Advertisement
ತಮಿಳುನಾಡು ಮೂಲದ ನಾರಾಯಣಸ್ವಾಮಿ (34) ಹಾಗೂ ನವೀನಾ (39) ಬಂಧಿತರು.
Related Articles
Advertisement
ಎಲ್ಲೆಲ್ಲೋ ಕಳ್ಳತನ ಮಾಡುವ ಬದಲು ತಾನು ಕೆಲಸ ಮಾಡುವ ಮನೆಯಲ್ಲೇ ಚಿನ್ನಾಭರಣ ಕದ್ದರೆ ತನ್ನ ಮೇಲೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ನಾರಾಯಣಸ್ವಾಮಿ ಯೋಚಿಸಿ, ತಾನು ಕೆಲಸಕ್ಕಿದ್ದ ಮನೆಗೆ ಕನ್ನ ಹಾಕಲು ಸಂಚು ರೂಪಿಸಿದ್ದ. ಅದರಂತೆ ಇತ್ತೀಚೆಗೆ ಮನೆ ಮಾಲೀಕರ ಕೊಠಡಿಯ ಬೀಗ ಮುಗಿದು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಬೀಗ ಹಾಕಿಕೊಂಡು ಹೋಗಿದ್ದ. ನಂತರ ಕದ್ದ ಚಿನ್ನದೊಂದಿಗೆ ಚೆನ್ನೈಗೆ ತೆರಳಿ ಪ್ರೇಯಸಿ ನವೀನಾಗೆ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಸಿಕ್ಕಿ ಬಿದ್ದಿದ್ದು ಹೇಗೆ?
ಇತ್ತ ದುಬೈಗೆ ಹೋಗಿದ್ದ ಟೆಕಿ ಕುಟುಂಬ ವಾಪಸ್ ಬಂದಾಗ ಕೊಠಡಿಯಲ್ಲಿದ್ದ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆ ಬಂದಿತ್ತು. ಮನೆ ಸ್ವತ್ಛ ಮಾಡಲು ಬರುತ್ತಿದ್ದ ನಾರಾಯಣ ಸ್ವಾಮಿಯೇ ಕಳುವು ಮಾಡಿರುವ ಅನುಮಾನ ಮೂಡಿತ್ತು. ಆಡುಗೋಡಿ ಪೊಲೀಸ್ ಠಾಣೆಗೆ ಚಿನ್ನ ಕಳ್ಳತನವಾ ಗಿರುವ ಕುರಿತು ಮನೆ ಮಾಲೀಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀ ಸರು ಅನುಮಾನದ ಮೇರೆಗೆ ನಾರಾಯಣಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ನಡೆದ ಸಂಗತಿ ವಿವರಿಸಿದ್ದ. ನಂತರ ಚೆನ್ನೈನ ರಾಜೇಶ್ವರಿನಗರದಲ್ಲಿರುವ ಆತನ ಪ್ರೇಯಸಿ ಯನ್ನು ವಶಕ್ಕೆ ಪಡೆದು ಚಿನ್ನಾಭರಣದ ಬಗ್ಗೆ ವಿಚಾ ರಿಸಿದಾಗ ಆಕೆ ಗಿರವಿ ಇಟ್ಟಿರುವುದಾಗಿ ತಿಳಿಸಿದ್ದಳು. ಆಕೆ ಕೆಲಸ ಮಾಡುವ ಪಾರ್ಲರ್ ಮಾಲೀಕರ ಬಳಿ ಗಿರಿವಿ ಇಟ್ಟಿದ್ದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.