Advertisement

ಬೆತ್ತಲೆ! ಹೆಣ್ಮಕ್ಕಳು ತಡರಾತ್ರಿ ಅರೆನಗ್ನರಾಗಿದ್ರೆ ಇನ್ನೇನಾಗುತ್ತೆ

02:56 PM Jan 03, 2017 | Sharanya Alva |

ಮುಂಬೈ: ಪಾಶ್ಚಾತ್ಯ ಸಂಸ್ಕೃತಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಹಾಳುಗೆಡುವುತ್ತಿದೆ. ವಿದೇಶಿ ಸಂಸ್ಕೃತಿಗೆ ಮಾರು ಹೋಗಿರುವ ಹುಡುಗಿಯರು ತಡರಾತ್ರಿ ಬಿಗಿಯಾದ ತುಂಡುಡುಗೆ, ಅರೆನಗ್ನ ಸ್ಥಿತಿಯಲ್ಲಿ ಒಂಟಿಯಾಗಿ ಹೋದರೆ ಇನ್ನೇನಾಗುತ್ತೆ ಎಂದು ಮಹಾರಾಷ್ಟ್ರ ರಾಜ್ಯ ಸಮಾಜವಾದಿ ಪಕ್ಷದ ಅಧ್ಯಕ್ಷ ಅಬು ಅಜ್ಮಿ ನೀಡಿರುವ ಹೇಳಿಕೆ ಇದೀಗ ತೀವ್ರ ವಿವಾದಕ್ಕೊಳಗಾಗಿದೆ.

Advertisement

ಹೊಸ ವರ್ಷದ ಸಂಭ್ರಮಾಚರಣೆಯಂದು ಬೆಂಗಳೂರಿನ ಬ್ರಿಗೇಡ್ ರಸ್ತೆಗೆ ಬಂದಿದ್ದ ಕೆಲ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ವರದಿಗೆ ಸಂಬಂಧಿಸಿದಂತೆ ಅಜ್ಮಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆಯಂದು ಬೆಂಗಳೂರಿನ ಬ್ರಿಗೇಡ್ ರಸ್ತೆಗೆ ಬಂದಿದ್ದ ಕೆಲ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ವರದಿಗೆ ಸಂಬಂಧಿಸಿದಂತೆ ಅಜ್ಮಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ತಡರಾತ್ರಿ ನಡೆದಿದೆ ಎಂಬ ಲೈಂಗಿಕ ದೌರ್ಜನ್ಯ ಘಟನೆ ಕುರಿತು ಮಾತನಾಡಿರುವ ಅಜ್ಮಿ, ಆ ಹುಡುಗಿಯರು ಭಾರತೀಯ ಸಂಸ್ಕೃತಿಯಿಂದ ದೂರವಾಗಿರುವುದೇ ಕಾರಣ ಎಂದಿದ್ದಾರೆ.

Advertisement

ಇದು ನಿಜಕ್ಕೂ ದುರದೃಷ್ಟಕರ,ಈ ಬಗ್ಗೆ ದೂರನ್ನು ದಾಖಲಿಸಬೇಕು. ಆದರೆ ನಾವೇನಾದರು ಯುವಕ, ಯುವತಿಯರು ಒಟ್ಟಾಗಿ ತಿರುಗಾಡುವುದರ ವಿರುದ್ಧವಾಗಿ ಮಾತನಾಡಿದರೆ, ಅದೊಂದು ಚಟ ಎಂದು ಹೀಗಳೆಯುತ್ತಾರೆ. ಯುವಕ, ಯುವತಿಯರು ಹೇಗೆ ಜೊತೆಗಿರಬೇಕು, ಮೀಟ್ ಮಾಡಬೇಕು ಎಂಬುದಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಅದಕ್ಕೊಂದು ಚೌಕಟ್ಟಿದೆ ಎಂದು ಹೇಳಿದರು.

ಆದರೆ ಇತ್ತೀಚೆಗಿನ ಆಧುನಿಕ ಕಾಲದಲ್ಲಿ, ಬಹುತೇಕ ಯುವತಿಯರು ನಗ್ನರಾಗಿಯೇ ಇರುತ್ತಾರೆ. ಈ ರೀತಿಯ ಫ್ಯಾಶನ್ ಭಾರತೀಯ ಸಂಸ್ಕೃತಿಯಲ್ಲಿ ಹೆಚ್ಚಾಗುತ್ತಿದೆ. ಇದು ನಮ್ಮ ನಿಜವಾದ ಸಂಸ್ಕೃತಿಯನ್ನು ಹಾಳುಗೆಡವಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next