Advertisement

Bengaluru: ರಾತ್ರಿ ವೇಳೆ ಮನೆ ಕಳವು: ಇಬ್ಬರ ಬಂಧನ

12:35 PM Sep 28, 2024 | Team Udayavani |

ಬೆಂಗಳೂರು: ರಾತ್ರಿ ವೇಳೆ ಮನೆಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಆರೋಪಿ ಸೇರಿ ಇಬ್ಬರನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಯಶವಂತಪುರ ನಿವಾಸಿ ಶ್ರೀನಿವಾಸ ಅಲಿಯಾಸ್‌ ಕರಾಟೆ ಸೀನ(35) ಮತ್ತು ದೇವನಹಳ್ಳಿ ನಿವಾಸಿ ಮಂಜುನಾಥ(47) ಬಂಧಿತರು. ಆರೋಪಿಗಳಿಂದ 14 ಲಕ್ಷ ರೂ. ಮೌಲ್ಯದ 245 ಗ್ರಾಂ ತೂಕದ ಚಿನ್ನಾಭರಣ, ದ್ವಿಚಕ್ರ ವಾಹನ ಹಾಗೂ ಕಬ್ಬಿಣದ ರಾಡ್‌ ಜಪ್ತಿ ಮಾಡಲಾಗಿದೆ.

ಮೇ 7ರಂದು ಮುಂಜಾನೆ ದುಷ್ಕರ್ಮಿಗಳು ಪೀಣ್ಯ 2ನೇ ಹಂತದ ಫ್ಯಾಕ್ಟರಿಯೊಂದರ ಮಹಡಿ ಶೀಟ್‌ ಕತ್ತರಿಸಿ ಒಳಪ್ರವೇಶಿಸಿ 55 ಸಾವಿರ ರೂ. ನಗದು, ಲ್ಯಾಪ್‌ಟಾಪ್‌, ಬಿಲ್ಲಿಂಗ್‌ ಸಿಗ್ನೇಚರ್‌ ಸೀಲ್‌ ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿದ್ದರು. ಈ ಸಂಬಂಧ ಫ್ಯಾಕ್ಟರಿ ಮಾಲೀಕರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಕರಣದ ತನಿಖೆ ವೇಳೆ ಘಟನಾ ಸ್ಥಳದ ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಸಿಕ್ಕ ಸುಳಿವು ಹಾಗೂ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಪೀಣ್ಯ 2ನೇ ಹಂತದ ಬಸ್‌ ನಿಲ್ದಾಣದ ಬಳಿ ಆರೋಪಿ ಶ್ರೀನಿವಾಸನನ್ನು ಬೈಕ್‌, 2 ಚಿನ್ನದ ಸರ, ಬ್ರಾಸ್ಲೆಟ್‌ ಸಹಿತ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next