Advertisement

ಆರನೇ ಬಾರಿಗೆ ಇಸ್ರೇಲ್‌ನ ಪ್ರಧಾನ ಮಂತ್ರಿಯಾಗಿ ನೆತನ್ಯಾಹು ಪ್ರಮಾಣವಚನ

09:12 PM Dec 29, 2022 | Team Udayavani |

ಜೆರುಸಲೇಂ: ಬೆಂಜಮಿನ್ ನೆತನ್ಯಾಹು ಅವರು ಗುರುವಾರ ಇಸ್ರೇಲ್‌ನ ಪ್ರಧಾನ ಮಂತ್ರಿಯಾಗಿ ಆರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಯಹೂದಿ ರಾಷ್ಟ್ರದ ಅತ್ಯಂತ ಬಲಪಂಥೀಯ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ.

Advertisement

73 ರ ಹರೆಯದ ನೆತನ್ಯಾಹು ಈಗಾಗಲೇ ಇಸ್ರೇಲ್‌ನ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿಎಂಬ ಹೆಗ್ಗಳಿಕೆ ಹೊಂದಿದ್ದು, 120 ಸದಸ್ಯರ ನೆಸೆಟ್‌ನಲ್ಲಿ (ಇಸ್ರೇಲಿ ಸಂಸತ್ತು) 63 ಸಂಸದರ ಬೆಂಬಲವನ್ನು ಹೊಂದಿದ್ದಾರೆ. ಸದನದಲ್ಲಿ 54 ಸಂಸದರು ಅವರ ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದಾರೆ.

ಅವರು ತಮ್ಮ ಆರನೇ ಬಾರಿ ಸರ್ಕಾರದ ರಚನೆಯೊಂದಿಗೆ ಪ್ರಧಾನ ಮಂತ್ರಿಯಾಗಿ ಮರಳಿದ್ದಾರೆ. ಇಸ್ರೇಲ್‌ನ 37 ನೇ ಸರ್ಕಾರದ ವಿಶ್ವಾಸ ಮತಕ್ಕೆ ಸ್ವಲ್ಪ ಮೊದಲು, ಅಮೀರ್ ಒಹಾನಾ ಅವರನ್ನು ಹೊಸ ಸ್ಪೀಕರ್ ಆಗಿ ಆಯ್ಕೆ ಮಾಡಲಾಯಿತು.ಹಿಂದಿನ ಸರ್ಕಾರಗಳಲ್ಲಿ ಮಾಜಿ ನ್ಯಾಯ ಮಂತ್ರಿ ಮತ್ತು ಸಾರ್ವಜನಿಕ ಭದ್ರತಾ ಮಂತ್ರಿ, ಒಹಾನಾ ಮೊದಲ ಬಹಿರಂಗ ಸಲಿಂಗಕಾಮಿ ಸ್ಪೀಕರ್ ಆಗಿದ್ದಾರೆ.

ಹೊಸ ಸರ್ಕಾರದ ಪ್ರಮಾಣ ವಚನಕ್ಕೆ ಮುನ್ನ ನೆಸೆಟ್‌ನಲ್ಲಿ ಮಾತನಾಡಿದ ನೆತನ್ಯಾಹು, ಇರಾನ್ ಪರಮಾಣು ರಾಷ್ಟ್ರವಾಗುವತ್ತ ಹೋಗುವುದನ್ನು ತಡೆಯುವುದು, ದೇಶದ ಉದ್ದಗಲಕ್ಕೂ ಚಲಿಸುವ ಬುಲೆಟ್ ಟ್ರೈನ್ ಅನ್ನು ಪ್ರಾರಂಭಿಸುವುದು ಮತ್ತು ಹೆಚ್ಚಿನ ಅರಬ್ ದೇಶಗಳನ್ನು ಅಬ್ರಹಾಂ ಒಪ್ಪಂದದ ಮಡಿಲಿಗೆ ತರುವುದು ತಮ್ಮ ಸರ್ಕಾರದ ಮೂರು “ರಾಷ್ಟ್ರೀಯ ಗುರಿಗಳು” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next