Advertisement

Bengaluru: ಅವಶೇಷಗಳಡಿ ಒಬ್ಬ ಕಾರ್ಮಿಕನಿಗೆ ಶೋಧ

11:54 AM Oct 25, 2024 | Team Udayavani |

ಬೆಂಗಳೂರು: ಬಾಬುಸಾಬ್‌ ಪಾಳ್ಯದ 7 ಅಂತಸ್ತಿನ ಕಟ್ಟಡ ಕುಸಿತದಿಂದ ಅವಶೇಷ ಗಳಡಿ ಸಿಲುಕಿದ್ದ ಕಾರ್ಮಿಕನಿಗಾಗಿ ನಡೆಯುತ್ತಿದ್ದ ಶೋಧ ಕಾರ್ಯವನ್ನು ಗುರುವಾರ ರಾತ್ರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Advertisement

ಅಗ್ನಿಶಾಮಳ ದಳ, ಎನ್‌ ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಸತತ 3 ದಿನಗಳಿಂದ ಅವಶೇಷಗಳನ್ನು ತೆರವುಗೊಳಿಸಿ ಶೋಧಿಸಿದರು. ಏಳುಮಲೈ ಹಾಗೂ ಗಜೇಂದ್ರ ಎಂಬ ಇಬ್ಬರು ಕಾರ್ಮಿಕರಿಗಾಗಿ ಶೋಧ ನಡೆಸಲಾಗುತ್ತಿತ್ತು.

ಆದರೆ, ರಕ್ಷಣೆಯಾದ ಸಹ ಕಾರ್ಮಿಕರನ್ನು ವಿಚಾರಣೆ ನಡೆಸಲಾಗಿದ್ದು, ಗಜೇಂದ್ರ ಹೆಸರಿನ ಕಾರ್ಮಿಕ ಕಟ್ಟಡದಲ್ಲಿ ಕೆಲಸ ಮಾಡುತ್ತಿರಲಿಲ್ಲ ಎಂಬುದು ಗೊತ್ತಾಗಿದೆ. ಸದ್ಯಕ್ಕೆ ಮೇಸ್ತ್ರಿ ಏಳುಮಲೈಗಾಗಿ ಶೋಧ ನಡೆಸಲಾಗುತ್ತಿದೆ. ಕಟ್ಟಡ ಕುಸಿಯುವ ಸಂದರ್ಭದಲ್ಲಿ ಉಂಟಾದ ಜೋರು ಶಬ್ದದಿಂದ ಎಚ್ಚೆತ್ತು ವ್ಯಕ್ತಿಯೊಬ್ಬ ಓಡಿ ಹೋಗುತ್ತಿರುವ ದೃಶ್ಯ ಪಕ್ಕದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸೆರೆಯಾದ ದೃಶ್ಯದಲ್ಲಿ ವ್ಯಕ್ತಿಯ ಚಹರೆ ಪತ್ತೆ ಆಗುತ್ತಿಲ್ಲ. ಕಟ್ಟಡ ಕುಸಿಯುವುದಕ್ಕೂ ಕೆಲವೇ ನಿಮಿಷಗಳ ಹಿಂದೆ ಏಳುಮಲೈ ಮೊಬೈಲ್‌ ಅನ್ನು ಕಟ್ಟಡದಲ್ಲಿಯೇ ಬಿಟ್ಟು ಹೊರಗೆ ತೆರಳಿರುವ ಸಾಧ್ಯತೆಯೂ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ಧಾರೆ. ಅವಶೇಷಗಳನ್ನು ಸಂಪೂರ್ಣ ತೆರವುಗೊಳಿಸದ ಬಳಿಕವಷ್ಟೇ ಏಳುಮಲೈ ತಪ್ಪಿಸಿಕೊಂಡಿದ್ಧಾರೆಯೇ ಅಥವಾ ಅವಶೇಷಗಳ ಅಡಿ ಸಿಲುಕಿಕೊಂಡಿದ್ಧಾರೆಯೇ ಎಂಬುದು ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next