Advertisement

ಶಿರಾಡಿ ಘಾಟಿ ಸಂಚಾರ ನಿಷೇಧ: ಪೊಲೀಸರ, ಚಾಲಕರ ನಡುವೆ ಮಾತಿನ ಚಕಮಕಿ

12:42 AM Jul 17, 2022 | Team Udayavani |

ಉಪ್ಪಿನಂಗಡಿ: ಸಕಲೇಶಪುರ ತಾಲೂಕಿನ ದೊಣಿಗಲ್‌ ಬಳಿ ಭೂಕುಸಿತದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಡಳಿತ ಶುಕ್ರವಾರ ಶಿರಾಡಿ ಘಾಟ್‌ ರಸ್ತೆಯಲ್ಲಿ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರಿಂದ ಮಂಗಳೂ ರಿನಿಂದ ಬೆಂಗಳೂರಿನತ್ತ ಸಾಗುತ್ತಿದ್ದ ಸರಕು ವಾಹನಗಳು ಗುಂಡ್ಯದಲ್ಲಿ ಹೆದ್ದಾರಿಯ ಬದಿ ಸಾಲುಗಟ್ಟಿ ನಿಂತಿತ್ತು.

Advertisement

ಶನಿವಾರ ಮುಂಜಾನೆ ಯಿಂದಲೇ ಕರ್ತವ್ಯ ನಿರತ ಪೊಲೀಸರು ಗುಂಡ್ಯದಲ್ಲಿ ವಾಹನಗಳ ಸಂಚಾರವನ್ನು ಕಟ್ಟುನಿಟ್ಟಾಗಿ ತಡೆ ಹಿಡಿದಿದ್ದರು. ಆದರೆ ಹಾಸನ ಕಡೆಯಿಂದ ಕೆಲವೊಂದು ವಾಹನಗಳು ಗುಂಡ್ಯದತ್ತ ಆಗಮಿಸಿರುವುದನ್ನು ಕಂಡ ವಾಹನ ಚಾಲಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರಲ್ಲದೇ ನಮಗೂ ಅವಕಾಶ ಕಲ್ಪಿಸಬೇಕೆಂದು ಅಗ್ರಹಿಸಿದರು.

ಈ ವೇಳೆ ಪೊಲೀಸರು ನಮಗೆ ವಾಹನವನ್ನು ಘಾಟಿ ರಸ್ತೆಯಲ್ಲಿ ಮುಂದುವರಿಯಲು ಬಿಡಬಾರದೆಂದು ಆದೇಶವಿದೆಯೇ ವಿನಃ ಅಲ್ಲಿಂದ ಬಂದ ವಾಹನಗಳನ್ನು ತಡೆಯಲು ಆದೇಶವಿಲ್ಲ. ಈ ಕಾರಣದಿಂದ ಹಾಸನ ದಿಕ್ಕಿನಿಂದ ಬಂದ ವಾಹನಗಳನ್ನು ತಡೆ ಹಿಡಿಯಲು ಅವಕಾಶವಿಲ್ಲ ಎಂದು ಉತ್ತರಿಸಿ ಉದ್ರಿಕ್ತರನ್ನು ಚದುರಿಸಿದರು. ಆದರೂ ಮಾರ್ನಹಳ್ಳಿ ವರೆಗಿನ ನಿವಾಸಿಗರ ಸಂಚಾರಕ್ಕೆ ಪೊಲೀಸ್‌ ಇಲಾಖೆ ಅವಕಾಶ ಕಲ್ಪಿಸಿದೆ.

ಬಿಸಿಲೆ ಘಾಟಿ ರಸ್ತೆ: ಸಂಚಾರಕ್ಕೆ ತೊಂದರೆ
ಸುಬ್ರಹ್ಮಣ್ಯ: ಇಲ್ಲಿನ ಕುಲ್ಕುಟದ -ಬಿಸಿಲೆ ಘಾಟಿ ರಸ್ತೆ ಬದಿಯ ಚರಂಡಿಗೆ ಕಲ್ಲಿದ್ದಲು ಹೇರಿಕೊಂಡು ಹೋಗುತ್ತಿದ್ದ ಲಾರಿ ಇಳಿದು ಬಾಕಿಯಾಗಿ ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಿರುವ ಘಟನೆ ಶನಿವಾರ ಸಂಭವಿಸಿದೆ.
ಶಿರಾಡಿ ಘಾಟಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಆಗಿದ್ದರಿಂದ ಕರಾವಳಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ವಾಹನಗಳು ಬಿಸಿಲೆ ಘಾಟಿ ರಸ್ತೆ ಮೂಲಕ ಬರುತ್ತಿವೆ. ಇದರಿಂದ ಈ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಬಸ್‌ ಸಂಚರಿಸಲು ಬದಿಗೆ ಹೋದ ವೇಳೆ ಲಾರಿ ಚರಂಡಿಯಲ್ಲಿ ಸಿಲುಕಿದೆ.

Advertisement

Udayavani is now on Telegram. Click here to join our channel and stay updated with the latest news.

Next