Advertisement

Bengaluru: ಥಾಯ್ಲೆಂಡ್‌ನಿಂದ “ಹೈಡ್ರೋ ಗಾಂಜಾ’ ತರಿಸುತ್ತಿದ್ದ ಮಹಿಳೆ ಸೆರೆ

12:50 PM Aug 31, 2024 | Team Udayavani |

ಬೆಂಗಳೂರು: ಥಾಯ್ಲೆಂಡ್‌ನಿಂದ ಪೋಸ್ಟ್‌ ಮೂಲಕ ಹೈಡ್ರೋ ಗಾಂಜಾವನ್ನು ಆಮದು ಮಾಡಿ ಕೊಂಡಿದ್ದ ಕೇರಳದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 25 ಲಕ್ಷ ರೂ. ಮೌಲ್ಯದ 570 ಗ್ರಾಂ ಮಾದಕವಸ್ತು ಜಪ್ತಿ ಮಾಡಿದ್ದಾರೆ.

Advertisement

ಎಲೆಕ್ಟ್ರಾನಿಕ್‌ ಸಿಟಿಯ ಕೋನಪ್ಪನಅಗ್ರಹಾರದ ಲಿಜಿನಾ ಸುರೇಶ್‌ (28) ಬಂಧಿತ ಮಹಿಳೆ. ತಲೆಮರೆಸಿಕೊಂಡಿರುವ ಲಿಜಿನಾ ಸ್ನೇಹಿತನಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಆರೋಪಿತೆ ಲಿಜಿನಾ 2018ನೇ ಸಾಲಿನಲ್ಲಿ ಕೇರಳದಿಂದ ಬೆಂಗಳೂರಿಗೆ ಬಂದು ಪತಿ ಶಮೀರ್‌ ಜೊತೆ ವಾಸವಾಗಿದ್ದಳು. ಈ ಪ್ರಕರಣದಲ್ಲಿ ಥಾಯ್ಲೆಂಡ್‌ನ‌ಲ್ಲಿ ವಾಸವಿರುವ ಕೇರಳ ಮೂಲದ ಸ್ನೇಹಿತ ಸಹದ್‌ ಅಲಿಯಾಸ್‌ ಕುಟ್ಟಾ ಎಂಬಾತನಿಂದ ಹೈಡೋ ಗಾಂಜಾವನ್ನು ಪೋಸ್ಟ್‌ ಮೂಲಕ ಲಿಜಿನಾ ಆಮದು ಮಾಡಿಕೊಳ್ಳುತ್ತಿದ್ದಳು.

ಮಹಿಳೆಯ ವಿಳಾಸಕ್ಕೆ ಥಾಯ್ಲೆಂಡ್‌ನಿಂದ ಇಂಡಿಯನ್‌ ಪೋಸ್ಟ್‌ ಆಫೀಸ್‌ ಮೂಲಕ ಹೈಡ್ರೋ ಗಾಂಜಾವನ್ನು ಆಕೆಯ ಸ್ನೇಹಿತ ಕಳುಹಿಸಿಕೊಡುತ್ತಿದ್ದ. ಬಳಿಕ ಈಕೆಯ ಸಹಾ ಯದಿಂದ ನಗರದಲ್ಲಿ ಡ್ರಗ್ಸ್‌ ಪೆಡ್ಲಿಂಗ್‌ ನಡೆಸುತ್ತಿದ್ದ. ಬೆಳ್ಳಂದೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಲಿಜಿನಾಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next