ಬೆಂಗಳೂರು: ಬೆಳಗಾವಿ, ಕಾರವಾರ ಸೇರಿ ರಾಜ್ಯದ ಗಡಿಭಾಗದ ಜಿಲ್ಲೆಗಳಿಗೆ ಹೊಂದಿಕೊಂಡಂತೆ ಹೊರರಾಜ್ಯದ ಮದ್ಯದಂಗಡಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಜತೆಗೆ ಕಡಿಮೆ ದರಕ್ಕೆ ವಿಸ್ಕಿ (ಮದ್ಯದ ಒಂದು ವಿಧ) ರಾಜ್ಯದ ಮದ್ಯ ಪ್ರಿಯರ ಕೈ ಸೇರುತ್ತಿದೆ. ಇದರಿಂದ ಕರ್ನಾಟಕ ರಾಜ್ಯ ಅಬಕಾರಿ ಇಲಾಖೆ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.
ಕೆಲವು ವಿಸ್ಕಿಗಳ ದರ ಹೊರ ರಾಜ್ಯದ ಮದ್ಯದ ಅಂಗಡಿ ಗಳಲ್ಲಿ ಕಡಿಮೆ ಬೆಲೆ ಇದ್ದರೆ, ಅದೇ ಮದ್ಯಕ್ಕೆ ರಾಜ್ಯದಲ್ಲಿ ಹೆಚ್ಚಿನ ದರ ತೆರಬೇಕಾಗಿದೆ. ಇದರ ವೆಚ್ಚ ಲೆಕ್ಕ ಹಾಕಿರುವ ಮದ್ಯ ಪ್ರಿಯರು ತಮ್ಮೂರಿನ ಗಡಿಭಾಗ ದಾಟಿ ಹೊರ ರಾಜ್ಯದ ಗಡಿಗಳಲ್ಲಿರುವ ಮದ್ಯಂಗಡಿಗೆ ತೆರಳಿ ಮದ್ಯ ಖರೀದಿಸುತ್ತಿದ್ದು ಇದು ರಾಜ್ಯ ಅಬಕಾರಿ ಇಲಾಖೆಯನ್ನು ಚಿಂತೆಗೀಡು ಮಾಡಿದೆ. ಕೆಲವು ವಿಸ್ಕಿ ಫುಲ್ ಬಾಟಲ್‌ಗಳು ಕರ್ನಾಟಕಕ್ಕಿಂತ 400-500 ರೂ. ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದು ಇದರಿಂದ ಮದ್ಯಪ್ರಿಯರು ಖುಷಿ ಆಗಿದ್ದಾರೆ.
ಇದರಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ರಾಜ್ಯ ಅಬ ಕಾರಿ ಇಲಾಖೆ, ಈಗ ಕೆಲವು ಮದ್ಯದ ದರಗಳಲ್ಲಿ ಶೇ.15ರಿಂದ 20ರಷ್ಟು ಇಳಿಕೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ಅಬ ಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಕರ್ನಾ ಟಕಕ್ಕೆ ಹೋಲಿಸಿದರೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಮದ್ಯದ ಬೆಲೆ ಕಡಿಮೆ ಇದೆ. ನಮ್ಮಲ್ಲಿ ದರ ಅಧಿಕವಾಗಿರುವ ಹಿನ್ನೆಲೆಯಲ್ಲಿ ಆದಾಯ ಕುಸಿಯುತ್ತಿದೆ. ಕೆಲವು ವಿಸ್ಕಿ ಬೆಲೆ ಮಹಾರಾಷ್ಟ್ರದಲ್ಲಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗುತ್ತಿದೆ. ರಾಜ್ಯದಲ್ಲಿ ಕೆಲವು ವಿಸ್ಕಿಗಳ ಬೆಲೆ 1,500-1.600 ರೂ. ಮಾರಾಟವಾದರೆ ನೆರೆಯ ಮಹಾರಾಷ್ಟ್ರ ಗಡಿಭಾಗದಲ್ಲಿ 1,100- 1,200 ರೂ.ಗ್ರಾಹಕರಿಗೆ ಸಿಗಲಿದೆ. ಆ ಹಿನ್ನೆಲೆ ಯಲ್ಲಿ ಗಡಿದಾಟಿ ಬೆಳಗಾವಿ ಭಾಗದ ಜನರು ತಮ್ಮೂರಿಗೆ ಹತ್ತಿರ ದಲ್ಲಿರುವ ಮದ್ಯದಂಗಡಿ ಯಲ್ಲಿ ಖರೀದಿ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಜತೆಗೆ ಹೊರ ರಾಜ್ಯದವರು ಅವರ ಗಡಿಗಳಲ್ಲಿ ಅಧಿಕ ಸಂಖ್ಯೆ ಯಲ್ಲಿ ಹೊಸದಾಗಿ ಮದ್ಯದಂಗಡಿ ತೆರೆಯುತ್ತಿ ದ್ದಾರೆ. ಈ ಹಿನ್ನೆಲೆಯಲ್ಲಿ ಗಡಿಭಾಗದ ರಾಜ್ಯದ ಮದ್ಯದ ಅಂಗ ಡಿಗಳಲ್ಲಿ ತಿಂಗಳಿಗೆ 50ರಿಂದ 60 ಸಾವಿರ ರೂ. ಆದಾ ಯ ಹೆಚ್ಚಿಗೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಜುಲೈನಲ್ಲಿ ಬೆಲೆ ಇಳಿಕೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಅಧಿಸೂಚನೆಯನ್ನು ತಡೆಹಿಡಿಯಲಾಗಿದೆ. ಈ ವಿಷಯದ ಬಗ್ಗೆ ಸ್ಪಷ್ಟತೆಯ ಕೊರತೆಯಿಂದಾಗಿ ರಾಜ್ಯ ಪಾನೀಯ ನಿಗಮವು ಹೊಸ ಪರವಾನಗಿ ನೀಡುವುದನ್ನು ವಿಳಂಬ ಗೊಳಿಸಿದೆ. ಇದರಿಂದ ಅಂತಿಮ ಅಧಿಸೂಚನೆ ಬಿಡುಗಡೆ ಮಾಡುವಲ್ಲಿನ ವಿಳಂಬವು ದರ ಪರಿಷ್ಕರಣೆ ನಿರ್ಧಾರವೂ ಮುಂದೆ ಹೋಗಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕದಲ್ಲಿ ಮದ್ಯದ ಬಳಕೆ ದಕ್ಷಿಣ ಭಾರತದ ರಾಜ್ಯಗಳಿಗಿಂತ ಹೆಚ್ಚಿದ್ದರೂ ದರ ಕೊಂಚ ಹೆಚ್ಚೇ ಇತ್ತು. ಪ್ರೀಮಿಯಂ ಬ್ರಾಂಡ್‌ಗಳ ಮದ್ಯದ ದರಗಳಲ್ಲಿ ಪರಿಷ್ಕರಣೆ ಮಾಡಬೇಕು ಎನ್ನುವ ಬೇಡಿಕೆ ಕೆಲ ದಿನಗಳಿಂದಲೇ ಇತ್ತು. ಲೋಕಸಭೆ ಚುನಾವಣೆ ಮುಗಿದ ನಂತರ ದರ ಪರಿಷ್ಕರಣೆ ಆಗುವ ಲೆಕ್ಕಾಚಾರದ್ದು, ಜಾರಿ ಸಾಧ್ಯತೆಗಳು ಹೆಚ್ಚಿವೆ.