Advertisement
ಇದನ್ನೂ ಓದಿ:IPL; ಸಂಜು ಸ್ಯಾಮ್ಸನ್ ಗೆ ನಾಯಕತ್ವದ ಆಫರ್ ನೀಡಿತಾ ಸಿಎಸ್ ಕೆ? ಅಶ್ವಿನ್ ಹೇಳಿದ್ದೇನು?
Related Articles
Advertisement
ಹೋಟೆಲ್ ಮುಚ್ಚಲು ಕಾರಣವೇನು?
ಮಲ್ಲೇಶ್ವರಂನಲ್ಲಿರುವ ನ್ಯೂ ಕೃಷ್ಣ ಭವನ್ ಹೋಟೆಲ್ ಸದಾ ಜನಜಂಗುಳಿಯಿಂದ ತುಂಬಿರುತ್ತಿತ್ತು. ಇಲ್ಲಿನ ಬಿಸಿ ಬಿಸಿ ಇಡ್ಲಿ ಸಾಂಬಾರ್, ರಾಗಿ ರೊಟ್ಟಿ, ಗುಲಾಬ್ ಜಾಮೂನು, ನೀರು ದೋಸೆ, ಮಸಾಲೆ ದೋಸೆ, ಬಟನ್ ಇಡ್ಲಿಗೆ ಫೇಮಸ್ ಆಗಿತ್ತು. ಹೀಗೆ ಏಳು ದಶಕಗಳಿಂದ ಗ್ರಾಹಕರ ಪ್ರೀತಿಗೆ ಪಾತ್ರವಾಗಿದ್ದ ನ್ಯೂ ಕೃಷ್ಣ ಭವನ್ ಹೋಟೆಲ್ ಮುಚ್ಚುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಹೋಟೆಲ್ ಆಡಳಿತ ಮಂಡಳಿಯ ಮಾಹಿತಿ ಪ್ರಕಾರ, ನ್ಯೂ ಕೃಷ್ಣ ಭವನ್ ಹೋಟೆಲ್ ಇರುವ ಕಟ್ಟಡ ಮತ್ತು ನಿವೇಶನವನ್ನು ಜ್ಯುವೆಲ್ಲರಿ ಕಂಪನಿಯೊಂದು ಖರೀದಿಸಿದ್ದು, ಈ ಕಾರಣದಿಂದ ಹೋಟೆಲ್ ಮುಚ್ಚಲು ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದೆ.
ಹೋಟೆಲ್ ಮುಚ್ಚುತ್ತಿದೆಯಾದರೂ ಇಲ್ಲಿ ಕಳೆದ 45 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಿಬಂದಿಗಳಿಗೆ ಬೇರೆ ಕಡೆ ವ್ಯವಸ್ಥೆ ಮಾಡುತ್ತಿರುವುದಾಗಿ ಆಡಳಿತ ಮಂಡಳಿ ಹೇಳಿದೆ. ಕೋವಿಡ್ ಗಿಂತ ಮೊದಲು ನ್ಯೂ ಕೃಷ್ಣ ಭವನ್ ಹೋಟೆಲ್ ನಲ್ಲಿ ಸುಮಾರು 120 ಮಂದಿ ಕೆಲಸಗಾರರಿದ್ದರು. ಆದರೆ ಕೋವಿಡ್ ನಂತರ ವ್ಯಾಪಾರ ಕುಸಿತದಿಂದಾಗಿ ಆ ಸಂಖ್ಯೆ ಈಗ 80ಕ್ಕೆ ಇಳಿಕೆಯಾಗಿದೆ.
ಇತಿಹಾಸ:
ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ರಾಮಕೃಷ್ಣ ಪ್ರಭು ಎಂಬುವವರಿ 1954ರಲ್ಲಿ ನ್ಯೂ ಕೃಷ್ಣ ಭವನ್ ಹೋಟಲ್ ಸ್ಥಾಪಿಸಿದ್ದರು. ನಂತರ ಹೋಟೆಲ್ ಮಾಲೀಕತ್ವ ರಾಮಕೃಷ್ಣ ಪ್ರಭು ಅವರ ಪುತ್ರ ಸುಂದರ್ ಪ್ರಭು ಅವರಿಗೆ ಹಸ್ತಾಂತರವಾಗಿತ್ತು. ಈಗ ಮೂರನೇ ತಲೆಮಾರಿನ ಸುನಿಲ್ ಎಸ್ ಪ್ರಭು ಹೋಟೆಲ್ ಮಾಲೀಕತ್ವ ವಹಿಸಿಕೊಂಡಿದ್ದಾರೆ.
ಮಲ್ಲೇಶ್ವರಂನ ಲ್ಯಾಂಡ್ ಮಾರ್ಕ್ ನ್ಯೂ ಕೃಷ್ಣ ಭವನ್ ಹೋಟೆಲ್ ಮುಚ್ಚುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ಮಲ್ಲೇಶ್ವರಂನ ನಿವಾಸಿ, ಸ್ನೂಕರ್ ಲೆಜೆಂಡ್ ಅರವಿಂದ್ ಸಾವೂರ್, ಪಂಕಜ್ ಅಡ್ವಾಣಿ ಸೇರಿದಂತೆ ನೂರಾರು ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.