ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ನ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ತಂಡ ಕೇವಲ 109 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಇದರೊಂದಿಗೆ 143 ರನ್ ಹಿನ್ನಡೆ ಅನುಭವಿಸಿದೆ.
86 ರನ್ ಗೆ ಆರು ವಿಕೆಟ್ ಕಳೆದುಕೊಂಡಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಲಂಕಾದ ಬ್ಯಾಟಿಂಗ್ ಇಂದೂ ಸುಧಾರಣೆ ಕಾಣಲಿಲ್ಲ. ನಾಟೌಟಾಗಿದ್ದ ಕೀಪರ್ ಡಿಕವೆಲ್ಲಾ 21 ರನ್ ಗೆ ಔಟಾದರು. ಉಳಿದವರು ಯಾರೂ ಇಂದು ಎರಡಂಕಿ ದಾಟಲಿಲ್ಲ. 43 ರನ್ ಗಳಿಸಿದ ಏಂಜಲೋ ಮ್ಯಾಥ್ಯೂಸ್ ಅವರದ್ದೇ ಹೆಚ್ಚಿನ ಮೊತ್ತ.
ಭಾರತದ ಪರ ಜಸ್ಪ್ರೀತ್ ಬುಮ್ರಾ ಐದು ವಿಕೆಟ್ ಪಡೆದರು. ಅಶ್ವಿನ್ ಮತ್ತು ಶಮಿ ಎರಡು ವಿಕೆಟ್ ಕಿತ್ತರೆ, ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:ವಿಶ್ವದ ಅತ್ಯಂತ ಉದ್ದದ ಕಾರು; ಕಾರಲ್ಲೇ ಇದೆ ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್
ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 252 ರನ್ ಗಳಿಸಿದೆ. ಶ್ರೇಯಸ್ ಅಯ್ಯರ್ 92 ಮತ್ತು ರಿಷಬ್ ಪಂತ್ 39 ರನ್ ಗಳಿಸಿದ್ದರು.