ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ದಲಿತ ಉದ್ಯೋಗಿಯೊಬ್ಬರನ್ನು ಮ್ಯಾನ್‌ಹೋಲ್‌ಗೆ ಇಳಿಸಿ ಸಚ್ಛತೆ ಮಾಡಿಸಿದ್ದಕ್ಕಾಗಿ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಆಸ್ಪತ್ರೆಯ ಹೌಸ್‌ಕೀಪಿಂಗ್ ಮೇಲ್ವಿಚಾರಕ ಡಿ. ರಾಜಾ, ಗಿಲ್ಬರ್ಟ್ ಮತ್ತು ನಿರ್ವಾಹಕರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ-1989 ಸೆಕ್ಷನ್ 3(1) (ಜೆ) ಮತ್ತು ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಸೆಕ್ಷನ್ 7,8,9 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ ಸಮತಾ ಸೈನಿಕ ದಳ ಮತ್ತು 53 ವರ್ಷದ ಸಂತ್ರಸ್ತರ ಪರವಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂಧನ ಕೆ.ಎನ್ ಅವರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಸಂತ್ರಸ್ತ ಖಾಯಂ ಉದ್ಯೋಗಿಯಾಗಿದ್ದು, 21 ವರ್ಷಗಳಿಂದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಮ್ಯಾನ್‌ಹೋಲ್‌ಗೆ ಇಳಿಸಲು ಮತ್ತು ಒಳಚರಂಡಿ ಸ್ವಚ್ಛತೇ ಮಾಡುವಂತೆ ಕೇಳಲಾಗಿದ್ದು, ನಿರಾಕರಿಸಿದಾಗ, ಆರೋಪಿಗಳು ಸೇವೆಯಿಂದ ವಜಾಗೊಳಿಸುವುದಾಗಿ ಬೆದರಿಕೆ ಹಾಕಿದ್ದರು.
ಮ್ಯಾನೇಜ್ ಮೆಂಟ್ ಕೂಡ ಈ ಕೆಲಸ ಮಾಡುವುದು ನಿನ್ನ ಕರ್ತವ್ಯ ಎಂದು ಹೇಳಿತ್ತು, ಅವರು ಅಪಾಯದಲ್ಲಿದ್ದರೂ ಮ್ಯಾನ್‌ಹೋಲ್ ಗೆ ಇಳಿಯಬೇಕಾಯಿತು , ನಂತರ ಸಮತಾ ಸೈನಿಕ ದಳವನ್ನು ಸಂಪರ್ಕಿಸಿ ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.