Advertisement

Bengaluru SHAMED again! : ಮತ್ತೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ

04:03 PM Jan 07, 2017 | udayavani editorial |

ಬೆಂಗಳೂರು : ಬೆಂಗಳೂರು ಪೂರ್ವದ ನಗರವಾರಾ ಮುಖ್ಯ ರಸ್ತೆಯಲ್ಲಿ ಇಂದು ಶುಕ್ರವಾರ ಅಪರಿಚಿತ ವ್ಯಕ್ತಿಯೋರ್ವ 23ರ ಹರೆಯದ ಮಹಿಳೆಗೆ ನಡು ರಸ್ತೆಯಲ್ಲಿ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಡೆದಿದ್ದು ಇದರ ಸಿಸಿಟಿವಿ ಚಿತ್ರಿಕೆಯು ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

Advertisement

ಇಂದು ಶುಕ್ರವಾರ ಬೆಳಗ್ಗೆ 6.30ರ ಹೊತ್ತಿಗೆ ತಾನು ಆರೇಬಿಕ್‌ ಕಾಲೇಜ್‌ ಬಸ್‌ ಸ್ಟಾಪ್‌ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ತನ್ನನ್ನು ಬೆನ್ನಟ್ಟಿಕೊಂಡು ಬಂದು ಕಿರುಕುಳ ನೀಡಿದ ಎಂದ ಮಹಿಳೆಯು ಕೆ ಜಿ ಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ ಎಂದು ವರದಿ ತಿಳಿಸಿದೆ.

ತಾನು ತನ್ನ ಉದ್ಯೋಗ ಸ್ಥಳಕ್ಕೆ ಹೋಗುತ್ತಿದ್ದಾಗ ತನ್ನನ್ನು ಬೆನ್ನಟ್ಟಿಕೊಂಡು ಬಂದ ಅಪರಿಚಿತ ವ್ಯಕ್ತಿಯು ತನಗೆ ಲೈಂಗಿಕ ಕಿರುಕುಳ ನೀಡಿದ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ. 

ಬಲವಂತವಾಗಿ ತನ್ನ ಮೇಲೆ ಎರಗಲು ಯತ್ನಿಸಿದ ಅಪರಿಚಿತ ವ್ಯಕ್ತಿಗೆ ಪ್ರತಿರೋಧ ಒಡ್ಡುವ ಯತ್ನದಲ್ಲಿ ತಾನು ಆತನ ಕೈಯನ್ನು ಕಚ್ಚುವಾಗ ತನ್ನ ನಾಲಗೆಗೆ ಹಾಗೂ ದೇಹದ ಇತರ ಭಾಗಗಳಿಗೆ ಗಾಯಗಳಾದವೆಂದು ಮಹಿಳೆ ಹೇಳಿದ್ದಾಳೆ. ಈ ಘಟನೆಯ ವೇಳೆ ಬೀದಿ ನಾಯಿಯೊಂದು ದೊಡ್ಡದಾಗಿ ಬೊಗಳ ತೊಡಗಿದಾಗ ಅಪರಿಚಿತ ಆರೋಪಿಯು ಸ್ಥಳದಿಂದ ಪಲಾಯನಗೈದನೆಂದು ವರದಿಗಳು ತಿಳಿಸಿವೆ. 

ಬೆಂಗಳೂರು ಪೂರ್ವ ಕಮ್ಮನಹಳ್ಳಿಯಲ್ಲಿ ಮಹಿಳೆಯೊಬ್ಬಳಿಗೆ ನಾಲ್ವರು ಕಾಮಾಂಧರು ಲೈಂಗಿಕ ಕಿರುಕುಳ ನೀಡಿದ ಘಟನೆ ಇನ್ನೂ ಜನಮನದಲ್ಲಿ ಭೀತಿಯನ್ನು ಸೃಷ್ಟಿಸಿರುವ ವೇಳೆಯಲ್ಲಿ ಇಂದು ಶುಕ್ರವಾರ ನಡೆದಿರುವ ಈ ಹೊಸ ಘಟನೆ ಜನರಲ್ಲಿನ ಆತಂಕವನ್ನು ಇನ್ನಷ್ಟು ತೀವ್ರಗೊಳಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next