Advertisement

ಬೆಂಗ್ಳೂರು ಬಿಪಿಒ, ಕಾಲ್‌ಸೆಂಟರ್‌ ಕೆಲ್ಸಕ್ಕೆ ಅಮೆರಿಕ ಕತ್ತರಿ!

03:50 AM Mar 04, 2017 | Team Udayavani |

ವಾಷಿಂಗ್ಟನ್‌: ಬೆಂಗಳೂರಿನಲ್ಲಿ ಕುಳಿತು ಅಮೆರಿಕ ಕಂಪನಿಗಳ ಕೆಲಸ ಮಾಡಿಕೊಡುವ ಪ್ರವೃತ್ತಿಗೆ ಇನ್ನು ಬ್ರೇಕ್‌ ಬೀಳುವ ಸಾಧ್ಯತೆಯಿದೆ. ಒಂದು ವೇಳೆ ಅಮೆರಿಕದ ಕಂಪನಿಗಳು ಹಾಗೆ ಕೆಲಸ ಮಾಡಿಸಿಕೊಂಡರೂ, ಅಲ್ಲಿನ ಸರ್ಕಾರದ ಯಾವುದೇ ಸೌಲಭ್ಯ ಆ ಕಂಪನಿಗೆ ಸಿಗುವುದೇ ಅನುಮಾನ!

Advertisement

2013ರಲ್ಲಿ ಬಿಸಿ ಏರಿಸಿದ್ದ “ಕಾಲ್‌ಸೆಂಟರ್‌ ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆ’ಗೆ ಮರುಜೀವ ತುಂಬುವ ಕುರಿತು ಡೆಮಾಕ್ರಟಿಕ್‌ನ ಜೀನ್‌ ಗ್ರೀನ್‌ ಮತ್ತು ರಿಪಬ್ಲಿಕನ್‌ನ ಸಂಸದ ಡೇವಿಡ್‌ ಮೆಕಿನ್ಲಿ ಸಂಸತ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಉಭಯ ಪಕ್ಷದ ಸಂಸದರೇ ಈ ಪರ ಧ್ವನಿ ಎತ್ತಿರುವುದರಿಂದ, ಹೊರಗುತ್ತಿಗೆ ಮೂಲಕ ಕೆಲಸ ತೆಗೆಸಿಕೊಳ್ಳುತ್ತಿರುವ ಅಮೆರಿಕ ಕಂಪನಿಗಳಿಗೆ ಸರ್ಕಾರ ದೊಡ್ಡ ಹೊಡೆತವನ್ನೇ ನೀಡಲಿದೆ.

ಹೊರಗುತ್ತಿಗೆ ಮತ್ತು ಕಾಲ್‌ಸೆಂಟರ್‌ ವಿಚಾರದಲ್ಲಿ ಅಮೆರಿಕ ಹೆಚ್ಚು ನಂಬಿರುವುದು ಭಾರತವನ್ನೇ. ಅದರಲ್ಲೂ ಬೆಂಗಳೂರಿನಲ್ಲಿ ಸಾವಿರಾರು ಕಂಪನಿಗಳು ಅಮೆರಿಕಕ್ಕಾಗಿಯೇ ದುಡಿಯುತ್ತಿವೆ. ಇದನ್ನೇ ನಂಬಿ ಇಲ್ಲಿ ಲಕ್ಷಾಂತರ ಭಾರತೀಯರು ಬದುಕು ಕಂಡುಕೊಂಡಿದ್ದಾರೆ. ಅವರೆಲ್ಲರ ಉದ್ಯೋಗಕ್ಕೂ ಕತ್ತರಿ ಬೀಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಜಾರಿ ಆದ್ರೆ ಏನಾಗುತ್ತೆ?
ಹೊರಗುತ್ತಿಗೆ ನೀಡುವ ಕಂಪನಿಗಳಿಗೆ ಅಮೆರಿಕ ಸರ್ಕಾರ ಯಾವುದೇ ಸೌಲಭ್ಯ ನೀಡುವುದಿಲ್ಲ. ವಿಶೇಷವಾಗಿ ಅವರಿಗೆ ಸಾಲವೂ ಸಿಗುವುದಿಲ್ಲ. ಅಂಥ ಕಂಪನಿಗಳು ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ.

ಸಂಸದ ಗ್ರೀನ್‌ ಪ್ರಕಾರ, ಗ್ರೇಟರ್‌ ಹೌಸ್ಟನ್‌ ಒಂದರಲ್ಲೇ ವಿದೇಶಿ ಕಾಲ್‌ಸೆಂಟರ್‌ ಮೂಲಕ ಕೆಲಸ ಮಾಡಿಸಿಕೊಳ್ಳುವ 54 ಸಾವಿರ ಕಂಪನಿಗಳಿವೆ. ಒಟ್ಟಾರೆ ಅಮೆರಿಕದಲ್ಲಿ 25 ಲಕ್ಷ ಸಂಸ್ಥೆಗಳು ಹೊರಗುತ್ತಿಗೆಯನ್ನೇ ನಂಬಿಕೊಂಡಿವೆ!

Advertisement

ನಮ್ಮ ಕೆಲಸ ಭಾರತದ ಪಾಲು: ಗ್ರೀನ್‌
“ಅಮೆರಿಕದ ಮಂದಿಗೆ ಹೆಚ್ಚು ಕೆಲಸ ನೀಡಲು ಈ ಕಾಯ್ದೆ ನೆರವಾಗಲಿದೆ. ಒಳ್ಳೆಯ ವೇತನವೂ ಸಿಗಲಿದೆ. ದುರಾದೃಷ್ಟ, ನಮ್ಮ ಉದ್ಯೋಗಗಳು ಭಾರತ, ಫಿಲಿಪ್ಪೀನ್ಸ್‌ನ ಪಾಲಾಗಿವೆ. ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಸುವುದೇ ಸಂಸತ್ತಿನ ಮೊದಲ ಆದ್ಯತೆಯಾಗಬೇಕು. ಹೊರಗುತ್ತಿಗೆ ನೀಡುವ ಕಂಪನಿಗಳಿಗೆ ಸರ್ಕಾರ ಯಾವುದೇ ನೆರವು ನೀಡಬಾರದು. ಸಾಲ ಸೌಲಭ್ಯವನ್ನೂ ಕಿತ್ತುಕೊಳ್ಳಬೇಕು’ ಸಂಸತ್ತಿನಲ್ಲಿ ಹೀಗೆಂದು ಹೇಳಿರುವುದು ಡೆಮಾಕ್ರಟಿಕ್‌ನ ಜೀನ್‌ ಗ್ರೀನ್‌.

Advertisement

Udayavani is now on Telegram. Click here to join our channel and stay updated with the latest news.

Next