Advertisement

ಬೆಂಗಳೂರು-ವಿಜಯವಾಡ ಕಾರಿಡಾರ್‌ಗೆ ನಿತಿನ್‌ ಗಡ್ಕರಿ ಅಸ್ತು

11:59 PM Feb 25, 2023 | Team Udayavani |

ಹೈದರಾಬಾದ್‌: ಕರ್ನಾಟಕ -ಆಂಧ್ರಪ್ರದೇಶದ ನಡುವೆ ಸಂಪರ್ಕ ಬೆಸೆಯಲಿರುವ ಮಹತ್ತರ ಯೋಜನೆ “ಬೆಂಗಳೂರು-ವಿಜಯವಾಡ ಆರ್ಥಿಕ ಕಾರಿಡಾರ್‌’. ಇದರ ಭಾಗವಾಗಿರುವ 32 ಕಿ.ಮೀ. ಉದ್ದದ ಷಟ³ಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಶನಿವಾರ ಅನುಮೋದನೆ ನೀಡಿದ್ದಾರೆ.

Advertisement

ಆಂಧ್ರಪ್ರದೇಶದ ಚಂದ್ರಶೇಖರಪುರಂ ಹಾಗೂ ಪೋಲಾವರಂ ನಡುವೆ ನಿರ್ಮಾಣಗೊಳ್ಳಲಿರುವ 32 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ವಿಜಯವಾಡ ಎಕಾನಮಿಕ್‌ ಕಾರಿಡಾರ್‌ನ ನಿರ್ಮಾಣದ ಮಹತ್ತರ ಘಟ್ಟ ವಾಗಿದ್ದು, ಭಾರತಮಾಲಾ ಪ್ರಯೋಜನ ಯೋಜನೆ ಅನ್ವಯ 1,292.65 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.

ಮೋದಿ ಸರಕಾರದ ಮಹತ್ತರ ಯೋಜನೆಗಳಲ್ಲಿ ಒಂದಾಗಿರುವ ಕಾರಿಡಾರ್‌, ಒಟ್ಟಾರೆ 342.5 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಇಷ್ಟೂ ದೂರ ಪೂರ್ಣಗೊಂಡರೆ ಅನಂತಪುರ, ಕಡಪ, ಗುಂಟೂರು ಸಹಿತ ಆಂಧ್ರಪ್ರದೇಶದ ಹಲವು ಕೈಗಾರಿಕ ಕೇಂದ್ರಗಳನ್ನು ಬೆಂಗಳೂರಿನಿಂದ ನೇರವಾಗಿ ತಲುಪಲು ಯೋಜನೆ ಅನುವು ಮಾಡಿಕೊಡುವ ಮೂಲಕ ಆರ್ಥಿಕ ವ್ಯವಹಾರಗಳಿಗೆ ಉತ್ತೇಜನ ನೀಡಲಿದೆ. ಅಲ್ಲದೇ ಬೆಂಗಳೂರು -ಕಡಪ-ವಿಜಯವಾಡಗಳ ನಡುವಿನ ಸಾರಿಗೆ ಸಮಯವನ್ನೂ ಕಡಿಮೆಗೊಳಿಸಲಿದೆ.

19,200 ಕೋ.ರೂ. ವೆಚ್ಚ: ಈ ಎಕಾನಮಿಕ್‌ ಕಾರಿಡಾರನ್ನು ಭಾರತಮಾಲಾ ಪ್ರಯೋಜನ ಯೋಜನೆ ಅನ್ವಯ 19,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜಿಸಲಾಗಿದ್ದು, ಇನ್ನೂ 14 ಹಂತಗಳ ಮೂಲಕ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. 2026ರ ವೇಳೆಗೆ ಯೋಜನೆ ಪೂರ್ಣಗೊಳ್ಳುವುದೆಂದು ನಿರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next