Advertisement

ಬೆಂ.ಗ್ರಾಮಾಂತರ ಕೋವಿಡ್ ಪರೀಕ್ಷೆ ಹೆಚ್ಚಳ

01:34 PM Oct 21, 2020 | Suhan S |

ದೇವನಹಳ್ಳಿ: ನಗರದ ವಿವಿಧ ವಾರ್ಡ್‌ಗಳಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಐಸೊಲೇಷನ್‌ನಲ್ಲಿ ಇರುವವರ ಜಾಗೃತಿ ಬಗ್ಗೆ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.

Advertisement

ಈ ವೇಳೆ ಮಾತನಾಡಿದ ಅವರು, ಕೋವಿಡ್ ಸೋಂಕು ನಿಯಂತ್ರಿಸಲು ಹಲವಾರು ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಅನೇಕ ಕ್ರಮಗಳನ್ನು ಕೈಗೊಂಡು ಕೊರೊನಾ ನಿಯಂತ್ರಣಕ್ಕೆ ಶ್ರಮಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸುತ್ತಿದ್ದೇವೆ ಎಂದರು.

ಶೇ.100ರಷ್ಟು ಗುರಿ: ಜಿಲ್ಲೆಯಲ್ಲಿ ಶೇ.98.30ರಷ್ಟು ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಪ್ರತಿದಿನ1,800 ಆರ್‌ಟಿಪಿಸಿಆರ್‌ ಟೆಸ್ಟ್‌ ಮತ್ತು 700 ರ್ಯಾಪಿಡ್‌ ಟೆಸ್ಟ್‌ ಮಾಡಲಾಗುತ್ತಿದ್ದು, ಶೇ.100ರಷ್ಟು ಗುರಿ ಹೊಂದಿದ್ದೇವೆ. ಇದರಿಂದ ಸೋಂಕಿತ ವ್ಯಕ್ತಿಗೆ ಪಾಸಿಟಿವ್‌ ಕಂಡು ಬಂದರೆ,ಕೂಡಲೇ ಆಸ ³ತ್ರೆಗೆ ಸೇರಿ ಗುಣಮುಖರಾಗಲು ಸಹಕಾರಿಯಾಗುತ್ತದೆ ಎಂದರು.

ಆರೋಗ್ಯ ತಪಾಸಣೆ: ಕೆಲವು ಜನರು ಹೋಂಐಸೊಲೇಷನ್‌ನಲ್ಲಿದ್ದು, ಅವರನ್ನು ಭೇಟಿ ಮಾಡಿ, ಅವರ ಆರೋಗ್ಯ ತಪಾಸಣೆಗೊಳಿಸುವ ಕಾರ್ಯಚರಣೆ ಮಾಡಿ, ಅವರ ಜೊತೆ ಸಂಪರ್ಕದಲ್ಲಿರು ವವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿ ಅವರನ್ನು ಸಹ ಕ್ವಾರೆಂಟೈನ್‌ನಲ್ಲಿಯೇ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಅವರ ಮೇಲೆ ನಿಗಾ ವಹಿಸಲು ತಂಡ ರಚನೆ ಮಾಡಲಾಗಿದೆ. ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಲ್ಲಿ ಟಿಎಚ್‌ಒ ಮೂಲಕ ಅವರಿಗೆ ಹೆಚ್ಚಿನ ಸಹಕಾರ ನೀಡಲಾಗುತ್ತದೆ ಎಂದು ಹೇಳಿದರು.

ಲ್ಯಾಬ್‌ಗಳು ಸಶಕ್ತ: ಜಿಲ್ಲೆಯಲ್ಲಿ ಇಂತಹ ಕಾರ್ಯಚರಣೆ ಮಾಡುತ್ತಿರುವುದರಿಂದ ಸಾವಿನ ಪ್ರಕರಣಗಳು ಕಡಿಮೆಯಾಗುತ್ತಿವೆ. ಪರೀಕ್ಷೆಗಳನ್ನು ಹೆಚ್ಚಿಸಿರುವುದರಿಂದ ಕಳೆದ 5 ದಿನಗಳಿಂದ 0.6ರಷ್ಟು ಸಾವಿನ ಪ್ರಕರಣ ವರದಿಯಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಲು ಲ್ಯಾಬ್‌ಗಳು ಸಶಕ್ತವಾಗಿವೆ. ಬೇಗ ವರದಿ ಬರುವಂತೆ ನೋಡಿಕೊಳ್ಳ ಬೇಕಿದ್ದು, ಸಮಸ್ಯೆ ಪರಿಹಾರದ ಕಾರ್ಯಗಳನ್ನು ಮಾಡಲಾಗುತ್ತಿದೆ. ಐಸೊಲೇಷನ್‌ನಲ್ಲಿ ಇರುವವರ ಮಾಹಿತಿಯನ್ನು ಪಡೆಯಲು ಆ್ಯಪ್‌ನಲ್ಲಿ ಅಪ್‌ ಲೋಡ್‌ ಮಾಡುವಂತೆ ಸೂಚಿಸಲಾಗಿದೆ ಎಂದರು.ಈ ವೇಳೆಯಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್‌ ಕೆ.ನಾಯಕ್‌, ಡಿಎಚ್‌ಒ ಮಂಜುಳಾದೇವಿ, ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ, ಟಿಎಚ್‌ಒ ಸಂಜಯ್‌, ಪುರಸಭೆ ಮುಖ್ಯಾಧಿಕಾರಿ ಎ.ಎಚ್‌. ನಾಗರಾಜ್‌, ಪುರಸಭೆ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆರು ಆಶಾ ಕಾರ್ಯ ಕರ್ತೆಯರು ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next