Advertisement

Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ

10:58 AM May 20, 2024 | Team Udayavani |

ಬೆಂಗಳೂರು: ಬರ್ತ್ ಡೇ ಪಾರ್ಟಿ ಹೆಸರಿನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದ ಫಾರ್ಮ್ ಹೌಸ್ ಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಹಲವರನ್ನು ವಶಕ್ಕೆ ಪಡೆಯಲಾಗಿದೆ.

Advertisement

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ ಆರ್ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಲಾಗಿದ್ದು, ಪಾರ್ಟಿಯಲ್ಲಿ ಮಾದಕವಸ್ತು, ಎಂಡಿಎಂಎ ಮತ್ತು ಕೊಕೇನ್ ಪತ್ತೆಯಾಗಿದೆ. ಪಾರ್ಟಿಯಲ್ಲಿ ಆಂಧ್ರ ಹಾಗೂ ಬೆಂಗಳೂರು ಮೂಲದ 100 ಹೆಚ್ಚು ಜನರಿದ್ದರು. ಪಾರ್ಟಿಯಲ್ಲಿ 25ಕ್ಕೂ ಹೆಚ್ಚು ಯುವತಿಯರು ಭಾಗವಹಿಸಿದ್ದರು.

ಆಂಧ್ರದಿಂದ ಯುವತಿಯರು

ತಡರಾತ್ರಿ ಎರಡು ಘಂಟೆ ದಾಟಿದರೂ ನಡೆಯುತ್ತಿದ್ದ ಪಾರ್ಟಿಗೆ ಸಿಸಿಬಿಯ ಆ್ಯಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದರು. ಪಾರ್ಟಿಗೆ ಆಯೋಜಕರು ಆಂಧ್ರದಿಂದ ವಿಮಾನದಲ್ಲಿ ಯುವಕ – ಯುವತಿಯರನ್ನು ಕರೆಸಿಕೊಂಡಿದ್ದರು.

ಕಾನ್ ಕಾರ್ಡ್ ಮಾಲಿಕ ಗೋಪಾಲ ರೆಡ್ಡಿ ಎಂಬುವವರ ಮಾಲಿಕತ್ವದ ಫಾರ್ಮ್ ಹೌಸ್ ನಲ್ಲಿ ಹೈದರಾಬಾದ್ ಮೂಲದ ವಾಸು ಎಂಬಾತ ಪಾರ್ಟಿ ಆಯೋಜನೆ ಮಾಡಿದ್ದ.

Advertisement

ಎಂಎಲ್ಎ ಪಾಸ್ ಪತ್ತೆ

ದಾಳಿ ವೇಳೆ ಒಂದು ಬೆಂಜ್ ಕಾರಿನಲ್ಲಿ ಆಂಧ್ರ ಪ್ರದೇಶದ ಎಂಎಲ್ಎ ಪಾಸ್ ಪತ್ತೆಯಾಗಿದೆ. ಶಾಸಕ ಕಾಕನಿ ಗೋವರ್ಧನ ರೆಡ್ಡಿ ಎಂಬುವವರ ಹೆಸರಿನ ಪಾಸ್ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಹದಿನೈದಕ್ಕೂ ಹೆಚ್ಚು ಐಶಾರಾಮಿ ಕಾರುಗಳು ಪತ್ತೆಯಾಗಿದ್ದು, ಮರ್ಸಿಡಿಸ್‌ ಬೆಂಜ್, ಜಾಗ್ವಾರ್, ಔಡಿ ಕಾರುಗಳಿದ್ದವು.

ಸನ್ ಸೆಟ್ ಟು ಸನ್ ರೈಸ್ ಪಾರ್ಟಿ ಎಂಬ ಥೀಮ್ ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿದೆ. ಭಾನುವಾರ ಸಂಜೆ ಐದು ಗಂಟೆಯಿಂದ ಬೆಳಗ್ಗೆ ಆರು ಗಂಟೆ ತನಕ ಆಯೋಜಿಸಲಾಗಿತ್ತು.

ಭಾರಿ ಖರ್ಚು

ನಗರದ ಒಳಭಾಗದಲ್ಲಿ ಸಿಸಿಬಿ ದಾಳಿ ಮಾಡುವ ಹಿನ್ನೆಲೆ ಹೊರ ವಲಯದಲ್ಲಿ ಪಾರ್ಟಿ ಆಯೋಜಿಸಲಾಗಿತ್ತು ಎನ್ನಲಾಗಿದೆ. ಒಂದು ದಿನದ ಪಾರ್ಟಿಗೆ ಮೂವತ್ತರಿಂದ ಐವತ್ತು ಲಕ್ಷ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ರೇವ್ ಪಾರ್ಟಿಯಲ್ಲಿ ಡಿಜೆಗಳು, ಮಾಡೆಲ್ ಗಳು ಹಾಗು ಟೆಕ್ಕಿಗಳು ಭಾಗವಹಿಸಿದ್ದರು. ಡಿಜೆಗಳಾದ RABZ, KAYVEE ಮತ್ತು BLOODY MASCARA ಭಾಗಿಯಾಗಿದ್ದರು ಎನ್ನಲಾಗಿದೆ. ಪಾರ್ಟಿಯಲ್ಲಿ ಭಾಗಿಯಾದವರ ಗುರುತು ಪತ್ತೆಯಲ್ಲಿ ಪೊಲೀಸರು ತೊಡಗಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾರ್ಕೊಟಿಕ್ಸ್ ಸ್ನಿಫರ್ ಡಾಗ್ ಗಳಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next