Advertisement

ಇಸ್ರೇಲ್‌ ಚುನಾವಣೆ: ಬೆಂಜಮಿನ್‌ ನೆತನ್ಯಾಹುಗೆ ಜಯ?

09:06 AM Mar 05, 2020 | Hari Prasad |

ಜೆರುಸಲೇಂ: ಒಂದು ವರ್ಷದ ಅವಧಿಯಲ್ಲಿ ಮೂರನೇ ಬಾರಿಗೆ ಇಸ್ರೇಲ್‌ನಲ್ಲಿ ನಡೆದ ಚುನಾವಣೆಯಲ್ಲಿ ಜಯ ಗಳಿಸಿರುವುದಾಗಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಮತಗಟ್ಟೆ ಸಮೀಕ್ಷೆಗಳು ಕೂಡ ನೆತನ್ಯಾಹು ನೇತೃತ್ವದ ಲಿಕುಡ್‌ ಪಕ್ಷಕ್ಕೇ ಜಯ ಸಿಗಲಿದೆ ಎಂದು ಹೇಳಿವೆ.

Advertisement

ಅವುಗಳ ಪ್ರಕಾರ 120 ಸ್ಥಾನಗಳ ಪೈಕಿ 59 ಸ್ಥಾನಗಳಲ್ಲಿ ಲಿಕುಡ್‌ ಪಕ್ಷ ಜಯ ಗಳಿಸಲಿದೆ ಎಂದು ಭವಿಷ್ಯ ನುಡಿದಿವೆ. ಇದರ ಹೊರತಾಗಿಯೂ ಬಹುಮತಕ್ಕೆ 2 ಸ್ಥಾನಗಳ ಕೊರತೆ ಉಂಟಾಗಲಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಸರಕಾರ ರಚನೆ ಬಗ್ಗೆ ಅವರು ಇತರ ಪಕ್ಷಗಳ ಜತೆಗೆ ಮಾತುಕತೆ ಶುರು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next