Advertisement
ಅರವತ್ತು ವಿಧದ ವಿವಿಧ ಬಣ್ಣದ ಮೃದ್ವಂಗಿ ಜಾತಿಯ ಸಮುದ್ರ ಜೀವಿಯಿಂದ ನಿರ್ಮಿತವಾಗುವ ಶಂಖವು ಇಂಡೋಪೆಸಿಫಿಕ್ ಸಮುದ್ರದಲ್ಲಿ ಹೆಚ್ಚಾಗಿ ಸಿಗುತ್ತದೆ. ಶಂಖ ಎರಡು ಪ್ರಕಾರವಾಗಿ ಬಳಕೆಯಲ್ಲಿದೆ. ಊದುವ ಹಾಗೂ ಪೂಜಾದಿ ಅಭಿಷೇಕಕ್ಕೆ ಬಳಸುವ ಶಂಖ. ಎಡಮುರಿ ಊದಲು ಹಾಗೂ ಬಲಮುರಿ ಶಂಖ ಧಾರ್ಮಿಕ ಕಾರ್ಯಕ್ಕೆ ಬಳಸ ಲಾಗುತ್ತದೆ. ಅಲ್ಲದೇ ಶಂಖಗಳನ್ನು ಅಲಂಕಾರಿಕ ವಸ್ತುವಾಗಿಯೂ ಬಳಸಲಾಗುತ್ತಿದೆ.
ಶಂಖದಿಂದ ಹೊರಡುವ ಧ್ವನಿತರಂಗಗಳು ಓಂಕಾರವೇ ಆಗಿದೆ. ಹೀಗಾಗಿ ಎಲ್ಲಿ ನಿರಂತರ ಶಂಖನಾದ ಮೊಳಗುವುದೋ ಅಲ್ಲಿ ಧನಾತ್ಮಕ ವಾತಾವರಣ, ಮನೋಧೈರ್ಯ ನಿರ್ಮಾಣವಾಗುವುದು. ವೈರಸ್‌ನಂತಹ ಕೀಟಾಣುಗಳು ನಾಶವಾಗುವುದು. ಶಂಖವನ್ನು ಯಾರು ಬೇಕಾದರೂ ಎಷ್ಟು ಬಾರಿಯಾದರೂ ಊದಬಹುದು. ಅದು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿರುತ್ತದೆ. ಹೆಚ್ಚು ಒತ್ತಾಯಪೂರ್ವಕವಾಗಿ ಶಂಖ ಊದಬಾರದು. ಇದು ಪ್ರತಿಕೂಲ ಪರಿಣಾಮ ಬೀರುವುದು. ಸಾಮಾನ್ಯವಾಗಿ ಸಂಧಿಕಾಲ ದಲ್ಲಿ ಅಂದರೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ವೇಳೆಗೆ ಶಂಖ ಊದುವುದು ಒಳ್ಳೆಯದು. ಅತ್ಯುತ್ತಮ ವ್ಯಾಯಾಮ
ನಿಯಮಿತವಾಗಿ ಶಂಖ ಊದುವುದರಿಂದ ಶ್ವಾಸಕೋಶಕ್ಕೆ ಅತ್ಯುತ್ತಮ ವ್ಯಾಯಾಮ ಲಭಿಸುವುದು. ಏದುಸಿರು, ಅಸ್ತಮಾ, ಶ್ವಾಸ ಸಂಬಂಧಿ ಕಾಯಿಲೆಗಳು ದೂರವಾಗುವುದು. ಶ್ವಾಸಕೋಶದ ಸಾಮರ್ಥ್ಯ ಹೆಚ್ಚುವುದು ಜತೆಗೆ ಉಗ್ಗುವಿಕೆ ದೂರೀಕರಿಸಲು ಸಹಕಾರಿ. ನಿಯಮಿತ ಶಂಖನಾದದಿಂದ ಅಸ್ತಮಾ ದೂರವಾಗುವುದು. ಅಸ್ತಮಾ ಇನ್‌ಹೇಲರ್ ಹಾಗೂ ರೆಸ್ಪಿರೋಮೀಟರ್‌ನಿಂದಲೂ ಮುಕ್ತಿ ಪಡೆಯಬಹುದು.
Related Articles
Advertisement
ಮನೋಬಲ ವೃದ್ಧಿಶಂಖ ಊದಲು ಮಕ್ಕಳಿಗೆ ಪ್ರೋತ್ಸಾಹಿಸುವುದರಿಂದ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಮನೋಬಲ ಲಭಿಸುವುದು. ಆರೋಗ್ಯ ಉತ್ತಮಗೊಂಡು ಸದಾಚಾರ ಬದುಕಿಗೆ ಪೂರಕವಾಗುವುದು. ಮಕ್ಕಳು ತಮ್ಮ ಸಂಸ್ಕೃತಿಯೊಂದಿಗೆ ಒಡ ನಾಟದಿಂದ ಇರಲು ಇದು ಸಹಕಾರಿ. ಗರ್ಭವತಿಯರು ಶಂಖದ ನೀರನ್ನು ಸೇವಿಸುವುದರಿಂದ ಹುಟ್ಟುವ ಮಗುವಿಗೂ ಲಾಭಕರ. ಪೋಲಿಯೋ, ಮೂಗ, ಕಿವುಡುತನ ಬರುವುದಿಲ್ಲ. ಮಾತು ಸ್ಪಷ್ಟ, ವಾಣಿ ಸಿಹಿಯಾಗುವುದು. ವಾಕಟುತ್ವ ಪ್ರಾಪ್ತವಾಗುವುದು. ಬೌದ್ಧಿಕ ಕ್ಷಮತೆ ವೃದ್ಧಿ
ಯೌಗಿಕ ಪರಿಣಾಮವಾಗಿ ಶಂಖನಾದವು ಷಟ್‌ಚಕ್ರ ಶುಚಿತ್ವಕ್ಕೆ ವಿವಿಧ ಚಕ್ರಗಳ ಏರುಪೇರು ಸಮತೋಲನಕ್ಕೆ ಸಹಕಾರಿ. ನಿರಂತರ ಅಭ್ಯಾಸ ದಿಂದ ಪ್ರಾಣಾಯಾಮದ ಲಾಭವನ್ನು ನಿಶ್ಚಯವಾಗಿ ಪಡೆಯಬಹುದು. ಬೌದ್ಧಿಕ ಕ್ಷಮತೆಯೂ ಹೆಚ್ಚುವುದು. ಶಂಖದಲ್ಲಿಟ್ಟ ಹಾಲು ಕ್ಯಾಲ್ಸಿಯಂ ತೊಂದರೆ ದೂರ ಮಾಡಿ ಸ್ಮರಣಶಕ್ತಿ ವರ್ಧನೆ, ಕಣ್ಣಿನ ದೋಷ ನಿವಾರಣೆಗೆ ಸಹಕಾರಿಯಾಗಿದೆ. “ಬ್ರಾಹ್ಮಿ ಮೂಹೂರ್ತೆ ಉತ್ತಿಷ್ಠೆàತ್ ಉಷಃಪಾನಂ’ ಎಂಬುದು ಆಯುರ್ವೇದ ದಿನಚರ್ಯೆಯ ಸೂತ್ರ. ಪ್ರತೀದಿನ ಬೆಳಗ್ಗೆ ಎದ್ದ ಕೂಡಲೇ ಉಷಃಪಾನ ಮಾಡುವುದರಿಂದ ಸಂಧಿವಾತ, ಎಸಿಡಿಟಿ, ಮಲಬದ್ಧತೆ, ಅರೆತಲೆ ನೋವು ನಿವಾರಣೆಯಾಗುವುದು. ಉಷಃ ಪಾನಕ್ಕೆ ಮಣ್ಣಿನ, ತಾಮ್ರದ, ಬೆಳ್ಳಿಯ ಅಥವಾ ಬಂಗಾರದ ಪಾತ್ರೆ ಬಳಸುತ್ತಾರೆ. ಆದರೆ ಶಂಖದ ನೀರನ್ನು ಸೇವಿಸುವುದರಿಂದ ಮೂರು ಧಾತುಗಳ ಲಾಭಸಿಗಲಿದೆ. ನಿತ್ಯ ನಿರಂತರ ಶಂಖಾನುಸಂಧಾನದಿಂದ ವೃದ್ಧಾಪ್ಯ ಸಮಸ್ಯೆ ಬರುವುದಿಲ್ಲ, ಕಾಯಕಲ್ಪ
ಸಿದ್ಧಿ ಲಭಿಸುವುದು. ಇವಿಷ್ಟೇ ಅಲ್ಲದೇ ನವಗ್ರಹ ದೋಷ ನಿವಾರಣೆಗೆ ವಿವಿಧ ಶಂಖ ದಾನ, ಹಲವು ಕಡೆ ಅಕ್ಕಿಯ ಮೇಲೆ ಇಟ್ಟು ಧಾನ್ಯಲಕ್ಷಿ$¾àಯ ವಾಸ ಸ್ಥಾನ ಎಂಬ ಶ್ರದ್ಧೆಯಿಂದ ಪೂಜಿಸುವ ಪದ್ಧತಿಯಿದೆ ಹಾಗೂ ನಿತ್ಯ ಶಂಖಾನು ಸಂಧಾನದಿಂದ ಸರಸ್ವತಿ ಅನುಗ್ರಹ ಪ್ರಾಪ್ತಿಯಾಗುವುದು ಎನ್ನುವ ನಂಬಿಕೆಯೂ ಇದೆ. – ಡಾ| ಕೆ.ರಾಘವೇಂದ್ರ ಪೈ, ಕಾರ್ಯದರ್ಶಿ, ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ, ಮೈಸೂರು