಶ್ವರ್‌ ನಟನೆಯ “ಬೆಂಕಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಜುಲೈ 15ರಂದು ಬಿಡುಗಡೆಯಾಗುತ್ತಿದೆ.

Advertisement

ಈಗಾಗಲೇ ಚಿತ್ರದ ಹಾಡೊಂದು ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ. ಅದು ಚಿತ್ರದ ತಂಗಿ ಸೆಂಟಿಮೆಂಟ್‌ ಕುರಿತಾದ ಹಾಡು. ಈ ಹಾಡನ್ನು “ಜೋಗಿ’ ಪ್ರೇಮ್‌ ಹಾಡಿದ್ದಾರೆ. ಪ್ರೇಮ್‌ ಸೆಂಟಿಮೆಂಟ್‌ ಹಾಡುಗಳಿಗೆ ಹೆಸರುವಾಸಿ. ಈಗಾಗಲೇ ತಾಯಿ ಕುರಿತಾಗಿ ಪ್ರೇಮ್‌ ಹಾಡಿರುವ ಹಾಡುಗಳು ಹಿಟ್‌ ಆಗಿವೆ. ಈಗ ತಂಗಿ ಕುರಿತಾದ ಹಾಡನ್ನು “ಬೆಂಕಿ’ ಚಿತ್ರದಲ್ಲಿ ಹಾಡಿಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ಚಿತ್ರತಂಡದ ಖುಷಿಯನ್ನು ಹೆಚ್ಚುಗೊಳಿಸಿದೆ.

“ಬೆಂಕಿ’ ಅಣ್ಣ-ತಂಗಿ ಸೆಂಟಿಮೆಂಟ್‌ ಸುತ್ತ ನಡೆಯುವ ಕಥೆ. ಕನ್ನಡದಲ್ಲಿ ತುಂಬಾ ವರ್ಷಗಳ ನಂತರ ಅಣ್ಣ-ತಂಗಿ ಸೆಂಟಿಮೆಂಟ್‌ ಸಿನಿಮಾ ಬರುತ್ತಿದ್ದು, ಹಿಟ್‌ ಆಗುವ ನಿರೀಕ್ಷೆ ಚಿತ್ರತಂಡಕ್ಕಿದೆ. ಇನ್ನು, ಈಗಾಗಲೇ ಚಿತ್ರ ಸೆನ್ಸಾರ್‌ ಆಗಿದ್ದು, ಯು/ಎ ಪ್ರಮಾಣ ಪತ್ರ ಸಿಕ್ಕಿದೆ.

ಇದನ್ನೂ ಓದಿ: 200 ಚಿತ್ರಮಂದಿರಗಳಲ್ಲಿ ಪೆಟ್ರೋಮ್ಯಾಕ್ಸ್‌ : ಜು.15ಕ್ಕೆ ರಿಲೀಸ್‌

ಚಿತ್ರದ ಬಗ್ಗೆ ಮಾತನಾಡುವ ನಾಯಕ ಅನೀಶ್‌, “ಬೆಂಕಿ ನನಗೆ ದೊಡ್ಡ ಚಾಲೆಂಜ್‌. ನನ್ನದೇ ಪ್ರೊಡಕ್ಷನ್‌ ಹೌಸ್‌ನ ಮೂರನೇ ಸಿನಿಮಾ. ನನ್ನ ಸ್ನೇಹಿತರ ಸಹಕಾರದಿಂದ ಈ ಸಿನಿಮಾ ಮಾಡಿದ್ದೇನೆ. ಇವರಿಲ್ಲದೇ ಸಿನಿಮಾ ಮಾಡೋದಿಕ್ಕೆ ಆಗಲಲ್ಲ. ಸಿನಿಮಾ ಮೇಲೆ ನನಗೆ ಪ್ರೀತಿ ಜಾಸ್ತಿ ಇದೆ. ನನಗೆ ಆಫ‌ರ್‌ ಬರುವುದು ನಿಂತಿಲ್ಲ. ಆದರೆ, ನನಗೆ ಇಷ್ಟವಾದ ಕಂಟೆಂಟ್‌ ಬೇಕು. ಪ್ರತಿಯೊಂದು ವಿಭಾಗ ನನ್ನ ಜೊತೆ ಕೈ ಜೋಡಿಸಿದೆ. ಬೆಂಕಿ ನನಗೆ ಬಹಳ ಆಪ್ತವಾದ ಸಿನಿಮಾ. ಆ್ಯಕ್ಟಿಂಗ್‌ ಮಾಡೋದಕ್ಕಿಂತ ಪ್ರೂಡಕ್ಷನ್‌ ಮಾಡೋದು ನನಗೆ ಸವಾಲು ಆಗಿತ್ತು. ಅಣ್ಣ-ತಂಗಿ ಸೆಂಟಿಮೆಂಟ್‌ ಇರುವ ಸಿನಿಮಾ ಇದು. ಅಣ್ಣ -ತಂಗಿ ಸೆಂಟಿಮೆಂಟ್‌ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸವಿದೆ’ ಎನ್ನುತ್ತಾರೆ ಅನೀಶ್‌.

Advertisement

ಈ ಚಿತ್ರವನ್ನು ಶಾನ್‌ ನಿರ್ದೇಶಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಶಾನ್‌, “ತುಂಬಾ ದೊಡ್ಡ ಎಮೋಷನಲ್‌ ಜರ್ನಿ ಇದು. ಫ್ಯಾಮಿಲಿ ಬ್ಯಾಕ್‌ ಡ್ರಾಪ್‌ ಸಿನಿಮಾ. ನಾವು ಮನೆಯಲ್ಲಿ ಇದ್ದೇವೆ ಎನ್ನುವಂತಿತ್ತು ಇಡೀ ಜರ್ನಿ. ಕಾಮಿಡಿ, ಸೆಂಟಿಮೆಂಟ್‌ ಎಲ್ಲವೂ ಸಿನಿಮಾದಲ್ಲಿದೆ’ ಎನ್ನುತ್ತಾರೆ. ಚಿತ್ರಕ್ಕೆ ಆನಂದ ರಾಜ ವಿಕ್ರಮ್‌ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next