Advertisement

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಜಿ.ಆರ್‌. ಫಾರ್ಮ್ ಹೌಸ್‌ನಲ್ಲಿ ನಡೆದಿದ್ದ ರೇವ್‌ ಪಾರ್ಟಿ ಪ್ರಕರಣದಲ್ಲಿ ಮಾದಕ ವಸ್ತು ಸೇವನೆ ಹಾಗೂ ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ವಿಡಿಯೋ ಮಾಡಿ ಹರಿ ಬಿಟ್ಟ ಆರೋಪದಲ್ಲಿ ಬಂಧನಕ್ಕೊಳ ಗಾಗಿರುವ ತೆಲುಗು ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು 24 ಗಂಟೆಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಪ್ರಕರಣ ಸಂಬಂಧ ಮೇ 3ರಂದು ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾದ ನಟಿ ಹೇಮಾ ಗೊಂದಲದ ಹೇಳಿಕೆ ಹಾಗೂ ದಾಳಿ ಸಂದರ್ಭದಲ್ಲಿ ಸುಳ್ಳು ಹೆಸರು ಹಾಗೂ ಮೊಬೈಲ್‌ ನೀಡಿದ ಆರೋಪದಲ್ಲಿ ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಬುಧವಾರ ಆನೇಕಲ್‌ನ ಕೋರ್ಟ್‌ಗೆ ಹಾಜರು ಪಡಿಸಿ ಆರೋಪಿತೆಯನ್ನು 3 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡುವಂತೆ ತನಿಖಾಧಿಕಾರಿಗಳು ಮನವಿ ಮಾಡಿದರು. ಅದನ್ನು ಆಲಿಸಿದ ಕೋರ್ಟ್‌ 24 ಗಂಟೆಗಳ ಕಾಲ ವಿಚಾರಣೆಗೆ ಅವಕಾಶ ನೀಡಿದ್ದು, ಗುರುವಾರ ಸಂಜೆ 5 ಗಂಟೆಗೆ ಮತ್ತೆ ಹೇಮಾರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ.

ಮತ್ತೂಮ್ಮೆ ಮಾಧ್ಯಮಗಳ ಮೇಲೆ ಗರಂ: ಕೋರ್ಟ್‌ಗೆ ಹಾಜರಾಗುತ್ತಿದ್ದಂತೆ ಮತ್ತೆ ಮಾಧ್ಯಮಗಳ ಮೇಲೆ ಹೇಮಾ ಗರಂ ಆದರು. “ನಾನು ಕೊಲೆ ಮಾಡಿದ್ದೀನಾ? ಅರ್ಧ ರಾತ್ರಿಯಲ್ಲಿ ಕರೆದುಕೊಂಡು ಹೋಗಿ ಕಾಡಿನಲ್ಲಿ ಸಹಿ ಹಾಕಿಸಿಕೊಂಡರು. ನಾನು ಏನು ಮಾಡಿದ್ದೀನಿ, ಇಲ್ಲಿಯವರೆಗೆ ನೀವು ಮಾಧ್ಯಮದವರು ಮಾತನಾಡಿಲ್ಲ. ಈಗಲಾದರೂ ಮಾತನಾಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next