Advertisement

ಏ.14ರಂದು ಬೆಂಗಳೂರಲ್ಲಿ ಹೋರಾಟ

05:32 PM Mar 26, 2022 | Team Udayavani |

ಲಿಂಗಸುಗೂರು: ಬೇಡ ಜಂಗಮ ಸಮಾಜದ ಆಚರಣೆ ಹಾಗೂ ನೀತಿಗಳು ವಿರುದ್ಧ ವಿಧಾನಸಭೆ ನಡೆದ ಕಲಾಪದಲ್ಲಿ ಅವಹೇಳನವಾಗಿ ಹೇಳಿಕೆ ನೀಡುತ್ತಿರುವುದು ಖಂಡನೀಯ. ಇದರ ವಿರುದ್ಧ ಏ.14ರಂದು ಬೆಂಗಳೂರಿನ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಅಖೀಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ವಿಭಾಗೀಯ ಕಾರ್ಯದರ್ಶಿ ಕಿಡಿಗಣಯ್ಯಸ್ವಾಮಿ ಉಮಳಿಹೊಸೂರು ಹೇಳಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಡ ಜಂಗಮರು ಯಾರು, ಅವರ ಆಚಾರ ವಿಚಾರ, ಆಹಾರ ಪದ್ಧತಿ, ವಿಧಿ-ವಿಧಾನ ಯಾವವು? ಕುರಿತು ಕುಲಶಾಸ್ತ್ರ ಅಧ್ಯಯನ ನಡೆಸಲಾಗಿದೆ. ಆದರೆ, ವಿಧಾನಸಭೆ ಕಲಾಪದಲ್ಲಿ ಶಾಸಕರಾದ ಪಿ.ರಾಜೀವ್‌, ಪ್ರಿಯಾಂಕ ಖರ್ಗೆ ಮತ್ತು ಇತರೆ ಶಾಸಕರು ಸದನಕ್ಕೆ ತಪ್ಪು ಮಾಹಿತಿ ನೀಡಿ ಅಸಂವಿಧಾನಿಕವಾಗಿ ನಡೆದುಕೊಂಡಿರುವುದು ಖಂಡನೀಯ ಎಂದರು.

ಕಾನೂನು ಬದ್ಧವಾಗಿ ನ್ಯಾಯಾಲಯದ ಆದೇಶದಂತೆ ನ್ಯಾಯಸಮ್ಮತ ದಾಖಲೆಗಳ ಪ್ರಕಾರ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಇವುಗಳನ್ನು ಕಲಾಪದಲ್ಲಿ ತೋರಿಸುವ ಮೂಲಕ ಸಂವಿಧಾನ ಬಾಹಿರ ಮತ್ತು ಕಾನೂನು ಉಲ್ಲಂಘನೆಯಾಗಿದೆ. ಶಾಸಕರು ಸ್ವಜನ ಪಕ್ಷಪಾತ, ದುರುದ್ದೇಶ ಹಾಗೂ ಹತಾಶೆ ಮನೋಭಾವನೆಯಿಂದ ನಡೆದುಕೊಂಡು ಸದನದ ಗೌರವ ಹಾಳು ಮಾಡಿದ್ದಾರೆ. ಸರ್ಕಾರ ಕೂಡಲೇ ಶಾಸಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ, ಒಕ್ಕೂಟದಿಂದ ಏ.14ರಂದು ವಿಧಾನಸೌಧದ ಮುಂದೆ 500 ಮಠಾ ಧೀಶರು, ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದರು.

ಮುಖಂಡರಾದ ಮಹಾದೇವಯ್ಯ ಗೌಡೂರು, ರಮೇಶ ಶಾಸ್ತ್ರಿ, ರುದ್ರಯ್ಯಸ್ವಾಮಿ, ವೀರಭದ್ರಯ್ಯ ಹಿರೇಮಠ ಯಲಗಲದಿನ್ನಿ, ಅಮರೇಶ ಹಿರೇಮಠ, ಮಹೇಶ ನಂದಿಕೋಲಮಠ, ಶರಣಯ್ಯ ದಾಸೋಹಮಠ, ವೀರಭದ್ರಯ್ಯ ಗುಂತಗೋಳ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next