Advertisement

ಬೆಂಗಳೂರು ಗಲಭೆಗೆ ಒಂದು ವರ್ಷ

02:09 PM Aug 12, 2021 | Team Udayavani |

ಬೆಂಗಳೂರು: ನಗರದ ಇತಿಹಾಸದಲ್ಲೇ ಕಾಡುಗೊಂಡನ ಹಳ್ಳಿ ಮತ್ತು ದೇವರ ಜೀವನಹಳ್ಳಿ ಗಲಭೆ ಪ್ರಕರಣ ಅಚ್ಚಳಿ‌ಯದೆ ಉಳಿದುಕೊಂಡಿದೆ. ಈ ದುರ್ಘ‌ಟನೆಗೆ ಆ.11ಕ್ಕೆ ಒಂದು ವರ್ಷ.

Advertisement

ಅನ್ಯಧರ್ಮದ ಗುರುಗಳ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿದ ಆರೋಪದ ಮೇಲೆ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರ ಅಳಿಯ ನವೀನ್‌ ವಿರುದ್ಧ ಆ.11ರ ರಾತ್ರಿ ದೂರು ದಾಖಲು ನೀಡುವ ನೆಪದಲ್ಲಿಕೆ.ಜಿ.ಹಳ್ಳಿಮತ್ತುಡಿ.ಜೆ.ಹಳ್ಳಿ
ಠಾಣೆಗಳಿಗೆ ಬಂದ ಕೆಲವರು ಒಳಗಡೆ ನುಗ್ಗಿ ದಾಂಧಲೆ ನಡೆಸಿದರು. ಅಲ್ಲದೆ, ಎರಡು ಠಾಣೆಗಳ ಮೇಲೆ ಬೆಂಕಿ ಹಾಕಿದರು. ಅದೇ ವೇಳೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಸೋದರ ಅಳಿಯ ನವೀನ್‌ ಮನೆ,ಕಚೇರಿಗಳ ಮೇಲು ದಾಳಿ ನಡೆಸಿ ಬೆಂಕಿ ಹಾಕಿದ್ದರು. ಜತೆಗೆ ರಸ್ತೆ ಪಕ್ಕದಲ್ಲಿ ನಿಂತಿದ್ದ ವಾಹನಗಳಿಗೂ ಬೆಂಕಿ ಹಚ್ಚಿದ್ದರು.

ಈ ಸಂಬಂಧ ಸ್ಥಳೀಯರ ಪೊಲೀಸರು ‌ 400ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದರು. ಅನಂತರ ಎನ್‌ಐಎ ತನಿಖೆಕೈಗೊಂಡು 250ಕ್ಕೂ ಅಧಿಕ ಮಂದಿ ಯನ್ನು ಬಂಧಿಸಿತ್ತು. ಜತೆಗೆ ಎಸ್‌ಡಿಪಿಐ ಸಂಘಟನೆ ಕಚೇರಿಗಳ ಮೇಲೆ ದಾಳಿ ನಡೆಸಿ,ಕೆಲ ಸದಸ್ಯರನ್ನು ಬಂಧಿಸಿತ್ತು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ನಮ್ಮ ಮನೆಗೆ ಹಾಗೂ‌ ಪೊಲೀಸ್‌ ಠಾಣೆಗಳಿಗೆ ಬೆಂಕಿ ಇಟ್ಟು ಒಂದು ವರ್ಷ ಅಗಿದೆ. ನಡೆಯಬಾರದ ಘಟನೆ ಅಂದು ನಡೆದು ಹೋಗಿತ್ತು. ಈ ವಿಚಾರದಲ್ಲಿ ತೀವ್ರ ನೋವು ಅನುಭವಿಸಿದ್ದೇನೆ ಘಟನೆಯಲ್ಲಿ ಭಾಗಿಯಾದ ಆರೋಪಿಗಳ ಬಂಧನಕ್ಕೆ ಸಂಬಂಧಿಸುವ ಮೂಲಕ ನ್ಯಾಯ ಸಿಕ್ಕಿದೆ . ಇನ್ನು
ಸಂಪೂರ್ಣ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಆದರೆ ನಮ್ಮ ಪಕ್ಷದಿಂದ ಇದುವರೆಗೂ ನ್ಯಾಯ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಸಾಕು ನಾಯಿ ಪ್ರವೇಶಕ್ಕೆ ಬಿಬಿಎಂಪಿ ಷರತ್ತು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರಿಗೆ ಮನವಿ ಮಾಡಲಾಗಿದೆ. ಆರೋಪಿ ಸ್ಥಾನಲ್ಲಿರುವ ಮಾಜಿ ಮೇಯರ್‌ ಸಂಪತ್‌ ರಾಜ್‌ ಅವರನ್ನು ಪಕ್ಷದಿಂ‌ದ ಉಚ್ಚಾಟಿಸುವಂತೆ ಮನವಿ ಮಾಡಿದ್ದೇನೆ ಎಂದರು.ಗಲಭೆ ಪ್ರಕರಣದಲ್ಲಿ ಭಾಗಿಯಾಗಿರುವ ಸಂಪತ್‌ ರಾಜ್‌,ಮಾಜಿ ಕಾರ್ಪೋರೇಟರ್‌ ಜಾಕಿರ್‌ ಹುಸೇನ್‌, ಸಂಪತ್‌ ರಾಜ್‌ ಆಪ್ತ ಅರುಣ್‌ ರಾಜ್‌ಗೆ ಹೈಕೋರ್ಟ್‌
ನೀಡಿರುವ ‌ ಜಾಮೀನು ರದ್ದು ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಲಾಗಿದೆ. ಅದೇ ತಿಂಗಳು 23ಕ್ಕೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಇನ್ನು ನನಗೆ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. ಪಕ್ಷದಿಂದ ನ್ಯಾಯಾ ಸಿಗಬೇಕಿದೆ ಎಂದರು.

Advertisement

ಠಾಣೆ ನವೀಕರಣ ಕೆಲಸ ಆಗಿಲ್ಲ
ಕಿಡಿಗೇಡಿಗಳಿಂದ ಹಾಳಾಗಿದ್ದ ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಯನ್ನು ನವೀಕರಿಸುವುದಾಗಿ ಸರ್ಕಾರ ಭರವಸೆ ನೀಡಿ ವರ್ಷ ಕಳೆದರೂ ಠಾಣೆಯಲ್ಲಿ
ಯಾವುದೇ ರೀತಿಯಲ್ಲಿ ನವೀಕರಣ ಕೆಲಸ ಆಗಿಲ್ಲ. ಅದಕ್ಕೆ ಅನುದಾನ ಸರ್ಕಾರ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಘಟನೆಗೆ ಸಾಕ್ಷಿ ಎಂಬಂತೆ ಪಾರ್ಕಿಂಗ್‌ ಕಾರಿಡಾರ್‌ ಗೋಡೆ ಹಾಗೂ ಠಾಣೆಯ ಮೊದಲ ಮಹಡಿಯ ಗೋಡೆಗಳೆಲ್ಲ ಇನ್ನೂಕಪ್ಪಾಗಿಯೆ ಇವೆ.

Advertisement

Udayavani is now on Telegram. Click here to join our channel and stay updated with the latest news.

Next