Advertisement

ಬೆಂಗಳೂರು: ಕರಾವಳಿ ಕಂಬಳದಲ್ಲಿ ಕೋಣಗಳ ಜಾಕಿಯಾಗುವುದು ಅಷ್ಟು ಸುಲಭವಲ್ಲ. ಯಾರು ಬೇಕಾದರೂ ಓಡಿಸಬಹುದು ಎನ್ನುವ ಅಸಡ್ಡೆ ಸಲ್ಲದ್ದು. ಕೋಣವನ್ನು ಓಡಿಸುವ ಜಾಕಿಯ ಆಯ್ಕೆ, ಜೀವನ ಶೈಲಿ ಹಾಗೂ ತರಬೇತಿ ವಿಭಿನ್ನವಾಗಿರುತ್ತದೆ.

Advertisement

ಅದೇನಂತಿರಾ, ಕಂಬಳಕ್ಕೆ ಬಳಸುವ ಕೋಣಗಳನ್ನು ತಮ್ಮ ಮಕ್ಕಳಂತೆ ಸಾಕಿ-ಸಲಹುವ ಜತೆಗೆ ಅದರದ್ದೇ ಆಹಾರ ಪದ್ಧತಿ ಪಾಲಿಸುವುದು ಒಂದೆಡೆಯಾದರೆ, ಅವುಗಳನ್ನು ಓಡಿಸುವ ಜಾಕಿಗಳಿಗೂ ಉಂಟು ಕಟ್ಟುನಿಟ್ಟಿನ ಜೀವನ ಶೈಲಿ! ಕಂಬಳದ ಕೋಣಗಳನ್ನು 15 ವರ್ಷ ಯುವಕರಿಂದ 50 ಮೇಲ್ಪಟ್ಟವರೂ ಓಡಿಸು ವುದನ್ನು ಕಾಣಬಹುದು.

ಇವರಿಗೆ ಮುಖ್ಯವಾಗಿ ಬೇಕಾಗಿ ರುವುದು ಸ್ಟಾಮಿನಾ(ಶಕ್ತಿ). ಕೋಣಗಳನ್ನು ಓಡಿಸುವುದನ್ನು ಕಲಿಯುವುದಕ್ಕೆ ವಿವಿಧ ತರಬೇತಿ ಕೇಂದ್ರಗಳಿದ್ದು, ಅಲ್ಲಿ ಕೋಣಗಳೊಟ್ಟಿನ ಒಡನಾಟ, ಕೋಣಗಳನ್ನು ನಿಯಂತ್ರಿ ಸುವ ವಿಧಾನಗಳು, ಅವರ ಆಹಾರ ಪದ್ಧತಿ ಮತ್ತು ಫಿಟ್‌ ನೆಟ್‌ ನಿರ್ವಹಣೆ ಬಗ್ಗೆ ತಿಳಿಸಿಕೊಡಲಾಗುತ್ತದೆ.

ಕೋಣ ಓಡಿಸುವ ಜಾಕಿಗಳ ಜೀವನಶೈಲಿ: ಕಂಬಳ ಟೂರ್ನಿಮೆಂಟ್‌ ನಡೆಯುವ ಮೂರ್‍ನಾಲ್ಕು ತಿಂಗಳ ಮುಂಚೆಯಿಂದಲೇ ಅಭ್ಯಾಸದಲ್ಲಿ ತೊಡಗುತ್ತಾರೆ. ನಿತ್ಯಾ ಮುಂಜಾನೆ ನಾಲ್ಕು-ಐದು ಗಂಟೆಗೆ ಎದ್ದು ರನ್ನಿಂಗ್‌, ವ್ಯಾಯಾಮ ಮಾಡುತ್ತಾರೆ. ಇನ್ನೂ ಕೆಲವರು ಜಿಮ್‌ಗೆ ತೆರಳಿ ವರ್ಕೌಟ್  ಮಾಡುತ್ತಾರೆ. ತದನಂತರ, ಯಾವುದೇ ಚೈನೀಸ್‌ ಹಾಗೂ ಎಣ್ಣೆ ಪದಾರ್ಥಗಳನ್ನು ತಿನ್ನದೇ, ದಿನದ ಮೂರು ಹೊತ್ತು ಕುಚಲಕ್ಕಿ ಗಂಜಿ, ಉಪ್ಪಿನಕಾಯಿ, ತರಕಾರಿ ಪಲ್ಯ ಹಾಗೂ ಮೊಸರು ಊಟ ಮತ್ತು ಎಳನೀರು-ಕೊಬ್ಬರಿಯನ್ನು ಸೇವಿಸುತ್ತಾರೆ. ದಿನ ರಾತ್ರಿ ಮಲಗುವ ಮುನ್ನ ಮೈಗೆಲ್ಲಾ ಎಣ್ಣೆಯನ್ನು ಹಚ್ಚಿಕೊಂಡು ಬಿಸಿನೀರಲ್ಲಿ ಸ್ನಾನ ಮಾಡಿದ ನಂತರ ಪುನಃ ಎಣ್ಣೆ ಹಚ್ಚಿಕೊಂಡು ಅದು ಒಣಗಿದ ನಂತರ ಮಲಗಬೇಕು. ಹೀಗೆ ನಿತ್ಯ ಕಟ್ಟುನಿಟ್ಟಾಗಿ ಜೀವನಶೈಲಿಯನ್ನು ಪಾಲಿಸ ಬೇಕು. ಬಿಡುವಿನ ದಿನಗಳಲ್ಲಿ ಗೆದ್ದೆಯಲ್ಲಿ ಶ್ರಮವಹಿಸಿ ಕೆಲಸ ಮಾಡುವುದೂ ಸಹ ಇವರ ದೇಹದ ಫಿಟ್‌ನೆಸ್‌ಗೆ ಕಾರಣವಾಗುತ್ತದೆ.

ವಾರ್ಷಿಕ ಪ್ಯಾಕೇಜ್‌: ಕಂಬಳದ ಕೋಣಗಳನ್ನು ಓಡಿಸುವವರು ಒಬ್ಬ ಮಾಲೀಕನ ಕೋಣಗಳನ್ನು ಮಾತ್ರ ಓಡಿಸಬೇಕು ಎಂಬ ನಿಯಮವು ಇದೆ. ಹಾಗಾಗಿ ಅನ್ಯ ಮಾಲೀಕರ ಕೋಣಗಳನ್ನು ಓಡಿಸುವ ಹಾಗಿಲ್ಲ. ಆದ್ದರಿಂದಾಗಿ ಕೋಣಗಳನ್ನು ಓಡಿಸುವವರಿಗೂ ಮಾಲೀಕರು ವರ್ಷಕ್ಕೆ ಲಕ್ಷಾಂತರ ರೂ.ಗಳನ್ನು ನೀಡುತ್ತಾರೆ. ಅಲ್ಲದೇ, ಪ್ರತಿ ಕಂಬಳದ ಟೂರ್ನಿಮೆಂಟ್‌ ಸಮಯದಲ್ಲಿ ಇಂತಿಷ್ಟು ಹಣ ಎಂದು ಕೊಡಲಾಗುತ್ತದೆ.

Advertisement

ರೋಷನ್‌ ಪೂಜಾರಿ ಮಾಲೀಕರ ಕೊಳಕೆ ತಂಡದಲ್ಲಿ ಕೆಲ ವರ್ಷಗಳಿಂದ ಕಂಬಳದ ಹಗ್ಗ ಹಿರಿಯ ವಿಭಾಗದಲ್ಲಿ ಕೋಣಗಳನ್ನು ಓಡಿಸುತ್ತಿದ್ದೇನೆ. ಕೋಣಗಳನ್ನು ಓಡಿಸುವುದಕ್ಕೆ ತಕ್ಕಂತಹ ಆಹಾರ ಪದ್ಧತಿ ಹಾಗೂ ಅಭ್ಯಾಸವನ್ನು ಆಸಕ್ತಿ ಮತ್ತು ಶ್ರದ್ಧೆಯಿಂದ ಮಾಡುತ್ತಿದ್ದೇನೆ. ಮನೋಜ್‌, ಕೋಣದ ಜಾಕಿ.

-ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next