ಬೆಂಗಳೂರು: ಡಾ| ಸಿ.ಎನ್.ಮಂಜುನಾಥ್ ನಿವೃತ್ತಿಯಿಂದ ತೆರವಾಗಿರುವ ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದು, ಹುದ್ದೆ ಗಿಟ್ಟಿಸಲು ಭಾರೀ ಪೈಪೋಟಿ ಶುರುವಾಗಿದೆ. ಆದರೆ ಈ ನಡುವೆಯೇ, ಇಷ್ಟೊಂದು ದೊಡ್ಡ ಸಂಸ್ಥೆಗೆ ನಿರ್ದೇಶಕರಾಗಲು ಸಂಸ್ಥೆಯಲ್ಲಿಯೇ ಹಲವು ಮಂದಿ ಹಿರಿಯರು, ಅನುಭವಿಗಳು, ಸೇವಾ ಹಿರಿತನವುಳ್ಳವರಿದ್ದರೂ ನಿವೃತ್ತರೊಬ್ಬರನ್ನು ಹಂಗಾಮಿಯಾಗಿ ನೇಮಿಸಿರುವುದು ಸಂಸ್ಥೆಯಲ್ಲಿ ಅನೇಕರ ಹುಬ್ಬೇರಿಸಿದೆ.
ಬೆಂಗಳೂರು, ಮೈಸೂರು, ಕಲಬುರಗಿ ಸೇರಿ 3 ಸಾವಿರ ಹಾಸಿಗೆ ಸಾಮರ್ಥ್ಯದ ಹೃದ್ರೋಗ ಚಿಕಿತ್ಸಾಲ ಯ ಆಗಲಿದೆ. ಹೃದ್ರೋಗಿಗಳ ಚಿಕಿತ್ಸೆಗೆಂದೇ ಪ್ರತ್ಯೇಕವಾಗಿ ಇಷ್ಟು ದೊಡ್ಡ ವ್ಯವಸ್ಥೆ ಹೊಂದಿರುವ ಬೆಂಗಳೂರು ಆಸ್ಪತ್ರೆ ಒಂದರÇÉೇ ಬಡವರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆಗಳು ಸಿಗುತ್ತಿವೆ. ಪ್ರಮುಖವಾಗಿ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ ಸೇರಿ 35 ಸಾವಿರ ವೈದ್ಯಕೀಯ ಸೇವೆಗಳು ಲಭ್ಯವಿವೆ. ಸಾವಿರಾರು ಸಿಬ್ಬಂದಿ ಹಾಗೂ ನಿತ್ಯ ಹೊರರೋಗಿ ವಿಭಾಗವೊಂದರಲ್ಲೇ 1500ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಇಂತಹ ಸಂಸ್ಥೆಗೆ ಪೂರ್ಣಾವಧಿಯ ನಿರ್ದೇಶಕರನ್ನು ನೇಮಿಸದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.
ಡಾ.ಮಂಜುನಾಥ್ ನಿವೃತ್ತಿಯಿಂದ ತೆರವಾಗಿರುವ ಹುದ್ದೆಗೆ ನಿವೃತ್ತ ಕುಲಪತಿ ಡಾ.ಕೆ.ಎಸ್. ರವೀಂದ್ರನಾಥ್ ಅವರನ್ನು ಪ್ರಭಾರಿಯಾಗಿ ನೇಮಿಸಲಾಗಿದೆ. ಮಂಜು ನಾಥ್ ಅವರನ್ನು ನಿವೃತ್ತಿ ನಂತರವೂ ಎರಡು ಬಾರಿ ನಿರ್ದೇಶಕ ಹುದ್ದೆಯ ಸೇವಾವಧಿಯನ್ನು ಸರ್ಕಾರ ವಿಸ್ತರಿಸಿತ್ತು. ಹುದ್ದೆ ಖಾಲಿಯಾಗುವ ನಿರೀಕ್ಷೆಯಲ್ಲಿ 20 ಮಂದಿ ನಿರ್ದೇಶಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು.
ಬಹುತೇಕರು ಹಿರಿಯರು ಹಾಗೂ ಅನುಭವಿಗಳೇ ಇದ್ದರು. ಈ ಪೈಕಿ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇ ಶನಾಲಯದಿಂದ 12 ಮಂದಿಯ ಆಯ್ಕೆಪಟ್ಟಿಯನ್ನು ಆಡಳಿತ ಮಂಡಳಿ ಮುಂದೆ ಮಂಡಿಸಲಾಗಿತ್ತು. ಜಯದೇವ ಆಸ್ಪತ್ರೆ ಆಡಳಿತ ಮಂಡಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಧ್ಯಕ್ಷರಾಗಿದ್ದು, ಪೂರ್ಣಪ್ರಮಾಣದ ನಿರ್ದೇಶಕರ ನೇಮಕಕ್ಕೆ ಕರೆದಿದ್ದ ಸಭೆಯನ್ನೂ ಕಡೇ ಗಳಿಗೆಯಲ್ಲಿ ಹಠಾತ್ ಮುಂದೂಡ ಲಾಗಿದೆ. ಇದರಿಂದಾಗಿ ನಿರ್ದೇಶಕ ಸ್ಥಾನದ ಮೇಲೆ ಹಲವರ ಕಣ್ಣು ನೆಟ್ಟಿದ್ದು, ಒತ್ತಡಗಳೂ ಹೆಚ್ಚುತ್ತಿವೆ.
ಪ್ರಸ್ತುತ ವೈದ್ಯಕೀಯ ವರಿಷ್ಠಾಧಿಕಾರಿ (ಮೆಡಿಕಲ್ ಸೂಪ ರಿಂಟೆಂಡೆಂಟ್) ಆಗಿರುವ ಡಾ.ಕೆ.ಎಚ್. ಶ್ರೀನಿವಾಸ್, ಹಿರಿಯ ಹೃದ್ರೋಗ ತಜ್ಞರಾದ ಡಾ. ನಾಗ ಮಣಿ, ಡಾ.ಪ್ರಸನ್ನಸಿಂಹ ಸೇರಿದಂತೆ ಹಲವರ ಹೆಸರುಗಳು ನಿರ್ದೇಶಕ ಹುದ್ದೆಗೆ ಕೇಳಿಬಂದಿತ್ತು. ಆದರೆ, ಮೈಸೂರಿನ ವೈದ್ಯಕೀಯ ಕಾಲೇಜಿನ ಸಾಮಾನ್ಯ ವೈದ್ಯಕೀಯ (ಜನರಲ್ ಮೆಡಿಸಿನ್) ವಿಭಾಗದಲ್ಲಿದ್ದ ವೈದ್ಯರೊಬ್ಬರು ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಜನರಲ್ ಮೆಡಿಸಿನ್ ವಿಭಾಗದಲ್ಲಿ ಮಾಡಿರುವ ತಮ್ಮ ಸೇವೆಯನ್ನೂ ಪರಿಗಣಿಸಿ ಜ್ಯೇಷ್ಠತೆಯ ಹಕ್ಕು ಸಾಧಿಸಿ ಬೆಂಗಳೂರು ಜಯದೇವ ಆಸ್ಪತ್ರೆ ನಿರ್ದೇಶಕ ಹುದ್ದೆಗೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ನಿರ್ದೇಶಕರ ನೇಮಕಕ್ಕೆ ಒತ್ತಡ: ಲೋಕಸಭೆ ಚುನಾವಣೆ ಸಮೀಪದಲ್ಲೇ ಇದೆಯಲ್ಲದೆ, ನೀತಿಸಂಹಿತೆ ಜಾರಿಯಿಂದ ನಿರ್ದೇಶಕ ಹುದ್ದೆಯ ನೇಮಕಾತಿ ಮತ್ತಷ್ಟು ಮುಂದೂಡಿಕೆ ಆಗಬಹುದು. ಸಂಸ್ಥೆಯ ಭವಿಷ್ಯ ಹಾಗೂ ರೋಗಿಗಳ ಹಿತದೃಷ್ಟಿಯಿಂದ ಅರ್ಹ ಹಿರಿಯರನ್ನು ಸಂಸ್ಥೆಗೆ ಪೂರ್ಣ ಪ್ರಮಾಣದ ನಿರ್ದೇಶಕರನ್ನಾಗಿ ನೇಮಿಸಬೇಕೆಂದು ಸರ್ಕಾರದ ಮೇಲೆ ಕೆಲವರು ಒತ್ತಡ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
■ ಉದಯವಾಣಿ ಸಮಾಚಾರ